ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುತ್ತುವರಿದ ಉಕ್ರೇನಿಗರು, ಪಲಾಯನಗೈದ ರಷ್ಯನ್ನರು- ಅಣ್ವಸ್ತ್ರ ಹಾಕಿ ಎಂದ ಚೆಚೆನ್ಯಾ ಲೀಡರು

|
Google Oneindia Kannada News

ಮಾಸ್ಕೋ, ಅ. 2: ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಆರಂಭವಾಗಿ ಇಷ್ಟು ತಿಂಗಳಾದರೂ ಯಾರು ಮೇಲುಗೈ ಸಾಧಿಸಿದ್ದಾರೆ ಎಂಬುದೇ ಗೊತ್ತಾಗದಷ್ಟು ಗೋಜಲಾಗಿದೆ. ಒಂದೆರಡು ವಾರದಲ್ಲಿ ಇಡೀ ಉಕ್ರೇನ್ ಅನ್ನು ರಷ್ಯಾ ನುಂಗಿ ಹಾಕುತ್ತದೆ ಎಂದು ಎಲ್ಲರೂ ಭಾವಿಸಿದ್ದರೂ ಎಲ್ಲರ ನಿರೀಕ್ಷೆ ತಲೆಕೆಳಗಾಗಿಸುವಂತೆ ಮುಂದುವರಿಯುತ್ತಿದೆ.

ಮೊನ್ನೆ ಮೊನ್ನೆ ಉಕ್ರೇನ್‌ನ ನಾಲ್ಕು ಪ್ರದೇಶಗಳನ್ನು ವಶಪಡಿಸಿಕೊಂಡೆನೆಂದು ಘೋಷಿಸಿದ್ದ ರಷ್ಯಾ ಇದೀಗ ಲೈಮನ್ ಎಂಬ ನಗರದಿಂದ ಕಾಲ್ಕಿತ್ತು ಹೋಗಬೇಕಾದ ಸಂದರ್ಭ ಬಂದಿದೆ ಎನ್ನಲಾಗಿದೆ.

ಉಕ್ರೇನಿನ ನಾಲ್ಕು ಪ್ರದೇಶಗಳನ್ನು ವಶಪಡಿಸಿಕೊಂಡ ರಷ್ಯಾಉಕ್ರೇನಿನ ನಾಲ್ಕು ಪ್ರದೇಶಗಳನ್ನು ವಶಪಡಿಸಿಕೊಂಡ ರಷ್ಯಾ

ಉಕ್ರೇನ್‌ನ ಪೂರ್ವಭಾಗದಲ್ಲಿರುವ ಲೈಮನ್ ಪ್ರದೇಶ ರಷ್ಯಾ ಸೈನಿಕರ ಹಿಡಿತದಲ್ಲಿತ್ತು. ಅದರೆ, ಉಕ್ರೇನ್ ಸೇನಾಪಡೆಗಳು ಈ ಭಾಗವನ್ನು ಸುತ್ತುವರಿದಿವೆ ಎಂಬ ವರ್ತಮಾನ ಸಿಗುತ್ತಿದ್ದಂತೆಯೇ ರಷ್ಯನ್ನರು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾರೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.

Vladimir Putins Ally Suggests Nuclear Response From Russia To Ukraines Advance in Lyman Town

ಡೋನೆಸ್ಕ್ ಸೇರಿದಂತೆ ನಾಲ್ಕು ಪ್ರದೇಶಗಳನ್ನು ರಷ್ಯಾ ಪಶಪಡಿಸಿಕೊಂಡಿದೆ ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೊನ್ನೆಯಷ್ಟೇ ಘೋಷಿಸಿದ್ದರು. ಈಗ ರಷ್ಯಾ ಸೈನಿಕರು ಕಾಲ್ಕಿತ್ತಿರುವ ಲೈಮನ್ ನಗರವು ಇದೇ ಡೋನೆಸ್ಕ್ ಪ್ರದೇಶದಲ್ಲಿದೆ.

ಪಶ್ಚಿಮದಿಂದ ಭಾರತದಲ್ಲಿ ಲೂಟಿ: ವಾಡ್ಲಿಮಿರ್‌ ಪುಟಿನ್ಪಶ್ಚಿಮದಿಂದ ಭಾರತದಲ್ಲಿ ಲೂಟಿ: ವಾಡ್ಲಿಮಿರ್‌ ಪುಟಿನ್

ರಷ್ಯಾ ನೀಡಿದ ಹೇಳಿಕೆ

ಲೈಮನ್ ಪಟ್ಟಣದಿಂದ ರಷ್ಯಾ ಸೈನಿಕರು ಹೊರಬಿದ್ದಿರುವ ವಿಚಾರವನ್ನು ರಷ್ಯಾ ರಕ್ಷಣಾ ಪಡೆ ಒಪ್ಪಿಕೊಂಡಿದೆ.

"ಸುತ್ತವರಿಯುವ ಅಪಾಯ ಇರುವುದರಿಂದ ಮಿತ್ರ ಪಡೆಗಳು ಲೈಮನ್‌ನಿಂದ ಹೊರಬಂದು ಬೇರೆ ಆಯಕಟ್ಟಿನ ಜಾಗಕ್ಕೆ ಹೋಗಿವೆ" ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಆದರೆ, ಉಕ್ರೇನ್ ಸೈನಿಕರು ಲೈಮನ್ ಪಟ್ಟಣವನ್ನು ಸುತ್ತುವರಿದಿವೆ ಎಂದು ರಷ್ಯಾ ಒಪ್ಪಿಕೊಂಡಿಲ್ಲ, ಆದರೆ, ಸುತ್ತುವರಿಯು ಅಪಾಯ ಇದೆ ಎಂಬುದನ್ನು ತಿಳಿಸಿದೆ.

ಇದಕ್ಕೆ ಮೊದಲು ಲೈಮನ್ ನಗರದಲ್ಲಿರುವ ಸಾವಿರಾರು ರಷ್ಯನ್ ಸೇನಾ ಪಡೆಗಳನ್ನು ಸುತ್ತುವರಿದಿದ್ದೇವೆ. ಪಟ್ಟಣದ ಒಳಗೆ ಕಾಲಿಟ್ಟಿದ್ದೇವೆ ಎಂದು ಉಕ್ರೇನ್ ಸೇನಾ ಪಡೆ ಹೇಳಿಕೆ ನೀಡಿತ್ತು. ಆ ನಂತರ ಮೌನವಾಗಿದ್ದ ರಷ್ಯಾ ಕೆಲ ಗಂಟೆಗಳ ಬಳಿಕ ತಮ್ಮ ಸೈನಿಕರು ಹೊರಹೋಗಿರುವುದನ್ನು ಖಚಿಪಡಿಸಿದ್ದಾರೆ.

Vladimir Putins Ally Suggests Nuclear Response From Russia To Ukraines Advance in Lyman Town

ಅಣು ಅಸ್ತ್ರ ಹಾಕಿ ಎಂದ ಮಿತ್ರ ನಾಯಕ

ಇದೇ ವೇಳೆ, ಲೈಮನ್ ಪಟ್ಟಣದಿಂದ ರಷ್ಯನ್ ಸೇನಾಪಡೆಗಳು ಹೊರಹೋದ ಘಟನೆ ಬಗ್ಗೆ ರಷ್ಯಾದ ಮಿತ್ರರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಕಡಿಮೆ ತೀವ್ರತೆಯ ಅಣ್ವಸ್ತ್ರವನ್ನು ಉಪಯೋಗಿಸಿ ಉಕ್ರೇನಿಗರಿಗೆ ಪಾಠ ಕಲಿಸಬೇಕೆಂದು ಚೆಚೆನ್ಯಾದ ನಾಯಕ ರಮಜಾನ್ ಕಡಿರೋವ್ ಹೇಳಿದ್ದಾರೆ.

"ನನ್ನ ವೈಯಕ್ತಿಕ ಅಭಿಪ್ರಾಯ ಹೇಳುವುದಾದರೆ, ಗಡಿಭಾಗಗಳಲ್ಲಿ ರಷ್ಯನ್ ಮಿಲಿಟರಿ ಆಡಳಿತ ಘೋಷಿಸಬೇಕು. ಕಡಿಮೆ ತೀವ್ರತೆಯ ಪರಮಾಣು ಶಸ್ತ್ರಗಳನ್ನು ಬಳಸಬೇಕು" ಎಂದು ಟೆಲಿಗ್ರಾಂನಲ್ಲಿ ಕಡಿರೋವ್ ಬರೆದಿದ್ದಾರೆ.

ಚೆಚೆನ್ಯಾ ನಾಯಕ ರಮಜಾನ್ ಕಡಿರೋವ್ ತನ್ನನ್ನು ತಾನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಬಂಟ ಎಂದು ಹೇಳಿಕೊಳ್ಳುತ್ತಾರೆ.

ಉಕ್ರೇನ್ ಪಡೆಯ ವಕ್ತಾರರ ಪ್ರಕಾರ ಲೈಮನ್ ಪಟ್ಟಣದಲ್ಲಿ ರಷ್ಯಾದ ಸುಮಾರು 5 ಸಾವಿರ ಸೈನಿಕರಿದ್ದರು. ಉಕ್ರೇನ್ ಸೇನೆ ಈಗ ಈ ಪಟ್ಟಣವನ್ನು ಮರಳಿ ವಶಕ್ಕೆ ತೆಗೆದುಕೊಂಡಿದೆ. ಲೈಮನ್‌ನ ಕೆಲ ಜಾಗಗಳಲ್ಲಿ ಉಕ್ರೇನ್ ಸೈನಿಕರು ಈಗಾಗಲೇ ತಮ್ಮ ರಾಷ್ಟ್ರಧ್ವಜಗಳನ್ನು ಹಾರಿಸಿದ್ದಾರೆ.

"ಅಕ್ಟೋಬರ್ 1. ನಾನು ನಮ್ಮ ಬಾವುಟ ಹಾರಿಸಿದ್ದು, ಇದು ನಮ್ಮ ನೆಲ ಎಂದು ಸ್ಥಾಪಿಸಿದ್ದೇವೆ. ಲೈಮನ್ ಈಗ ಉಕ್ರೇನ್ ಆಗುತ್ತಿದೆ" ಎಂದು ಉಕ್ರೇನ್ ಸೈನಿಕನೊಬ್ಬ ಹೇಳಿರುವ ವಿಡಿಯೋವೊಂದು ಬಿಡುಗಡೆಯಾಗಿದೆ.

ರಷ್ಯಾಗೆ ದೊಡ್ಡ ಹಿನ್ನಡೆ?

ಲೈಮನ್ ಪಟ್ಟಣ ಕೈತಪ್ಪಿರುವುದು ರಷ್ಯಾಗೆ ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ. ಡೋನೆಸ್ಕ್ ಪ್ರದೇಶದ ಉತ್ತರ ಭಾಗಗಳಲ್ಲಿ ಕಾರ್ಯಾಚರಣೆಗಳನ್ನು ನಡೆಸಲು ರಷ್ಯಾಗೆ ಲೈಮನ್ ಒಂದು ರೀತಿಯಲ್ಲಿ ಸಾರಿಗೆ ಮತ್ತು ಸರಬರಾಜು ವ್ಯವಸ್ಥೆಯ ಕೇಂದ್ರದಂತಿತ್ತು. ಈಗ ಲೈಮನ್ ಅನ್ನು ಸುಪರ್ದಿಗೆ ತೆಗೆದುಕೊಂಡಿರುವ ಉಕ್ರೇನ್ ಸೇನಾ ಪಡೆಗಳಿಗೆ ಲುಹಾಂಸ್ಕ್ ಪ್ರದೇಶಕ್ಕೆ ಮುಂದಡಿ ಇಡಲು ಸಾಧ್ಯವಾಗುತ್ತದೆ.

"ಲೈಮನ್ ಮರಳಿಪಡೆದದ್ದು ಬಹಳ ಮುಖ್ಯ. ಡೊಂಬಾಸ್ ಪ್ರದೇಶವನ್ನು ವಶಪಡಿಸಿಕೊಳ್ಳಬಹುದು. ಮತ್ತು ಕ್ರಮಿನ್ನಾ ಮತ್ತು ಸಿಯೆವಿಯೆರೋ ಡೋನೆಸ್ಕ್ ಪ್ರದೇಶಗಳಿಗೂ ನುಗ್ಗಬಹುದು. ಇದರಿಂದ ಮಾನಸಿಕವಾಗಿ ಬಲ ಸಿಕ್ಕಂತಾಗುತ್ತದೆ," ಎಂದು ಉಕ್ರೇನ್ ಮಿಲಿಟರಿಯ ವಕ್ತಾರರು ಅಬಿಪ್ರಾಯಪಟ್ಟಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Russian troops are said to have abandoned Lyman city which was part of 4 regions that Putin proclaimed to have annexed. Losing control of Lyman may prove costly to Russia, says some reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X