• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಒರಾಂಗೂಟಾನ್‌ನೊಂದಿಗೆ ಚೆಲ್ಲಾಟವಾಡಲು ಹೋದವನಿಗೆ ಆಗಿದ್ದೇನು?

|
Google Oneindia Kannada News

ಪ್ರಾಣಿಗಳನ್ನು ಮಾತನಾಡಿಸಲು ಅವುಗಳೊಂದಿಗೆ ಪ್ರೀತಿಯಿಂದ ವರ್ತಿಸಲು ಎಷ್ಟು ಮನಸಾಗುತ್ತೋ ಕೆಲ ಬಾರಿ ಅಷ್ಟೇ ಜಾಗರೂಕವಾಗಿರಬೇಕು. ಕೊಂಚ ಯಾರಾರಿದ್ರು ಪ್ರಾಣಕ್ಕೆ ಕುತ್ತು ಬರಬಹುದು. ಇಲ್ಲೊಂದು ಕೋಪಗೊಂಡಿದ್ದ ಒರಾಂಗೂಟಾನ್(ಚಿಂಪಾಂಜಿ ಜಾತಿಯ ಪ್ರಾಣಿ) ವ್ಯತಕ್ತಿಯೊಂದಿಗೆ ನಡೆದುಕೊಂಡ ರೀತಿಯನ್ನ ನೋಡಿದ್ರೆ ನೀವೆಲ್ಲರೂ ಬೆಚ್ಚಿ ಬೀಳುತ್ತೀರಾ. ಅಷ್ಟಕ್ಕೂ ಮೃಗಾಲಯದಲ್ಲಿರುವ ಒರಾಂಗೂಟಾನ್ ಕೋಪಗೊಂಡು ಮಾಡಿದ್ದೇನು ಅನ್ನೋದನ್ನ ನೋಡಿಬಿಡಿ.

ಪಂಜರದಲ್ಲಿದ್ದ ಒರಾಂಗೂಟಾನ್ ಜೊತೆ ಚೆಲ್ಲಾಟವಾಡುತ್ತಿದ್ದ ವ್ಯಕ್ತಿಗೆ ಕೋಪಗೊಂಡ ಒರಾಂಗೂಟಾನ್ ಆತನ ಬಟ್ಟೆಯನ್ನು ಹಿಡಿದು ಎಳೆದುಕೊಂಡಿದೆ. ವ್ಯಕ್ತಿ ಎಷ್ಟೇ ಪ್ರಯತ್ನ ಪಟ್ಟರೂ ಒರಾಂಗೂಟಾನ್ ಅವನನ್ನು ಬಿಟ್ಟಿಲ್ಲ. ಶರ್ಟ್ ಬಳಿಕ ಆತನ ಕಾಲನ್ನು ಹಿಡಿದುಕೊಂಡಿದೆ. ಆ ವ್ಯಕ್ತಿಯನ್ನ ಬಿಡಿಲು ಬಂದ ವ್ಯಕ್ತಿಯನ್ನು ಹಿಡಿಯಲು ಪ್ರಯತ್ನಿಸಿದೆ. ಇಬ್ಬರು ವ್ಯಕ್ತಿಗಳು ಎಷ್ಟೇ ಪ್ರಯತ್ನಿಸಿದರೂ ಒರಾಂಗೂಟಾನ್ ಕಾಲನ್ನು ಬಿಡುವುದೇ ಇಲ್ಲ. ಕಾಲನ್ನು ಜೋರಾಗಿ ಎಳೆದುಕೊಳ್ಳಲು ಪ್ರಯತ್ನಿಸಿದೆ. ವ್ಯಕ್ತಿ ಹೆದರಿ ಕಿರಿಚಾಡಿಕೊಂಡಿದ್ದಾನೆ.

ನಡೆದೇ ಹೋಯ್ತು ಭಾರತದಲ್ಲಿ ಮೊದಲ ಸಿಂಗಲ್ ಮ್ಯಾರೇಜ್ನಡೆದೇ ಹೋಯ್ತು ಭಾರತದಲ್ಲಿ ಮೊದಲ ಸಿಂಗಲ್ ಮ್ಯಾರೇಜ್

ಈ ಆಘಾತಕಾರಿ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇಂಡೋನೇಷ್ಯಾದ ಕಸಾಂಗ್ ಕುಲಿಮ್ ಮೃಗಾಲಯದಲ್ಲಿ ಈ ಘಟನೆ ನಡೆದಿದ್ದು, ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೀಡಿಯೊದಲ್ಲಿ ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಯನ್ನು ಹಸನ್ ಅರಿಫಿನ್ ಎಂದು ಗುರುತಿಸಲಾಗಿದೆ. ಒರಾಂಗುಟಾನ್ ಅನ್ನು ಟೀನಾ ಎಂಬ ಹೆಸರಿಸಲಾಗಿದೆ. ಒರಾಂಗುಟನ್‌ಗಳು ಅತ್ಯಂತ ವಿಧೇಯ ಪ್ರಾಣಿಗಳು ಎಂದು ಹೇಳಲಾಗುತ್ತದೆ ಮತ್ತು ಅದಕ್ಕಾಗಿಯೇ ವಿಡಿಯೊ ಮಾಡಲು ಜನರು ಮುಗಿ ಬೀಳುತ್ತಾರೆ. ಆದರೆ ಇಲ್ಲಿ ನಡೆದಿದ್ದೇ ಬೇರೆ.

Recommended Video

   Ganga River | ಗಂಗಾಜಲದ ವಿಶೇಷ ಗುಣಗಳು ಮತ್ತು ಅದರ ಪಾವಿತ್ರ್ಯತೆ ಬಗ್ಗೆ ನಿಮಗೆಷ್ಟು ಗೊತ್ತು? | OneIndia Kannada

   ವಿಡಿಯೋ ವೈರಲ್ ಆದ ಬಳಿಕ 12 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಈ ವಿಡಿಯೋ ಟ್ವಿಟರ್‌ನಲ್ಲಿ ನೆಟ್ಟಿಗರ ನಡುವೆ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಸ್ಥಳೀಯ ಸುದ್ದಿ ವರದಿಗಳ ಪ್ರಕಾರ, ಹಸನ್ ಅರಿಫಿನ್ ಉದ್ದೇಶಪೂರ್ವಕವಾಗಿ ಆವರಣದ ಸುತ್ತಲೂ ಅಳವಡಿಸಲಾದ ಬೇಲಿಯನ್ನು ದಾಟಿ ಒರಾಂಗುಟಾನ್ ಜೊತೆ ವಿಡಿಯೋ ಮಾಡಿದ್ದಾನೆ. ದುರದೃಷ್ಟಕರ ಘಟನೆಯನ್ನು ಮೃಗಾಲಯದ ಅಧಿಕಾರಿಗಳು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ.

   (ಒನ್ಇಂಡಿಯಾ ಸುದ್ದಿ)

   English summary
   What happened to the guy who went flirting with the orangutan? The shocking video is viral on the internet.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X