ಆಂತರಿಕ ವಲಯದವರಿಂದಲೇ ವ್ಲಾಡಿಮಿರ್ ಪುಟಿನ್ ಹತ್ಯೆ: ಝೆಲೆನ್‌ಸ್ಕಿ ಬಿಚ್ಚಿಟ್ಟ ಭಯಾನಕ ಮಾಹಿತಿ ಏನು?
ಆಂತರಿಕ ವಲಯದಲ್ಲಿ ಗುರುತಿಸಿಕೊಂಡವರೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನು ಯಾರು? ಕಾರಣವೇನು? ಇಲ್ಲಿದೆ ವರದಿ, ವಿವರ ತಿಳಿಯಿರಿ
ಮಾಸ್ಕೋ, ಫೆಬ್ರವರಿ 27: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಜಗತ್ತಿನಾದ್ಯಂತ ವೈರಿಗಳಿದ್ದಾರೆ. ಅಮೆರಿಕ, ಬ್ರಿಟನ್ ಸೇರಿದಂತೆ ಯುರೋಪಿನ ಬಹುತೇಕ ರಾಷ್ಟ್ರಗಳು ಪುಟಿನ್ ಅವರನ್ನು ವೈರಿಯೆಂದೇ ಪರಿಗಣಿಸಿವೆ. ಉಕ್ರೇನ್ ವಿರುದ್ಧ ಯುದ್ಧವನ್ನು ಆರಂಭಿಸಿದ ನಂತರವಂತೂ ಈಡೀ ಜಗತ್ತೇ ವ್ಲಾಡಿಮಿರ್ ಪುಟಿನ್ ವಿರುದ್ಧ ನಿಂತಿದೆ. ಆದರೂ, ಆತಂಕಗೊಳ್ಳದ ಪುಟಿನ್ ಉಕ್ರೇನ್ ಯುದ್ಧವನ್ನು ಮುಂದುವರಿಸಿದ್ದಾರೆ.
ಪುಟಿನ್ ಅವರ ಬಗ್ಗೆ ಹಲವಾರು ಊಹಾಪೋಹಗಳು ಈಗಾಗಲೇ ಕೇಳಿಬಂದಿವೆ. ಪುಟನ್ ಅವರ ಬದುಕು ಅಪಾಯದಲ್ಲಿದೆ ಎಂಬ ವರದಿಗಳಾಗಿವೆ. ತಮ್ಮದೇ ದೇಶದಲ್ಲಿ ಪುಟಿನ್‌ಗೆ ಬದ್ಧ ವೈರಿಗಳಿದ್ದಾರೆ. ಪ್ರಜಾಪ್ರಭುತ್ವದ ಮೂಲಕ ಆಯ್ಕೆಯಾದ ಪುಟಿನ್ ಈ ಸರ್ವಾಧಿಕಾರಿಯಾಗಿ ಬದಲಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ಕಾರಣಕ್ಕಾಗಿಯೇ ಎಲ್ಲರೂ ಪುಟಿನ್ ವಿರುದ್ಧ ತಿರುಗಿ ಬಿದ್ದಿರುವುದು.

ಈಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಯಾನಕ ಮಾಹಿತಿಯೊಂದನ್ನು ನೀಡಿದ್ದಾರೆ. ಇದು ಜಗತ್ತನ್ನು ಬೆಚ್ಚಿಬೀಳಿಸಿದೆ. 'ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಆಂತರಿಕ ವಲಯದಲ್ಲಿರುವವರೇ ಹತ್ಯೆ ಮಾಡಲಿದ್ದಾರೆ' ಎಂದು ಹೇಳಿದ್ದಾರೆ. ನ್ಯೂಸ್‌ವೀಕ್‌ನಲ್ಲಿನ ವರದಿಯ ಪ್ರಕಾರ, ಸಾಕ್ಷ್ಯಚಿತ್ರವೊಂದರಲ್ಲಿ ಈ ಹೇಳಿಕೆಗಳನ್ನು ಝೆಲನ್‌ಸ್ಕಿ ನೀಡಿದ್ದಾರೆ.
ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಒಂದು ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶುಕ್ರವಾರ ಈ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಗಿದೆ ಎಂದು ನ್ಯೂಸ್‌ವೀಕ್ ತಿಳಿಸಿದೆ. ರಷ್ಯಾದ ಅಧ್ಯಕ್ಷರ ನಾಯಕತ್ವದಲ್ಲಿ 'ದುರ್ಬಲತೆಯ' ಅವಧಿಯು ಬರಲಿದೆ ಎಂದು ಝೆಲನ್‌ಸ್ಕಿ ತಿಳಿಸಿದ್ದಾರೆ. ಅವರ ಆಪ್ತ ಸಹಾಯಕರು ಅವರ ವಿರುದ್ಧ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ ಎಂದೂ ಝೆಲನ್‌ಸ್ಕಿ ಮಾಹಿತಿ ನೀಡಿದ್ದಾರೆ.

'ಪುಟಿನ್ ಅವರ ಆಡಳಿತದ ದುರ್ಬಲತೆಯನ್ನು ರಷ್ಯಾ ಜನರು ಅನುಭವಿಸುವ ಕ್ಷಣಗಳು ಖಂಡಿತವಾಗಿಯೂ ಬರಲಿವೆ. ತದನಂತರ ಅವರ ಆಂತರಿಕ ವಲಯದ ಸಹವರ್ತಿಗಳೇ ಅವರ ಹತ್ಯೆಗೆ ಸಂಚು ರೂಪಿಸಲಿದ್ದಾರೆ. ಕೊಲೆಗಾರನನ್ನು ಕೊಲ್ಲಲು ಅವರು ಕಾರಣವನ್ನು ಕಂಡುಕೊಳ್ಳುತ್ತಾರೆ. ಈ ಕೆಲಸವು ಕಂಡಿತವಾಗಿಯೂ ನಡೆಯಲಿದೆಯೇ? ಹೌದು. ಯಾವಾಗ? ನನಗೆ ಗೊತ್ತಿಲ್ಲ,' ಎಂದು ಉಕ್ರೇನಿಯನ್ ಅಧ್ಯಕ್ಷರು ಹೇಳಿದ್ದಾರೆ.
ಪುಟಿನ್ ಅವರ ಆಂತರಿಕ ವಲಯದಲ್ಲಿ ಹುಟ್ಟಿರುವ ಹತಾಶೆಯ ಬಗ್ಗೆ ರಷ್ಯಾದಲ್ಲಿ ವರದಿಗಳು ಪ್ರಕಟಗೊಂಡಿವೆ. ವಾಷಿಂಗ್ಟನ್ ಪೋಸ್ಟ್ ಇತ್ತೀಚೆಗೆ ರಷ್ಯಾದ ಅಧ್ಯಕ್ಷರ ನಿಕಟ ಮಿತ್ರರಾಷ್ಟ್ರಗಳು ಅವರೊಂದಿಗೆ ಹೆಚ್ಚು ಹತಾಶೆಗೊಂಡಿವೆ ಎಂದು ಹೇಳಿತ್ತು. ಯುದ್ಧಭೂಮಿಯಲ್ಲಿನ ವೀಡಿಯೊಗಳು ತಮ್ಮ ಸೈನಿಕರು ದೂರು ನೀಡುವುದು ಮತ್ತು ಅಳುತ್ತಿರುವುದನ್ನ ತೋರಿಸಿದ ನಂತರ ಈ ಹತಾಶೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಕ್ರಿಮಿಯನ್ ಪರ್ಯಾಯ ದ್ವೀಪವು ಉಕ್ರೇನಿಯನ್ ನಿಯಂತ್ರಣಕ್ಕೆ ಮರಳುತ್ತದೆ. ಇದು ಯುದ್ಧದ ಅಂತ್ಯದ ಭಾಗವಾಗಿದೆ ಎಂದು ಝೆಲೆನ್‌ಸ್ಕಿ ಭಾನುವಾರ ಹೇಳಿದ್ದಾರೆ.
'ಇದು ನಮ್ಮ ಭೂಮಿ, ನಮ್ಮ ಜನರು, ನಮ್ಮ ಇತಿಹಾಸ. ನಾವು ಉಕ್ರೇನ್‌ನ ಪ್ರತಿಯೊಂದು ಮೂಲೆಗೂ ಉಕ್ರೇನಿಯನ್ ಧ್ವಜವನ್ನು ಹಿಂತಿರುಗಿಸುತ್ತೇವೆ' ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.












Click it and Unblock the Notifications