ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾಗೆ ಎಚ್ಚರಿಕೆ ಸಂದೇಶ ರವಾನಿಸಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

|
Google Oneindia Kannada News

ಕೀವ್, ಮಾರ್ಚ್ 7: ಉಕ್ರೇನ್ ಮೇಲೆ ರಷ್ಯಾ ನಡೆಸಿದ ಯುದ್ಧವನ್ನು ನಾವು ಎಂದಿಗೂ ಮರೆಯುವುದಿಲ್ಲ. ಯುದ್ಧವನ್ನು ನಡೆಸಿದ ಯಾರೊಬ್ಬರನ್ನೂ ಕ್ಷಮಿಸುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವು 12ನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ಯುದ್ಧದಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನೂ ನಾವು ಶಿಕ್ಷಿಸದೇ ಬಿಡುವುದಿಲ್ಲ ಎಂದು ಝೆಲೆನ್ಸ್ಕಿ ವಾರ್ನಿಂಗ್ ಕೊಟ್ಟಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಭಾಗಿಯಾದ ಎಲ್ಲರನ್ನೂ ಶಿಕ್ಷಿಸುವುದಾಗಿ ಹೇಳಿದ್ದಾರೆ.

Russia-Ukraine War Live Updates: ಉಕ್ರೇನ್‌ನಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾRussia-Ukraine War Live Updates: ಉಕ್ರೇನ್‌ನಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

ಉಕ್ರೇನ್ ನೆಲದಲ್ಲಿ ನಡೆಸಿದ ಯುದ್ಧದಲ್ಲಿ ನೂರಾರು ಮಹಿಳೆಯರು ಮತ್ತು ಪುಟ್ಟ ಮಕ್ಕಳು ಸಾವಿನ ಮನೆ ಸೇರಿದ್ದಾರೆ. ರಷ್ಯಾದ ರೌದ್ರಾವತಾರಕ್ಕೆ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆ ಕೆರಳಿ ಕೆಂಡವಾಗಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನೀಡಿರುವ ಸಂದೇಶದ ಕುರಿತು ಒಂದು ವರದಿಗಾಗಿ ಮುಂದೆ ಓದಿ.

We Will Punish Everyone Those Involved in Russia War, Not Forgive Anyone: President Zelensky

ರಷ್ಯಾ- ಉಕ್ರೇನ್ ನಡುವಿನ ಪ್ರಮುಖ ಬೆಳವಣಿಗೆಗಳು:

- ಉಕ್ರೇನ್ ನೆಲದಲ್ಲಿ ರಷ್ಯಾ ನಡೆಸುತ್ತಿರುವ ಉದ್ದೇಶಪೂರ್ವಕ ಕೊಲೆ ಆಗಿದೆ ಎಂದ ವೊಲೊಡಿಮಿರ್ ಝೆಲೆನ್ಸ್ಕಿ, ಸೋಮವಾರ ರಷ್ಯಾದ ಆಕ್ರಮಣ ಮತ್ತಷ್ಟು ತೀವ್ರಗೊಳ್ಳುವ ಬಗ್ಗೆ ಹೇಳಿದ್ದಾರೆ. "ನಮ್ಮ ನೆಲದಲ್ಲಿ ಯುದ್ಧ ನಡೆಸಲು ಕಾರಣರಾದ ಮತ್ತು ಯುದ್ಧ ನಡೆಸಿದವರಲ್ಲಿ ಯಾರೊಬ್ಬರನ್ನೂ ನಾವು ಮರೆಯುವುದಿಲ್ಲ, ಕ್ಷಮಿಸುವುದೂ ಇಲ್ಲ. ನಾವು ಎಲ್ಲರನ್ನೂ ಶಿಕ್ಷಿಸುತ್ತೇವೆ. ಈ ಭೂಮಿ ಮೇಲೆ ಸಮಾಧಿಯ ಹೊರತಾಗಿ ಬೇರೊಂದು ಶಾಂತಿಯುತ ಸ್ಥಳವಿಲ್ಲ," ಎಂದಿದ್ದಾರೆ.

- ಇಂದು ಉಕ್ರೇನಿಯನ್ ನಗರಗಳ ಮೇಲೆ ರಷ್ಯಾದ ಸೇನೆಯು ಭೂಮಾರ್ಗ, ವಾಯುಮಾರ್ಗ ಮತ್ತು ಜಲ ಮಾರ್ಗ ಮೂಲಕ ದಾಳಿ ನಡೆಸಿದ್ದು, ರಾಜಧಾನಿ ಕೀವ್ ಮೇಲೆ ಮತ್ತಷ್ಟು ತೀವ್ರತರ ದಾಳಿಗೆ ತಯಾರಿ ನಡೆಸುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದೆ. ಕದನ ವಿರಾಮವನ್ನು ಘೋಷಿಸಿದ ಎರಡನೇ ದಿನ ಮರಿಯೊಪೊಲ್ ನಗರ ತೊರೆಯಲು ಸಾಧ್ಯವಾಗದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇದರ ಮಧ್ಯೆ ಉಕ್ರೇನ್‌ನಲ್ಲಿ ನಾಗರಿಕರ ಮೇಲೆ ರಷ್ಯಾ ಸೇನೆಯು ಉದ್ದೇಶಪೂರ್ವಕವಾಗಿ ದಾಳಿ ನಡೆಸುವ ವರದಿಗಳ ಬಗ್ಗೆ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದ್ದಾರೆ.

- ರಷ್ಯಾ ಮತ್ತು ಉಕ್ರೇನ್ ನಡುವಿನ ಈ ಭೀಕರ ಯುದ್ಧಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಸಂಧಾನ ಸಭೆ ನಡೆಸಲಾಗುತ್ತದೆ. ಸೋಮವಾರ ಉಭಯ ರಾಷ್ಟ್ರಗಳ ಪ್ರತಿನಿಧಿಗಳ ಮಧ್ಯೆ ಮೂರನೇ ಹಂತದ ಸಂಧಾನ ಸಭೆ ನಡೆಸಲಾಗುತ್ತಿದೆ.

- ರಷ್ಯಾವನ್ನು ದಂಡಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಹಲವು ರಾಷ್ಟ್ರಗಳು ನಿರ್ಬಂಧಗಳನ್ನು ಹೇರಿವೆ. ರಷ್ಯಾದಿಂದ ಯುರೋಪ್ ರಾಷ್ಟ್ರಗಳಿಗೆ ಇಂಧನ ಆಮದು ಮಾಡಿಕೊಳ್ಳುವುದರ ಮೇಲೆ ನಿರ್ಬಂಧ ವಿಧಿಸುವ ಬಗ್ಗೆ ವಾಷಿಂಗ್ಟನ್ ಚರ್ಚಿಸುತ್ತಿದೆ.

- ನ್ಯಾಟೋ ಮಿತ್ರರಾಷ್ಟ್ರಗಳು ಇಲ್ಲಿಯವರೆಗೆ ಹಾರಾಟ ನಿರ್ಬಂಧ ವಲಯವನ್ನು ಸ್ಥಾಪಿಸುವಂತೆ ಉಕ್ರೇನ್‌ನ ಮನವಿಯನ್ನು ತಿರಸ್ಕರಿಸಿವೆ. ಯುಎಸ್ ಸೆನೆಟರ್ ಮಾರ್ಕೊ ರೂಬಿಯೊ ಅವರು ಪರಮಾಣು-ಶಸ್ತ್ರಸಜ್ಜಿತ ರಷ್ಯಾದ ವಿರುದ್ಧ "ಮೂರನೇ ಜಾಗತಿಕ ಯುದ್ಧಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಹಾರಾಟ ನಿರ್ಬಂಧ ವಲಯವನ್ನು ಸ್ಥಾಪಿಸಿದರೆ, ಯುರೋಪ್ ಮಾತ್ರವಲ್ಲದೆ ಇಡೀ ಪ್ರಪಂಚಕ್ಕೆ ಬೃಹತ್ ಮತ್ತು ದುರಂತ ಪರಿಣಾಮ ಬೀರಲಿವೆ," ಎಂದು ಹೇಳಿದ್ದಾರೆ.

English summary
We Will Punish Everyone those involved in Russia War, not forgive anyone: Ukrainian President Volodymyr Zelensky.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X