ವಿಡಿಯೋ: ಫ್ಯಾಂಟಾ ಬಾಟಲಿ ಮುಚ್ಚುಳ ತೆರೆಯಲು 2 ಜೇನು ನೊಣಗಳ ಸಾಹಸ

ಫ್ಯಾಂಟಾಬಾಟಲಿ ಮುಚ್ಚುಳವನ್ನು ತೆಗೆಯಲು ಎರಡು ಜೇನು ನೊಣಗಳು ಸಾಹಸ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.

ಈ ವಿಡಿಯೋವನ್ನು ಬ್ರೆಜಿಲ್‌ ದೇಶದ ಸಾವೊ ಪಾಲೊದಲ್ಲಿ ಸೆರೆಹಿಡಿಯಲಾಗಿದೆ, ವಿಡಿಯೋದಲ್ಲಿ ಬಾಟಲಿಯ ಎರಡೂ ಬದಿಯಲ್ಲೂ ಒಂದೊಂದು ಜೇನು ನೊಣ ಕೂತಿದೆ. ಎರಡೂ ಕರೆಯಿಂದಲೂ ಬಾಟಲಿ ಮುಚ್ಚುಳ ತೆಗೆಯಲು ಕಸರತ್ತು ಮಾಡುತ್ತಿರುವ ದೃಶ್ಯ ಇದಾಗಿದೆ.

ಬಳಿಕ ಕೆಲವು ಸೆಕೆಂಡುಗಳ ನಂತರ ಅವು ತಮ್ಮ ಕೆಲಸದಲ್ಲಿ ಯಶಸ್ಸು ಗಳಿಸಿವೆ, ನಂಬಲು ಅಸಾಧ್ಯವಾದರೂ ಇದು ಸತ್ಯ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

Viral Video: 2 Honeybees Work Together To Open A Fanta Bottle, Internet Can’t Bee-live It

ಈ ವಿಡಿಯೋವನ್ನು ಸೆರೆ ಹಿಡಿದಿರುವವರು ಟ್ವಿಟ್ಟರ್ ಮೂಲಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ನಾನು ಊಟ ಮಾಡುತ್ತಿದ್ದ ಸಮಯದಲ್ಲಿ ಈ ವಿಡಿಯೋವನ್ನು ತೆಗೆದಿದ್ದೆ, ಗ್ರಾಹಕರಿಂದ ನನಗೆ ಸೋಡಾ ದೊರಕಿತ್ತು. ಆದರೆ, ಆ ಸೋಡಾ ಕೆಲವೇ ನಿಮಿಷಗಳಲ್ಲಿ ಈ ಜೇನು ನೊಣಗಳು ಕದ್ದಿವೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಮುಂದಿನ ವರ್ಷಗಳಲ್ಲಿ ನಂತರ ಜೇನು ನೊಣಗಳೇ ಇಡೀ ವಿಶ್ವವನ್ನು ನಡೆಸುವ ಪರಿಸ್ಥಿತಿ ಉಂಟಾದರೆ, ಅವುಗಳು ನಡೆಸುವ ಶಾಲೆಗಳಲ್ಲಿ ಯುವ ಜೇನು ನೊಣಗಳಿಗೆ ತಮ್ಮ ಪ್ರಭೇದದ ವಿಕಾಸದ ಕುರಿತು ಈ ವಿಡಿಯೋವನ್ನು ಉದಾಹರಣೆಗೆ ನೀಡಬಹುದು ಎಂದು ನೆಟ್ಟಿಗರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+