ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ವಿಶ್ವದ ಮೊದಲ ಏರ್‌ಬೋರ್ನ್ ಫುಡ್ ಡೆಲಿವರಿ ಬಾಯ್

|
Google Oneindia Kannada News

ದುಬೈ ಅಕ್ಟೋಬರ್ 06: ವೇಗದ ಬದುಕಿನಲ್ಲಿ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವುದು ಈಗ ಅಭ್ಯಾಸವಾಗಿಬಿಟ್ಟಿದೆ. ಮನೆಗೆ ಆಹಾರವನ್ನು ಆರ್ಡರ್ ಮಾಡುವ ಪ್ರವೃತ್ತಿ ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿದೆ. ನಿರಂತರವಾಗಿ ಬೆಳೆಯುತ್ತಿರುವ ಈ ಉದ್ಯಮದಲ್ಲಿ, ಕಂಪನಿಗಳು ಈಗ ಆಹಾರವನ್ನು ವಿತರಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ. ಕೆಲವು ಕಂಪನಿಗಳು ರೋಬೋಟ್‌ಗಳು ಮತ್ತು ಡ್ರೋನ್‌ಗಳ ಮೂಲಕ ಆಹಾರವನ್ನು ತಲುಪಿಸುತ್ತಿವೆ. ಈ ವಿಚಾರದಲ್ಲಿ ಸೌದಿ ಅರೇಬಿಯಾ ಒಂದು ಹೆಜ್ಜೆ ಮುಂದೆ ಹೋಗಿದೆ. ಇಲ್ಲಿ ಡೆಲಿವರಿ ಬಾಯ್ ಗಾಳಿಯಲ್ಲಿ ಹಾರಿ ಆಹಾರ ತಲುಪಿಸಲಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೊದಲ್ಲಿ, ಡೆಲಿವರಿ ಏಜೆಂಟ್ ಆಹಾರವನ್ನು ತಲುಪಿಸಲು ಜೆಟ್‌ಪ್ಯಾಕ್‌ನಲ್ಲಿ ಹಾರುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಸೌದಿ ಅರೇಬಿಯಾದಿಂದ ಬಂದಿದೆ ಎಂದು ವರದಿಯಾಗಿದೆ. ಈ ವಿಡಿಯೊವನ್ನು ಡೈಲಿ ಲೌಡ್ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಜೊತೆಗೆ ಈ ವೀಡಿಯೊವನ್ನು 4 ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೊದಲ್ಲಿ, ವಿತರಣಾ ವ್ಯಕ್ತಿ ಆಹಾರವನ್ನು ತಲುಪಿಸಲು ಬಹುಮಹಡಿ ಕಟ್ಟಡಕ್ಕೆ ಹಾರುತ್ತಿರುವುದನ್ನು ಕಾಣಬಹುದು.

ಕಟ್ಟಡದ ಬಾಲ್ಕನಿಗೆ ಹಾರುವ ಫುಡ್ ಡೆಲಿವರಿ ಬಾಯ್

ಡೆಲಿವರಿ ಏಜೆಂಟ್ ಜೆಟ್‌ಪ್ಯಾಕ್ ಧರಿಸಿ ಕಟ್ಟಡಕ್ಕೆ ಹಾರುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹೆಲ್ಮೆಟ್ ಹಾಗೂ ಇತರೆ ಸುರಕ್ಷತಾ ಪರಿಕರಗಳನ್ನು ಧರಿಸಿದ್ದಾನೆ. ಅವರು ಸೌದಿ ಅರೇಬಿಯಾದಲ್ಲಿ ಹೆಚ್ಚಿನ ಎತ್ತರದಲ್ಲಿ ಆಹಾರವನ್ನು ತಲುಪಿಸುತ್ತಿದ್ದಾರೆ. ಏಜೆಂಟ್ ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಸರಕುಗಳನ್ನು ತಲುಪಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ನೋಡಿದ ಜನರು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ವಿಡಿಯೋ ನೋಡಿ ಮೂಡಿದ ಹತ್ತಾರು ಪ್ರಶ್ನೆಗಳು

ವಿಡಿಯೋ ನೋಡಿ ಮೂಡಿದ ಹತ್ತಾರು ಪ್ರಶ್ನೆಗಳು

ಈ ವಿಡಿಯೊವನ್ನು ಹಂಚಿಕೊಳ್ಳುವಾಗ, ಡೈಲಿ ಲೌಡ್ ಸೌದಿ ಅರೇಬಿಯಾದಲ್ಲಿ ಆಹಾರವನ್ನು ವಿತರಿಸಿದ ಮೊದಲ ಹಾರುವ ವ್ಯಕ್ತಿ ಎಂದು ಹೇಳಲಾಗಿದೆ. ಬಹುಶಃ ಇದು ಆಹಾರವನ್ನು ತಲುಪಿಸುವ ವಿಶ್ವದ ಮೊದಲ ಏರ್‌ಬೋರ್ನ್ ಫುಡ್ ಡೆಲಿವರಿ ಬಾಯ್ ಆಗಿರಬಹುದು. ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಈ ವೇಳೆ ನೆಟ್ಟಿಗರು ತೀವ್ರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬ ನೆಟ್ಟಿಗ ಬರೆದಿದ್ದಾರೆ, "ಇದು ಹೇಗೆ ಲಾಭದಾಯಕ ಎಂದು ನಾನು ಕೇಳಲು ಹೊರಟಿದ್ದೆ, ಬಳಿಕ ಇದು ದುಬೈ ಎಂದು ನಾನು ನೆನಪಿಸಿಕೊಂಡೆ'. ಇದು ಪ್ರಣಕ್ಕೆ ಅಪಾಯಕಾರಿ ಎಂದು ಮತ್ತೊಬ್ಬರು ಬರೆದಿದ್ದಾರೆ.

ವೇಗವಾಗಿ ಬೆಳೆಯುತ್ತಿರುವ ಆಹಾರ ವಿತರಣಾ ಉದ್ಯಮ

ವೇಗವಾಗಿ ಬೆಳೆಯುತ್ತಿರುವ ಆಹಾರ ವಿತರಣಾ ಉದ್ಯಮ

ಇನ್ನೊಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ, ಈ ಮನುಷ್ಯನು ಈ ರೀತಿ ಹಾರಲು $7.25 ಪಡೆಯುತ್ತಾನೆ. ಅಂದರೆ ಗಂಟೆಗೆ ಸುಮಾರು 860 ರೂಪಾಯಿಗಳು. ಜಾಗತಿಕ ಆಹಾರ ವಿತರಣಾ ಉದ್ಯಮವು ವಾರ್ಷಿಕವಾಗಿ 10 ಶೇಕಡಾ ದರದಲ್ಲಿ ಬೆಳೆಯುತ್ತಿದೆ ಮತ್ತು ಈ ಮಾರುಕಟ್ಟೆಯ ಗಾತ್ರವು 2030 ರ ವೇಳೆಗೆ $365 ಶತಕೋಟಿಯನ್ನು ತಲುಪುವ ನಿರೀಕ್ಷೆಯಿದೆ.

ಗಾಳಿಯಲ್ಲಿ ಹಾರಿ ಫುಡ್ ಡೆಲಿವರಿ

ಗಾಳಿಯಲ್ಲಿ ಹಾರಿ ಫುಡ್ ಡೆಲಿವರಿ

ಭಾರತದಲ್ಲಿ ಆಹಾರ ವಿತರಣಾ ಉದ್ಯಮ ವೇಗವಾಗಿ ಬೆಳೆಯುತ್ತಿದೆ. ಈ ವರೆಗೆ ರಸ್ತೆ, ಲಿಫ್ಟ್, ಸ್ಟೆಪ್ಸ್‌ ಮೂಲಕ ಮನೆಗಳಿಗೆ ವಿತರಣಾಕಾರರು ಆಹಾರ ವಿತರಣೆ ಮಾಡುತ್ತಿದ್ದರು. ಆದರೀಗ ಗಾಳಿಯಲ್ಲಿ ಹಾರುವ ಮೂಲಕ ಬಹುಮಹಡಿಗಳಿಗೆ ಫುಡ್ ಡೆಲಿವರಿ ಮಾಡುವುದು ನಿಜಕ್ಕೂ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ. ಮುಂದೊಂದು ದಿನ ಇದು ಭಾರತದಲ್ಲೂ ಪ್ರಯೋಗವಾದರೂ ಆಶ್ಚರ್ಯಪಡುವಂತಿಲ್ಲ.

English summary
A video of a delivery boy flying in the air to deliver food in Saudi Arabia has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X