ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟ್ಟೋಣ ನಾವು ಹೊಸ ನಾಡೊಂದನು: ಡೊನಾಲ್ಡ್ ಟ್ರಂಪ್

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ನ್ಯೂಯಾರ್ಕ್, ನವೆಂಬರ್ 9: ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಆ ನಂತರ ಮೊದಲ ಬಾರಿಗೆ ತಮ್ಮ ಕನಸು, ಆಸೆ, ನಿರೀಕ್ಷೆಗಳನ್ನು ಹಂಚಿಕೊಂಡಿದ್ದಾರೆ. ಅವರ ಭಾಷಣದ ಪ್ರಮುಖ ಅಂಶಗಳನ್ನು ಇಲ್ಲಿ ಕೊಡಲಾಗಿದೆ. ಧನ್ಯವಾದ, ಎಲ್ಲರಿಗೂ ಧನ್ಯವಾದ. ನಿಮ್ಮೆಲ್ಲರನ್ನೂ ಕಾಯಿಸಿದ್ದಕ್ಕೆ ಕ್ಷಮೆ ಇರಲಿ. ಕಷ್ಟದ ವ್ಯವಹಾರವಾಗಿತ್ತು, ಕಷ್ಟದ್ದು. ಆದರೆ ಎಲ್ಲರಿಗೂ ಧನ್ಯವಾದ ಎಂದು ಮಾತಿಗೆ ಆರಂಭಿಸಿದವರು ಅಮೆರಿಕಾದಲ್ಲಿ ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ಜಯ ಗಳಿಸಿದ ಡೊನಾಲ್ಡ್ ಟ್ರಂಪ್.

ಈಗಷ್ಟೇ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಕರೆ ಮಾಡಿದ್ದರು. ನನ್ನನ್ನು ಅಭಿನಂದಿಸಿದರು. ಇದು ನಮ್ಮ ಗೆಲುವು. ನಾನು ಕೂಡ ಆಕೆಯನ್ನು ಮತ್ತು ಆಕೆ ಕುಟುಂಬವನ್ನು ಅಭಿನಂದಿಸಿದೆ. ತುಂಬ ಕಠಿಣವಾದ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಅಂದರೆ ತುಂಬ ದೀರ್ಘ ಕಾಲದ ಈ ಚುನಾವಣೆ ಹೋರಾಟದಲ್ಲಿ ಅವರು ತುಂಬ ಶ್ರಮ ಹಾಕಿದರು. ಆಕೆ ಈ ದೇಶಕ್ಕೆ ನೀಡಿದ ಕೊಡುಗೆಗೆ ಧನ್ಯವಾದ ಹೇಳಬೇಕು ಎಂದರು.[ಟ್ರಂಪ್ ಗೆಲುವು: ಟ್ವಿಟ್ಟರ್ ನಲ್ಲಿ ನೆಟ್ಟಿಗರ ವಾಗ್ದಾಳಿ]

ನಾನು ತುಂಬ ಪ್ರಾಮಾಣಿಕವಾಗಿ ಈ ಮಾತು ಹೇಳ್ತಿದೀನಿ. ಪ್ರತ್ಯೇಕತೆಯ ಗಾಯ ಅನುಭವಿಸುತ್ತಿದ್ದ ಅಮೆರಿಕಾಗೆ ಮುಲಾಮು ಹಚ್ಚುವ ಸಮಯ ಬಂದಿದೆ, ನಾವೆಲ್ಲರೂ ಒಟ್ಟಾಗಬೇಕು. ರಿಪಬ್ಲಿಕನ್ನರು, ಡೆಮಾಕ್ರಾಟ್ ಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು ಎಲ್ಲರೂ ಒಟ್ಟಾಗುವ ಸಮಯ ಇದು.[ವಿಜಯ ಪ್ರತಿ ಯಜ್ಞದ ಫಲ, ಡೊನಾಲ್ಡ್ ಟ್ರಂಪ್ ಜಯಭೇರಿ]

ಮಾರ್ಗದರ್ಶನ ಪಡೀತಿನಿ

ಮಾರ್ಗದರ್ಶನ ಪಡೀತಿನಿ

ನಾನು ಅಮೆರಿಕಾದ ಅಧ್ಯಕ್ಷನಾಗಲಿದ್ದೇನೆ ಎಂಬ ಸಂಗತಿಯನ್ನು ನಮ್ಮ ಮಣ್ಣಿನ ಎಲ್ಲ ನಾಗರಿಕರ ಎದುರು ಹೇಳುವಂಥ ಸಮಯ ಬಂದಿದೆ. ಮತ್ತಿದು ನನಗೆ ತುಂಬ ಮುಖ್ಯವಾದದ್ದು. ನಾವೆಲ್ಲರೂ ಒಟ್ಟಾಗಿ ಸಾಗುವುದಕ್ಕೆ, ಕೆಲಸ ಮಾಡುವುದಕ್ಕೆ, ನಮ್ಮ ದೇಶವನ್ನು ಒಟ್ಟುಗೂಡಿಸುವುದಕ್ಕೆ ಈ ಹಿಂದೆ ನನಗೆ ಬೆಂಬಲ ಸೂಚಿಸದವರು, ಅದರಲ್ಲಿ ಕೆಲವರ ಬಳಿಗೆ ಮಾರ್ಗದರ್ಶನ ಪಡೆಯುವುದಕ್ಕೆ ಬರ್ತೀನಿ. ನಾನು ಮುಂಚಿನಿಂದಲೂ ಅದೇ ಹೇಳ್ತಿದೀನಿ, ನಮ್ಮದು ಚುನಾವಣಾ ಪ್ರಚಾರವಲ್ಲ. ಇದೊಂದು ಚಳವಳಿ. ಈ ದೇಶವನ್ನು ಪ್ರೀತಿಸುವ, ಉಜ್ವಲ ಹಾಗೂ ಇದಕ್ಕಿಂತ ಉತ್ತಮ ಭವಿಷ್ಯವನ್ನು ಎದುರು ನೋಡುತ್ತಿರುವ ಹತ್ತಾರು ಲಕ್ಷ ಜನರ ಮತ್ತು ಅವರಾ ಕುಟುಂಬದ ಚಳವಳಿ ಇದು.

ಇದೊಂದು ಚಳವಳಿ

ಇದೊಂದು ಚಳವಳಿ

ಈ ಚಳವಳಿಯಲ್ಲಿ ಎಲ್ಲ ಧರ್ಮ, ಹಿನ್ನೆಲೆ, ನಂಬಿಕೆ, ಜನಾಂಗದವರು ಪಾಲ್ಗೊಂಡಿದ್ದಾರೆ. ಅವರ ನಿರೀಕ್ಷೆ ನಮ್ಮ ಸರಕಾರ ಜನರಿಗೆ ಸೇವೆ ಮಾಡಬೇಕು.

ದೇಶದ ಪುನರ್ ನಿರ್ಮಾಣ

ದೇಶದ ಪುನರ್ ನಿರ್ಮಾಣ

ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುವ ಮೂಲಕ ನಮ್ಮ ದೇಶದ ಪುನರ್ ನಿರ್ಮಾಣ ಮಾಡಬೇಕು. ನಮ್ಮ ಕನಸುಗಳನ್ನು ನವೀಕರಿಸಬೇಕು. ನನ್ನ ಇಡೀ ಜೀವನವನ್ನು ವ್ಯಾಪಾರ-ವ್ಯವಹಾರದಲ್ಲೇ ಕಳೆದಿದ್ದೀನಿ. ಜಗತ್ತಿನ ವಿವಿಧ ದೇಶಗಳ ಸತ್ವಯುತ ಯೋಜನೆಗಳು ಹಾಗೂ ಜನರನ್ನು ನೋಡಿಕೊಂಡು ಬಂದಿದ್ದೀನಿ.

ಅಗಾಧ ಸತ್ವವಿದೆ

ಅಗಾಧ ಸತ್ವವಿದೆ

ಅದು ನಮ್ಮ ದೇಶಕ್ಕಾಗಿ ಈಗ ನಾವು ಮಾಡಬೇಕಾಗಿರೋದು. ಇಲ್ಲಿ ಅಗಾಧವಾದ ಸತ್ವವಿದೆ. ನನಗೆ ಈ ದೇಶದ ಬಗ್ಗೆ ಚೆನ್ನಾಗಿ ಗೊತ್ತಿದೆ. ಪ್ರತಿ ಅಮೆರಿಕನ್ ಗೂ ತನ್ನ ಶಕ್ತಿ ಏನು ಎಂಬುದು ಗೊತ್ತಾಗುವುದಕ್ಕೆ ಒಂದು ಅವಕಾಶ ಸಿಕ್ಕಿದೆ. ಈ ಹಿಂದೆ ಮರೆತಿದ್ದ ನಮ್ಮ ದೇಶದ ಮಹಾನ್ ವ್ಯಕ್ತಿಗಳು ಇನ್ನು ಮುಂದೆ ಹಾಗೆ ಮರೆಯೋದಿಕ್ಕೆ ಅವಕಾಶ ಕೊಡಲ್ಲ.

ಮತ್ತೆ ಕಟ್ಟಬೇಕಿದೆ

ಮತ್ತೆ ಕಟ್ಟಬೇಕಿದೆ

ನಮ್ಮ ಹೆದ್ದಾರಿಗಳು, ಸೇತುವೆ, ವಿಮಾನ ನಿಲ್ದಾಣ, ಶಾಲೆ, ಆಸ್ಪತ್ರೆ.. ಎಲ್ಲವನ್ನೂ ಪುನರ್ ನಿರ್ಮಿಸೋಣ. ನಮ್ಮ ಮೂಲಸೌಕರ್ಯ ವ್ಯವಸ್ಥೆಯನ್ನು ಮತ್ತೆ ಕಟ್ಟಬೇಕಿದೆ. ಇದರಲ್ಲಿ ಹತ್ತಾರು ಲಕ್ಷ ಅಮೆರಿಕನ್ನರು ಕೆಲಸ ಮಾಡಲಿದ್ದಾರೆ. ನಮ್ಮ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳೋಣ. ಈ ಹದಿನೆಂಟು ತಿಂಗಳ ಪ್ರಯಾಣದಲ್ಲಿ ಕಷ್ಟದಲ್ಲಿರುವ ಹಲವರನ್ನು ನೋಡಿದ್ದೀನಿ. ಅಂಥವರೊಂದಿಗೆ ಸಮಯ ಕಳೆಯಲು ಅವಕಾಶ ಸಿಕ್ಕಿದ್ದು ನನ್ನ ಪಾಲಿಗೆ ದೊಡ್ಡ ಗೌರವ.

ಆರ್ಥಿಕತೆ ದ್ವಿಗುಣ

ಆರ್ಥಿಕತೆ ದ್ವಿಗುಣ

ನಮ್ಮ ಬಳಿ ಅದ್ಭುತವಾದ ಯೋಜನೆಗಳಿವೆ. ನಮ್ಮ ಆರ್ಥಿಕತೆಯನ್ನು ದ್ವಿಗುಣಗೊಳಿಸೋಣ ಮತ್ತು ಎಲ್ಲ ದೇಶಗಳೊಂದಿಗಿನ ಸಂಬಂಧವನ್ನು ಇನ್ನೂ ಗಟ್ಟಿಯಾಗಿಸೋಣ.

English summary
Working together we will begin the urgent task of rebuilding our nation and renewing the American dream, Said by Donald Trump, who wins America presidential election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X