ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ಹರಡುವ ಮುನ್ನವೇ ಚೀನಾವು ಲಸಿಕೆ ಸಿದ್ಧಪಡಿಸಿತ್ತೇ?

|
Google Oneindia Kannada News

ಕಳೆದ ಒಂದು ವರ್ಷದಿಂದ ಕೊರೊನಾ ಸೋಂಕು ಇಡೀ ವಿಶ್ವವನ್ನೇ ಅಲ್ಲೋಲಕಲ್ಲೋಲ ಪಡಿಸಿದೆ. ಈ ನಡುವೆ ಚೀನಾದ ಲ್ಯಾಬ್‌ನಿಂದಲೇ ಕೊರೊನಾ ಸೋಂಕು ಹುಟ್ಟಿಕೊಂಡಿದೆ ಎನ್ನುವ ಆರೋಪ ಇದುವರೆಗೂ ಚಾಲ್ತಿಯಲ್ಲಿದೆ.

ಆದರೆ ಈಗ ವಿಜ್ಞಾನಿಗಳು ಇನ್ನೂ ಕೆಲವು ಮಾಹಿತಿ ನೀಡಿದ್ದು, ಎಲ್ಲರನ್ನೂ ಬೆರಗಾಗುವಂತೆ ಮಾಡಿದೆ. ಚೀನಾ ಸರ್ಕಾರದ ಆದೇಶದಂತೆ ಅಲ್ಲಿನ ವಿಜ್ಞಾನಿಗಳು ವೈರಸ್‌ನ್ನು ಜಗತ್ತಿಗೆ ಬಿಟ್ಟರು ಎಂಬ ಆರೋಪ ಕೇಳಿಬರುತ್ತಲೇ ಇದೆ. ಈ ಕೊರೊನಾ ಸೋಂಕಿಗೆ ಇದುವರೆಗೆ 37 ಲಕ್ಷದ 54 ಸಾವಿರ ಮಂದಿ ಬಲಿಯಾಗಿದ್ದು ಜಗತ್ತಿನಾದ್ಯಂತ 17.44 ಕೋಟಿ ಜನರಿಗೆ ಸೋಂಕು ತಗುಲಿದೆ.

ವುಹಾನ್‌ ಲ್ಯಾಬ್‌ನಿಂದ ಕೊರೊನಾ ಸೋರಿಕೆಯಾಗಿರಬಹುದು: ಯುಎಸ್‌ ಅಧ್ಯಯನದ ಅಂತಿಮ ತೀರ್ಮಾನವುಹಾನ್‌ ಲ್ಯಾಬ್‌ನಿಂದ ಕೊರೊನಾ ಸೋರಿಕೆಯಾಗಿರಬಹುದು: ಯುಎಸ್‌ ಅಧ್ಯಯನದ ಅಂತಿಮ ತೀರ್ಮಾನ

ಕುತೂಹಲಕಾರಿಯಾಗಿ, ಮಾಧ್ಯಮಗಳ ಒಂದು ವರದಿಯಂತೆ, ದೆಹಲಿಯ ಕುಸುಮಾ ಸ್ಕೂಲ್ ಆಫ್ ಬಯೋಲಾಜಿಕಲ್ ಸೈನ್ಸಸ್‌ನ ಭಾರತೀಯ ಜೀವಶಾಸ್ತ್ರಜ್ಞರು ದೆಹಲಿಯ ಸಾರ್ಸ್ -ಕೋವಿಡ್-2 ವೈರಸ್‌ನ ಸ್ಪೈಕ್ ಪ್ರೋಟೀನ್‌ನಲ್ಲಿ ನಾಲ್ಕು ಜೀನ್ ಅಳವಡಿಕೆಗಳನ್ನು ಪತ್ತೆ ಮಾಡಿದ್ದಾರೆ ಎಂದು ವರದಿಯಾಗಿದೆ.

'ಮಾನವ ಜೀವಕೋಶಗಳಿಗೆ ಲಗತ್ತಿಸಲು ಮತ್ತು ದೇಹಕ್ಕೆ ಪ್ರವೇಶ ಪಡೆಯಲು ಯೋಜನೆ ಮಾಡಿದ್ದಿರಬಹುದು. ಇದು ಜನವರಿ 2020 ರ ಆರಂಭದ ದಿನಗಳು. ಆದಾಗ್ಯೂ, ಅಧ್ಯಯನವನ್ನು ಕಳೆದ ವರ್ಷ ಫೆಬ್ರವರಿ 2 ರಂದು ಹಿಂಪಡೆಯಲಾಯಿತು' ಎಂದು ವೈರಾಣು ಶಾಸ್ತ್ರಜ್ಞ ಜಾಕೊಬ್ ಹೇಳಿದ್ದಾರೆ.

 ಕೊರೊನಾ ಹರಡುವ ಮೊದಲೇ ಲಸಿಕೆ ಸಿದ್ಧವಾಗಿತ್ತು

ಕೊರೊನಾ ಹರಡುವ ಮೊದಲೇ ಲಸಿಕೆ ಸಿದ್ಧವಾಗಿತ್ತು

''ಕೊರೊನಾ ಸೋಂಕು ಹರಡುವ ಮೊದಲೇ ಚೀನಾ ಅದಕ್ಕೆ ಲಸಿಕೆಯನ್ನು ಕೂಡ ಅಭಿವೃದ್ಧಿಪಡಿಸಿತ್ತು. ಅಂದರೆ ಚೀನಾದ ವುಹಾನ್ ಪ್ರಯೋಗಾಲಯದಿಂದ ಬಿಟ್ಟ ವೈರಸ್ಸನ್ನು ಎದುರಿಸಲು ಅದಕ್ಕೆ ಲಸಿಕೆಯನ್ನು ಕೂಡ ಮೊದಲೇ ಅಭಿವೃದ್ಧಿಪಡಿಸಿಕೊಂಡಿತ್ತು ಎಂದು ವೆಲ್ಲೂರಿನ ಕ್ರಿಸ್ತಿಯನ್ ವೈದ್ಯಕೀಯ ಕಾಲೇಜಿನ ಪ್ರಾಯೋಗಿಕ ವೈರಾಣುಶಾಸ್ತ್ರಜ್ಞ, ಮಾಜಿ ಪ್ರೊಫೆಸರ್ ಡಾ ಟಿ ಜಾಕೊಬ್ ಜಾನ್ ಹೇಳಿದ್ದಾರೆ.

 ಚೀನಾದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದ್ದು ಹೇಗೆ?

ಚೀನಾದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದ್ದು ಹೇಗೆ?

ಮೊದಲೇ ಲಸಿಕೆ ಕಂಡುಹಿಡಿದಿದ್ದರಿಂದ ಸೋಂಕಿನ ಆರಂಭದ ದಿನದಲ್ಲಿಯೇ ಚೀನಾಕ್ಕೆ ಸಮರ್ಥವಾಗಿ ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗಿರಬಹುದು ಎಂದು ಜಾಕೊಬ್ ಹೇಳಿದ್ದಾರೆ.

 ಲಸಿಕೆ ಪರವಾನಗಿ

ಲಸಿಕೆ ಪರವಾನಗಿ

ಸಾಂಕ್ರಾಮಿಕ ರೋಗವು ಸಂಭವಿಸಿದ ಎರಡು ತಿಂಗಳ ನಂತರ ಅಂದರೆ ಫೆಬ್ರವರಿ 24, 2020 ರ ಹೊತ್ತಿಗೆ ಚೀನಾದ ಯುವ ವಿಜ್ಞಾನಿ ಸಾರ್ಸ್ ಕೋವಿಡ್-2 ಲಸಿಕೆ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ ಉದಾಹರಣೆಯನ್ನು ಅವರು ಉಲ್ಲೇಖಿಸಿದ್ದಾರೆ. ಕೇವಲ ಎರಡು ತಿಂಗಳಲ್ಲಿ ಲಸಿಕೆ ಹಾಕಲು ಕೆಲಸ ಮಾಡುವುದು ತುಂಬಾ ಮುಂಚಿನದು. ಅವರು ಕನಿಷ್ಠ ಒಂದು ವರ್ಷದ ಹಿಂದೆಯೇ ಪ್ರಾರಂಭಿಸಿರಬೇಕು ಎಂದು ಡಾ ಜಾನ್ ತಮ್ಮ ವಾದ ಮಂಡಿಸುತ್ತಾರೆ. ಈ ಯುವ ವಿಜ್ಞಾನಿ ಈಗ ಮೃತಪಟ್ಟಿದ್ದಾರೆ. ಈ ವಿಷಯದಲ್ಲಿ ಹಲವು ಲೋಪದೋಷಗಳಿವೆ. ಇಲ್ಲಿ ಚೀನಾ ಏನೋ ರಹಸ್ಯ ಮುಚ್ಚಿಡುತ್ತಿದೆ ಎನಿಸುತ್ತಿದೆ, ಹೇಗೆಂದರೆ ಏನಾದರೂ ಮಹಾಪರಾಧ ಮಾಡಿ ವಿಷಯವನ್ನು ಮುಚ್ಚಿಟ್ಟಂತೆ ಎಂದು ಡಾ ಜಾಕೊಬ್ ಜಾನ್ ಹೇಳುತ್ತಾರೆ.

 ಇದುವರೆಗೆ ಚೀನಾದಲ್ಲಿ ಎಷ್ಟು ಮಂದಿಗೆ ಸೋಂಕು ತಗುಲಿದೆ?

ಇದುವರೆಗೆ ಚೀನಾದಲ್ಲಿ ಎಷ್ಟು ಮಂದಿಗೆ ಸೋಂಕು ತಗುಲಿದೆ?

ವಿಶ್ವದಲ್ಲಿಯೇ ಅತಿ ಹೆಚ್ಚು 140 ಕೋಟಿ ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಇದುವರೆಗೆ ಪತ್ತೆಯಾಗಿದ್ದು 91 ಸಾವಿರ 300 ಕೊರೊನಾ ಪ್ರಕರಣಗಳು ಮಾತ್ರ. 2019ರ ಡಿಸೆಂಬರ್ ನಂತರ ಅಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 4 ಸಾವಿರದ 636, ಕೊರೊನಾ ಸಕ್ರಿಯ ಪ್ರಕರಣದಲ್ಲಿ ವಿಶ್ವದಲ್ಲಿ ಈಗ ಚೀನಾ 98ನೇ ಸ್ಥಾನದಲ್ಲಿದೆ.

 ಪ್ರಯೋಗಾಲಯದಿಂದ ವೈರಸ್ ಸೋರಿಕೆ

ಪ್ರಯೋಗಾಲಯದಿಂದ ವೈರಸ್ ಸೋರಿಕೆ

ಹೀಗಿರುವಾಗ ಚೀನಾದ ವುಹಾನ್ ಪ್ರಯೋಗಾಲಯದಿಂದ ವೈರಸ್ ಸೋರಿಕೆ ಬಗ್ಗೆ ರಹಸ್ಯವಿದೆ ಎಂದು ನನಗನಿಸುತ್ತದೆ, ಚೀನಾದ ಕೋವಿಡ್-19 ಸೋಂಕಿನ ರೀತಿ ಬೇರೆ ದೇಶಗಳಂತಲ್ಲ. ಚೀನಾ ಸರ್ಕಾರ ಏನೋ ರಹಸ್ಯವಾಗಿ ಮುಚ್ಚಿಡುತ್ತಿದೆ ಎಂದು ಅನಿಸುತ್ತಿದೆ, ಇಲ್ಲವೇ ಅಲ್ಲಿನ ಪರಿಸ್ಥಿತಿ ಭಿನ್ನವಾಗಿದೆ, ಅಥವಾ ಚೀನಾ ಮೊದಲೇ ಈ ವೈರಸ್ ಎದುರಿಸಲು ಸಿದ್ದತೆ ಮಾಡಿಕೊಂಡಿತ್ತು ಎಂದು ಅನಿಸುತ್ತಿದೆ, ನಾವು ಕಣ್ಣಿಗೆ ಕಂಡದ್ದೇ ಅಂತಿಮವಲ್ಲ ಎಂದರು.

English summary
While opinions are building in favour of the Wuhan Laboratory-origin theory of SARS-CoV-2 virus that triggered a pandemic, killing 37.54 lakh people and infecting 17.44 crore worldwide, an eminent Indian virologist has raised the flag on the possibility of China having developed the vaccine in advance to be prepared in case of the virus outbreak or a leak -- an indicator of the deadly virus being engineered in the lab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X