ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀಸಾ ವಂಚನೆ ಪ್ರಕರಣ ದೇವಯಾನಿಗೆ ಸಿಕ್ತು ರಿಲೀಫ್

By Mahesh
|
Google Oneindia Kannada News

ನ್ಯೂಯಾರ್ಕ್, ಮಾ.13: ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಅವರ ಜತೆ ಅಮಾನವೀಯವಾಗಿ ನಡೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ತನ್ನ ಧೋರಣೆ ಬದಲಾಯಿಸಿಕೊಂಡ ಬೆನ್ನಲ್ಲೇ ದೇವಯಾನಿಗೆ ಮತ್ತೆ ರಿಲೀಫ್ ಸಿಕ್ಕಿದೆ. ವೀಸಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಯಾನಿ ಕೋಬ್ರಾಗೇಡ್ ಅವರ ವಿರುದ್ಧದ ಪ್ರಕರಣವನ್ನು ಸ್ಥಳೀಯ ನ್ಯಾಯಾಲಯ ರದ್ದು ಮಾಡಿದೆ.

ಅಮೆರಿಕ ಇಲಾಖೆ ಸಮ್ಮತಿಸಿರುವ ಹಿನ್ನೆಲೆಯಲ್ಲಿ ಜನವರಿ 8ರಿಂದ ರಾಜತಾಂತ್ರಿಕ ವಿನಾಯಿತಿ ಅನ್ವಯವಾಗುತ್ತದೆ. ಹೀಗಾಗಿ, ಆಕೆಯ ಮೇಲೆ ಹೊರಿಸಿರುವ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಜಿಲ್ಲಾ ನ್ಯಾಯಾಧೀಶ ಶಿರಾ ಸ್ಕೈಂಡ್ಲಿನ್ ಹೇಳಿದ್ದಾರೆ. ದೇವಯಾನಿ ವಿರುದ್ಧದ ಎಲ್ಲ ವಾರೆಂಟ್ ಗಳನ್ನು ಹಿಂಪಡೆಯಲಾಗಿದೆ.

ಮನೆಗೆಲಸದಾಕೆಗೆ ವೀಸಾನಲ್ಲಿ ಸೂಚಿಸಿದಷ್ಟು ಸಂಬಳ ನೀಡುತ್ತಿಲ್ಲವೆಂಬ ಆರೋಪದ ಹಿನ್ನೆಲೆಯಲ್ಲಿ ದೇವಯಾನಿ ವಿರುದ್ಧ ಕೇಸ್ ದಾಖಲಾಗಿತ್ತು. ರಸ್ತೆ ಮಧ್ಯದಲ್ಲಿ ದೇವಯಾನಿಯನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ವಿವಸ್ತ್ರಗೊಳಿಸಿದ್ದರು. ಅಷ್ಟೇ ಅಲ್ಲದೇ, ಮಾದಕ ವ್ಯಸನಿಗಳ ಸೆಲ್ ನಲ್ಲಿ ಕೂಡಿ ಹಾಕಿ ಅಪಮಾನ ಮಾಡಿದ್ದರು. ಅಮೆರಿಕದ ಈ ದುರ್ವರ್ತನೆ ವಿರುದ್ಧ ಭಾರತದಲ್ಲಿ ತೀವ್ರ ಆಕ್ರೋಶ ಕೇಳಿಬಂದಿತ್ತು.

ಭಾರತದಲ್ಲಿರುವ ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳಿಗೂ ರಾಜತಾಂತ್ರಿಕ ವಿನಾಯಿತಿ ಪಡಿತಗೊಳಿಸಿ ತಿರುಗೇಟು ನೀಡಿತ್ತು. ಇದರಿಂದ ಎಚ್ಚೆತ್ತಿರುವ ಅಮೆರಿಕ, ಭಾರತದ ಜೊತೆಗಿನ ಉತ್ತಮ ಸಂಬಂಧ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ದೇವಯಾನಿ ವಿರುದ್ಧದ ಕೇಸ್ ರದ್ದುಮಾಡಿದೆ ಎಂದು ಹೇಳಲಾಗುತ್ತಿದೆ.

Visa fraud case: US court dismisses criminal charges against Devyani Khobragade

ದೇವಯಾನಿ ವಿರುದ್ಧ ದಾಖಲಿಸಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು ಹಾಗೂ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವ ಕಮಲ್ ನಾಥ್ ಭಾರತ ಒತ್ತಾಯಿಸಿದೆ. ಆದರೆ, ಕಾನೂನು ಪ್ರಕಾರ ವಿಚಾರಣೆ ನಡೆಯಲೇಬೇಕು ಎಂದು ಅಮೆರಿಕ ಹೇಳಿತ್ತು. ದೇವಯಾನಿಗೆ ಒದಗಿಸಿದ್ದ ರಾಜತಾಂತ್ರಿಕ ರಕ್ಷಣೆಯನ್ನ (ಇಮ್ಯೂನಿಟಿ) ಭಾರತ ಹಿಂಪಡೆಯುವುದಿಲ್ಲವೆಂಬುದು ಖಾತ್ರಿಯಾದ ಮೇಲೆ ಅಮೆರಿಕವು ದೇವಯಾನಿಗೆ ಸ್ವದೇಶಕ್ಕೆ ಮರಳಲು ಅವಕಾಶ ನೀಡಿತ್ತು.

ಸಂಗೀತಾ ರಿಚರ್ಡ್ ಎಂಬ ಭಾರತ ಮೂಲದ ಮಹಿಳೆಯನ್ನ ದೇವಯಾನಿ ಮನೆಗೆಲಸ ಮತ್ತು ಮಕ್ಕಳನ್ನ ನೋಡಿಕೊಳ್ಳಲು ಕೆಲಸಕ್ಕೆ ಇಟ್ಟುಕೊಂಡಿದ್ದರು. ಜೂನ್ 2012ರಿಂದ ನವೆಂಬರ್ 2013ರವರೆಗೆ ತಿಂಗಳವರೆಗೆ ದೇವಯಾನಿ ಅವರ ಮನೆಯಲ್ಲಿ ಕೆಲಸ ಮಾಡಿದ ಸಂಗೀತಾ, ವೀಸಾ ದಾಖಲೆಯಲ್ಲಿ ತಿಂಗಳಿಗೆ 4.500 ಡಾಲರ್ ಸಂಬಳ( ಗಂಟೆಗೆ 3.31 ಡಾಲರ್ ಲೆಕ್ಕದಂತೆ) ಕೊಡುತ್ತಿದ್ದೇನೆ ಎಂದು ದೇವಯಾನಿ ಉಲ್ಲೇಖಿಸಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.1999 IFS ಬ್ಯಾಚಿನ ಅಧಿಕಾರಿಯಾಗಿರುವ 39 ವರ್ಷ ವಯಸ್ಸಿನ ದೇವಯಾನಿ ಕೋಬ್ರಾಗಡೆ ಅವರು ಭಾರತ ಸರ್ಕಾರದಿಂದ ವಾರ್ಷಿಕವಾಗಿ 100,000 ಡಾಲರ್ ಪಡೆಯುತ್ತಿದ್ದಾರೆ. ನ್ಯೂಯಾರ್ಕಿನಲ್ಲಿ ಐಷಾರಾಮಿ ವಸತಿ ಗೃಹ ಹೊಂದಿದ್ದಾರೆ.

English summary
A New York court on Wednesday dismissed criminal charges against diplomat Devyani Khobragade that had precipitated a crisis in relations between India and the US. 'Khobragade's motion to dismiss the indictment on the ground of diplomatic immunity is granted,' said judge Shira A. Scheindlin, directing the court to close the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X