• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ, ಪಾಕಿಸ್ತಾನವನ್ನು ಅಣ್ವಸ್ತ್ರ ದೇಶಗಳೆಂದು ನಾವು ಪರಿಗಣಿಸಲ್ಲ: ಚೀನಾ

|

ಚೀನಾವು ಭಾರತ ಹಾಗೂ ಪಾಕಿಸ್ತಾನವನ್ನು ಅಣ್ವಸ್ತ್ರ ಹೊಂದಿದ ದೇಶಗಳು ಎಂದು ಎಂದಿಗೂ ಗುರುತಿಸಿಯೇ ಇಲ್ಲ ಎಂದು ಆ ದೇಶದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಲು ಕಾಂಗ್ ಶುಕ್ರವಾರ ಹೇಳಿದ್ದಾರೆ. ಇದರ ಜತೆಗೆ ಚೀನಾವು ನಾನ್-ಪೊಲಿಫಿರೇಷನ್ ಆಫ್ ನ್ಯೂಕ್ಲಿಯರ್ ವೆಪನ್ಸ್ (ಎನ್ ಪಿಟಿ) ಒಪ್ಪಂದಕ್ಕೆ ದೃಢವಾಗಿದೆ ಹಾಗೂ ಬದ್ಧವಾಗಿದೆ ಎಂದಿದ್ದಾರೆ.

ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

ಕೊರಿಯಾ ದೇಶವನ್ನು ಸಹ ಭಾರತ ಹಾಗೂ ಪಾಕಿಸ್ತಾನದ ರೀತಿಯಲ್ಲೇ ಅಣ್ವಸ್ತ್ರ ಹೊಂದಿದ ರಾಷ್ಟ್ರವಾಗಿ ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಈ ರೀತಿ ಉತ್ತರ ನೀಡಿದ್ದಾರೆ.

ಉಗ್ರರನ್ನು ಬೆಂಬಲಿಸದಂತೆ ಯುದ್ಧಸನ್ನದ್ಧ ಪಾಕಿಸ್ತಾನಕ್ಕೆ ಚೀನಾ ಎಚ್ಚರಿಕೆ

ಪುಲ್ವಾಮಾ ಉಗ್ರಗಾಮಿ ದಾಳಿ ಬಗ್ಗೆ ವಿಶ್ವಾಸಾರ್ಹ ಸಾಕ್ಷ್ಯ ನೀಡಿದರೆ ಜಂಟಿ ವಿಚಾರಣೆ ನಡೆಸುವುದರ ಬಗ್ಗೆ ಭಾರತಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೀಡಿದ ಆಹ್ವಾನಕ್ಕೆ ಲು ಕಾಂಗ್ ಮೆಚ್ಚುಗೆ ಸೂಚಿಸಿದ್ದಾರೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತ ಹಾಗೂ ಪಾಕಿಸ್ತಾನ ದೇಶಗಳು ತಮ್ಮ ಮಧ್ಯದ ಸಮಸ್ಯೆಗಳನ್ನು ಸಕಾರಾತ್ಮಕ ಕ್ರಮಗಳ ಮೂಲಕ ನಿವಾರಿಸಿಕೊಳ್ಳಬೇಕು. ಮಾತುಕತೆಗೆ ಮುಂದಾಗಬೇಕು. ಇಬ್ಬರೂ ಒಟ್ಟಾಗಿ ಈ ಭಾಗದಲ್ಲಿ ಶಾಂತಿ ಸ್ಥಾಪನೆಗೆ ಹಾಗೂ ಸ್ಥಿರತೆಗೆ ಬದ್ಧವಾಗಬೇಕು. ಈ ಎಲ್ಲ ಕ್ರಮಕ್ಕೆ ಆ ದೇಶಗಳು ಮುಂದಾಗುವುದಾದರೆ ಚೀನಾ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ನಡೆಯದ ಚೀನಾ ಆಟ: ಉಗ್ರ ದಾಳಿಗೆ ಕಟುವಾದ ಖಂಡನೆ

ಇದರಿಂದ ಎರಡೂ ದೇಶಗಳ ಹಿತಾಸಕ್ತಿ ರಕ್ಷಣೆ ಆಗುತ್ತದೆ. ಇದನ್ನೇ ಚೀನಾ ಕಾಣುವ ಭರವಸೆ ಹೊಂದಿದೆ. ಭಾರತೀಯ ವಾಯು ಸೇನೆಯ ಪೈಲಟ್ ವಿಂಗ್ ಕಮ್ಯಾಂಡರ್ ಅಭಿನಂದನ್ ರ ಬಿಡುಗಡೆ ಮಾಡಿರುವುದು ಉತ್ತಮ ಕ್ರಮ. ಪರಸ್ಪರ ನೆರೆ ದೇಶಗಳಾಗಿ ಭಾರತ ಹಾಗೂ ಪಾಕಿಸ್ತಾನ ದೂರ ಹೋಗಲು ಆಗಲ್ಲ ಎಂದು ಅವರು ಹೇಳಿದ್ದಾರೆ.

ಈಗಿನ ಉದ್ವಿಗ್ನ ಸ್ಥಿತಿ ಏರ್ಪಟ್ಟಿರುವುದು ಎರಡೂ ದೇಶಗಳ ಪ್ರಾಥಮಿಕ ಹಿತಾಸಕ್ತಿ ಕಾಯ್ದುಕೊಳ್ಳುವ ಸಲುವಾಗಿ. ಎರಡೂ ದೇಶಗಳ ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ಮೂಲಕ ಸಮಸ್ಯೆ ನಿವಾರಿಸಿಕೊಳ್ಳುವುದನ್ನು ಚೀನಾ ಬಯಸುತ್ತದೆ ಎಂದು ಲು ಕಾಂಗ್ ಹೇಳಿದ್ದಾರೆ.

English summary
China Foreign Ministry spokesperson Lu Kang on Friday said that the country never recognised India and Pakistan as the nuclear weapon states. Lu Kang also said that China's position on the Treaty on the Non-proliferation of Nuclear Weapons (NPT) remains firm and unchanged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X