ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಅಸ್ತಿತ್ವಕ್ಕೆ ಧಕ್ಕೆ ಬಂದರೆ ಮಾತ್ರ ಪರಮಾಣು ಶಸ್ತ್ರಾಸ್ತ್ರ ಬಳಕೆ: ರಷ್ಯಾ

|
Google Oneindia Kannada News

ಮಾಸ್ಕೋ, ಮಾರ್ಚ್ 29: ರಾಷ್ಟ್ರದ ಅಸ್ತಿತ್ವಕ್ಕೆ ಬೆದರಿಕೆ ಅಥವಾ ಧಕ್ಕೆ ಉಂಟಾದಾಗ ಮಾತ್ರ ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುತ್ತದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸೋಮವಾರ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಉಕ್ರೇನ್‌ ಮೇಲೆ ರಷ್ಯಾವು ಪರಮಾಣು ದಾಳಿ ನಡೆಸುವ ಭೀತಿಯ ನಡುವೆ ಈ ಹೇಳಿಕೆಯನ್ನು ನೀಡಿದ್ದಾರೆ.

"ನಾವು ಭದ್ರತಾ ಪರಿಕಲ್ಪನೆಯನ್ನು ಹೊಂದಿದ್ದೇವೆ, ಅದು ದೇಶದ ಅಸ್ತಿತ್ವಕ್ಕೆ ಬೆದರಿಕೆ ಉಂಟಾದಾಗ ಮಾತ್ರ, ನಮ್ಮ ದೇಶದ ಅಸ್ತಿತ್ವಕ್ಕೆ ಬೆದರಿಕೆಯನ್ನು ತೊಡೆದುಹಾಕಲು ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಹುದು ಮತ್ತು ನಿಜವಾಗಿ ಬಳಸುತ್ತೇವೆ," ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಎಚ್ಚರಿಕೆಯನ್ನು ನೀಡಿದ್ದಾರೆ.

ಹಿರೋಶಿಮಾ ಮಾರಣಹೋಮ: ಪರಮಾಣು ಶಸ್ತ್ರಾಸ್ತ್ರಗಳಿಂದ ಆಗುವ ಅನಾಹುತ ಒಂದೆರಡಲ್ಲ!ಹಿರೋಶಿಮಾ ಮಾರಣಹೋಮ: ಪರಮಾಣು ಶಸ್ತ್ರಾಸ್ತ್ರಗಳಿಂದ ಆಗುವ ಅನಾಹುತ ಒಂದೆರಡಲ್ಲ!

ರಷ್ಯಾದ ಪಡೆಗಳು ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಕೆಲವು ದಿನಗಳ ನಂತರ, ರಷ್ಯಾದ ಅಧ್ಯಕ್ಷ ಪುಟಿನ್ ಫೆಬ್ರವರಿ 28 ರಂದು ದೇಶವು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಪರಮಾಣು ಪಡೆಗಳನ್ನು ಹೆಚ್ಚಿನ ಎಚ್ಚರಿಕೆಯಲ್ಲಿ ಇರುವಂತೆ ತಿಳಿಸಿದ್ದು, ಇದು ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿತ್ತು.

We Will Use Nuclear Weapons Only if Country’s Existence Is Threatened Says Russia

ಈ ಹಿಂದೆಯೂ ಇದೇ ಬೆದರಿಕೆ ನೀಡಿದ್ದ ರಷ್ಯಾ

ಈ ಹಿಂದೆಯೂ ರಷ್ಯಾವು ಇದೇ ರೀತಿಯಲ್ಲಿ ಬೆದರಿಕೆ ನೀಡಿದೆ. ಉಕ್ರೇನ್ ಯುದ್ಧದ ಮಧ್ಯೆ ರಷ್ಯಾದ ಅಸ್ತಿತ್ವಕ್ಕೆ ಬೆದರಿಕೆ ಎದುರಾದ ಸಂದರ್ಭದಲ್ಲಿ ಮಾತ್ರ ಪರಿಮಾಣು ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವುದಾಗಿ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದರು.

"ದೇಶದ ಆಂತರಿಕ ಮತ್ತು ಬಾಹ್ಯ ಸುರಕ್ಷತೆಯೇ ನಮ್ಮ ಪರಿಕಲ್ಪನೆ ಆಗಿದೆ. ಜಾಗತಿಕ ಮಟ್ಟದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಯಾವಾಗ ಬಳಕೆ ಮಾಡಲಾಗುತ್ತದೆ ಎಂಬ ಕಾರಣಗಳನ್ನು ನೀವು ಓದಿಕೊಳ್ಳಿರಿ. ಒಂದು ವೇಳೆ ದೇಶದ ಅಸ್ತಿತ್ವಕ್ಕೆ ಬೆದರಿಕೆ ಎದುರಾದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಳಕೆ ಮಾಡಲಾಗುತ್ತದೆ," ಎಂದು ಎಚ್ಚರಿಸಿದ್ದಾರೆ.

ಪರಮಾಣು ಯುದ್ಧ ನಡೆಯುತ್ತಾ? ರಷ್ಯಾದಲ್ಲಿ ಎಷ್ಟಿದೆ ಪರಮಾಣು ಶಸ್ತ್ರಾಸ್ತ್ರ, ಬಾಂಬ್‌?ಪರಮಾಣು ಯುದ್ಧ ನಡೆಯುತ್ತಾ? ರಷ್ಯಾದಲ್ಲಿ ಎಷ್ಟಿದೆ ಪರಮಾಣು ಶಸ್ತ್ರಾಸ್ತ್ರ, ಬಾಂಬ್‌?

ಹಾಗೆಯೇ ಉಕ್ರೇನ್ ಪರವಾಗಿ ಯುನೈಟೆಡ್ ಸ್ಟೇಟ್ಸ್ ಮತ್ತು ನ್ಯಾಟೋ ರಾಷ್ಟ್ರಗಳು ಬೆಂಬಲವಾಗಿ ನಿಂತುಕೊಂಡರೂ ಹಿಂದೆ ಸರಿಯುವ ಮಾತಿಲ್ಲ. ಉಕ್ರೇನ್ ಬೆಂಬಲಿಸುವ ನೀವೂ ಸಹ ತಕ್ಕ ದಂಡ ನೀಡಬೇಕಾಗುತ್ತದೆ ಎನ್ನುವ ಮೂಲಕ ಪರಮಾಣು ಬಾಂಬ್ ದಾಳಿ ನಡೆಸುವ ಬಗ್ಗೆ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದರು.

ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ

ಸೋಮವಾರ ಸಂದರ್ಶನದಲ್ಲಿ, ಡಿಮಿಟ್ರಿ ಪೆಸ್ಕೋವ್ ಅವರು ಉಕ್ರೇನ್‌ನಲ್ಲಿ ರಷ್ಯಾದ 'ಕಾರ್ಯಾಚರಣೆ'ಯ ಯಾವುದೇ ಫಲಿತಾಂಶವು ಪರಮಾಣು ಶಸ್ತ್ರಾಸ್ತ್ರಗಳ ಬಳಕೆಗೆ ಕಾರಣವಾಗುವುದಿಲ್ಲ ಎಂದು ಹೇಳಿದರು. ಈ ನಡುವೆ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ನಡೆಯುತ್ತಿದೆ.

"ಕನಿಷ್ಠ ಗುರಿ ಮಾನವೀಯ ಸಮಸ್ಯೆಗಳನ್ನು ಪರಿಹರಿಸುವುದು, ಗರಿಷ್ಠ ಗುರಿ ಕದನ ವಿರಾಮವನ್ನು ತಲುಪುವುದು ಆಗಿದೆ," ಎಂದು ಉಕ್ರೇನ್‌ನ ವಿದೇಶಾಂಗ ಸಚಿವ ಕುಲೆಬಾ ಹೇಳಿದರು. ಉಕ್ರೇನ್ ಸಶಸ್ತ್ರ ಪಡೆಗಳು ರಷ್ಯಾದ ಪಡೆಗಳು ಇಂಧನ ಡಿಪೋಗಳನ್ನು ಗುರಿಯಾಗಿಸಿಕೊಂಡು ನಾಗರಿಕರನ್ನು ಒತ್ತೆಯಾಳಾಗಿ ತೆಗೆದುಕೊಳ್ಳುವ ಮೂಲಕ ಭಯಭೀತಗೊಳಿಸುವುದನ್ನು ಮುಂದುವರೆಸುತ್ತಿವೆ ಎಂದು ಹೇಳಿಕೊಂಡಿದೆ.

ರಷ್ಯಾ ಯಾವ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ?

ರಷ್ಯಾವು ವಿಶ್ವದಲ್ಲೇ ಅತಿ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯು ರಹಸ್ಯವಾಗಿದ್ದರೂ, ವಿಶ್ವದ 14,000 ಪರಮಾಣು ಶಸ್ತ್ರಾಸ್ತ್ರಗಳಲ್ಲಿ ಅರ್ಧಕ್ಕಿಂತ ಹೆಚ್ಚಿನದನ್ನು ರಷ್ಯಾ ಹೊಂದಿದೆ ಎಂದು ಭಾವಿಸಲಾಗಿದೆ. 7,000 ಕ್ಕೂ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳು ಆತಂಕಕಾರಿಯಾಗಿ ಹೆಚ್ಚಿನ ಅಂಕಿಅಂಶವಾಗಿದೆ. ಆದರೆ ರಾಷ್ಟ್ರದ ಪರಮಾಣು ಶಸ್ತ್ರಾಸ್ತ್ರ ಸಂಗ್ರಹವು ಒಂದು ಕಾಲದಲ್ಲಿ ಇನ್ನೂ ಹೆಚ್ಚಿತ್ತು. ಸೋವಿಯತ್ ಒಕ್ಕೂಟವು 1986 ರಲ್ಲಿ 45,000 ಪರಮಾಣು ಶಸ್ತ್ರಾಸ್ತ್ರ ಹೊಂದಿತ್ತು. 60 ರ ದಶಕದ ಆರಂಭದಲ್ಲಿ ಸೋವಿಯತ್ ಒಕ್ಕೂಟವು ಅಭಿವೃದ್ಧಿಪಡಿಸಿದ ತ್ಸಾರ್ ಬೊಂಬಾ ಇದುವರೆಗೆ ರಚಿಸಿದ ಮತ್ತು ಪರೀಕ್ಷಿಸಿದ ಅತ್ಯಂತ ಶಕ್ತಿಶಾಲಿ ಪರಮಾಣು ಅಸ್ತ್ರವಾಗಿದೆ. ಇದು ಮಾನವ ಇತಿಹಾಸದಲ್ಲಿ ಅತಿದೊಡ್ಡ ಮಾನವ ನಿರ್ಮಿತ ಸ್ಫೋಟಕ್ಕೆ ಕಾರಣವಾಗಿದೆ. ಇದು ಸುಮಾರು 50 ಮೆಗಾಟನ್‌ಗಳ ಅಂದಾಜು ಸ್ಫೋಟಕ ಶಕ್ತಿಯನ್ನು ಹೊಂದಿತ್ತು.

Recommended Video

ನಾವು ಯಾವತ್ತೇ ಕಪ್ ಗೆದ್ದರು ಅದು ABD ಗೆ ಸಮರ್ಪಣೆ! | Oneindia Kannada

English summary
Ukraine-Russia War: We Will Use Nuclear Weapons Only if Country’s Existence Is Threatened Says Russia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X