ವಿಡಿಯೋ: ವಿಲ್ ಸ್ಮಿತ್-ಕ್ರಿಸ್ ರಾಕ್ ಪಂಚ್ ಟ್ಯಾಟೋ
ಹಾಸ್ಯನಟ ಕ್ರಿಸ್ ರಾಕ್‌ಗೆ ಪ್ರಸಕ್ತ ಸಾಲಿನ 'ಅತ್ಯುತ್ತಮ ನಟ' ಆಸ್ಕರ್ ಪ್ರಶಸ್ತಿ ವಿಜೇತ ವಿಲ್ ಸ್ಮಿತ್ ಅವರು ಕಪಾಳಮೋಕ್ಷ ಮಾಡಿದ ದೃಶ್ಯದ ಟ್ಯಾಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇತ್ತೀಚೆಗೆ ನಿರೂಪಕ ಕ್ರಿಸ್ ರಾಕ್‌ಗೆ ಆಸ್ಕರ್ ಪ್ರಶಸ್ತಿ ವಿಜೇತ ವಿಲ್ ಸ್ಮಿತ್ ಅವರು ಕಪಾಳಮೋಕ್ಷ ಮಾಡಿದ ದೃಶ್ಯವನ್ನು ಇಡೀ ಜಗತ್ತೇ ವೀಕ್ಷಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟು ವೈರಲ್ ಆಗಿತ್ತೋ ಅಷ್ಟೇ ಚರ್ಚೆಗೂ ಗ್ರಾಸವಾಗಿದೆ. ಇದರ ಮಧ್ಯೆ ಈ ಪಂಚಿಂಗ್ ಚಿತ್ರವನ್ನು ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಟ್ರೆಂಡ್ ಶುರುವಾಗಿದೆ. ತುಂಬಿದ ಸಭೆಯಲ್ಲಿ ಕಪಾಳಮೋಕ್ಷ ಮಾಡುವುದು ಅದೆಷ್ಟು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ಈ ದೃಶ್ಯವನ್ನು ಕಾಲಿನ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದು ಇಂಟ್ರಸ್ಟಿಂಗ್ ವಿಚಾರವೇ ಸರಿ.
ನ್ಯೂಜೆರ್ಸಿಯ ಆಸ್ಕರ್ ಅಗ್ಯುಲರ್ ಜೂನಿಯರ್ ಎಂಬ ಹಚ್ಚೆ ಕಲಾವಿದ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ವಿಶಿಷ್ಟವಾದ ಟ್ಯಾಟೂವನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಮೊನ್ನೆಯಷ್ಟೇ ಸ್ಮಿತ್ ಅವರು ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ರಾಕ್ ಕೆನ್ನೆಗೆ ಬಾರಿಸಿದ್ದರು. ಇದನ್ನು ಲಕ್ಷಾಂತರ ಜನ ಈ ಅನಿರೀಕ್ಷಿತ ಕ್ಷಣವನ್ನು ವೀಕ್ಷಿಸುತ್ತಿದ್ದಂತೆ, ಟ್ವಿಟರ್ #WhatJustHappened ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ವಿಡಿಯೋ ಸ್ಫೋಟಿಸಲು ಪ್ರಾರಂಭಿಸಿದೆ.
ಬಳಿಕ ವಿಲ್ ಸ್ಮಿತ್ ಅವರು ಹಾಸ್ಯನಟ ಕ್ರಿಸ್ ರಾಕ್ ಅವರಲ್ಲಿ ಕ್ಷಮೆ ಕೇಳಿದರು. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಅವರು, 'ಕ್ರಿಸ್, ನಾನು ನಿಮ್ಮಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಲು ಬಯಸುತ್ತಿದ್ದೇನೆ. ನಾನು ಮುಜುಗರಗೊಂಡಿದ್ದೇನೆ ಮತ್ತು ನಾನು ನಡೆದುಕೊಂಡಂತೆ ಇರಲು ಬಯಸುವುದಿಲ್ಲ. ಪ್ರೀತಿ ಮತ್ತು ಕರುಣೆಯ ಪ್ರಪಂಚದಲ್ಲಿ ಹಿಂಸೆಗೆ ಜಾಗವಿರುವುದಿಲ್ಲ' ಎಂದಿದ್ದಾರೆ.

'ಹಿಂಸೆಯು ಎಲ್ಲ ರೀತಿಯಿಂದಲೂ ವಿಷಕಾರಿ ಮತ್ತು ವಿನಾಶಕಾರಿ. ಕಳೆದ ರಾತ್ರಿಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿನ ನನ್ನ ವರ್ತನೆಯು ಒಪ್ಪುವಂತಹದಲ್ಲ ಮತ್ತು ಕ್ಷಮೆಗೂ ಅರ್ಹವಲ್ಲ. ನನ್ನ ವಿಚಾರದಲ್ಲಿ ಹಾಸ್ಯ ಮಾಡಿದ್ದರೆ, ಕೆಲಸದ ಒಂದು ಭಾಗವಾಗಿರುತ್ತಿತ್ತು. ಆದರೆ, ಜೇಡ (ಜೇಡ ಪಿಂಕೆಟ್, ಸ್ಮಿತ್ ಅವರ ಪತ್ನಿ) ಅವರ ಆರೋಗ್ಯ ಸ್ಥಿತಿ ಬಗ್ಗೆ ತಮಾಷೆ ಮಾಡಿದ್ದು ಅತಿ ಎನಿಸಿತು. ತಡೆದುಕೊಳ್ಳಲಾಗದೆ, ಭಾವನಾತ್ಮಕವಾಗಿ ಪ್ರತಿಕ್ರಿಯಿಸಿಬಿಟ್ಟೆ' ಎಂದೂ ವಿವರಿಸಿದ್ದಾರೆ.
ರಾಕ್ ಅವರಲ್ಲಿ ಮಾತ್ರವಲ್ಲದೆ ಅಕಾಡೆಮಿ ಬಳಿಯೂ ಕ್ಷಮೆಯಾಚಿಸಿದ್ದಾರೆ. 'ಅಕಾಡೆಮಿ, ಕಾರ್ಯಕ್ರಮ ನಿರೂಪಕರು, ನಿರ್ಮಾಪಕರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು ಮತ್ತು ವಿಶ್ವದಾದ್ಯಂತ ಕಾರ್ಯಕ್ರಮ ವೀಕ್ಷಿಸಿದ ಎಲ್ಲರಲ್ಲೂ ಕ್ಷಮೆ ಕೋರಲು ಬಯಸುತ್ತೇನೆ. 'ಕಿಂಗ್ ರಿಚರ್ಡ್' ಚಿತ್ರತಂಡವನ್ನೂ ಕ್ಷಮೆ ಕೇಳುತ್ತೇನೆ. ಎಲ್ಲರ ಸುಂದರ ಪ್ರಯಾಣವು ನನ್ನ ವರ್ತನೆಯಿಂದ ಹಾಳಾದುದ್ದಕ್ಕೆ ತೀವ್ರವಾಗಿ ವಿಷಾಧಿಸುತ್ತೇನೆ' ಎಂದೂ ಹೇಳಿದ್ದಾರೆ.

'ಕಿಂಗ್ ರಿಚರ್ಡ್' ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸ್ಮಿತ್, 'ನಾನು ಅಕಾಡೆಮಿ, ನಾಮನಿರ್ದೇಶನಗೊಂಡ ನಟರ ಕ್ಷಮೆಯಾಚಿಸುತ್ತೇನೆ. ಪ್ರೀತಿ ಎನ್ನುವುದು ವಿಲಕ್ಷಣವಾದುದನ್ನು ನಿಮ್ಮಿಂದ ಮಾಡಿಸುತ್ತದೆ. ನಿಂದನೆ ಹಾಗೂ ನಿಮ್ಮ ಕುರಿತು ಇತರರು ವಿಚಿತ್ರವಾಗಿ ಮಾತನಾಡಿದರೆ ಅದನ್ನು ತಡೆದುಕೊಳ್ಳುವ ಶಕ್ತಿ ನಿಮ್ಮಲ್ಲಿ ಇರಬೇಕು. ಇದನ್ನು ನಗುತ್ತಾ ಸ್ವೀಕರಿಸಿ, ಏನೂ ಆಗಿಲ್ಲ ಎಂಬತೆ ಇರಬೇಕು' ಎಂದಿದ್ದರು. ಆದರೆ ನೇರವಾಗಿ ರಾಕ್ ಅವರ ಕ್ಷಮೆಯನ್ನು ಅವರು ಕೋರಿರಲಿಲ್ಲ.












Click it and Unblock the Notifications