ಮಗುವಿನ ಪಾಲನೆ ಮಾಡುತ್ತಾ ಪರೀಕ್ಷೆ ಬರೆದ ಈ ತಾಯಿಯ ಫೋಟೋ ವೈರಲ್

ಅಫ್ಘಾನಿಸ್ತಾನದ ವಿಶ್ವವಿದ್ಯಾಲಯವೊಂದರಲ್ಲಿ ನಡೆದ ಪ್ರವೇಶ ಪರೀಕ್ಷೆಯೊಂದು ವಿಶ್ವದಾದ್ಯಂತ ಸುದ್ದಿ ಆಗಿದೆ. ಅದಕ್ಕೆ ಕಾರಣ ಆಗಿರುವುದು ಇಪ್ಪತ್ತೈದು ವರ್ಷದ ಹೆಣ್ಣುಮಗಳು. ಆಕೆ ಪ್ರವೇಶ ಪರೀಕ್ಷೆ ಬರೆಯುತ್ತಲೇ ತನ್ನ ಕೈಗೂಸಿನ ದೇಖ ರೇಕಿ ಮಾಡಿರುವ ಫೋಟೋ ವೈರಲ್ ಆಗಿದ್ದು, ಇಂಥ ಪ್ರೀತಿ ತೋರಿದ ತಾಯಿ ಹಾಗೂ ಅದಕ್ಕೆ ಅವಕಾಶ ಮಾಡಿಕೊಟ್ಟ ವಿ.ವಿ. ಬಗ್ಗೆ ಬಹಳ ಮೆಚ್ಚುಗೆ ಕೇಳಿಬರುತ್ತಿದೆ.

ಇಪ್ಪತ್ತೈದು ವರ್ಷದ ಜಹಾನ್ ತಾಬ್ ಅಫ್ಘಾನಿಸ್ತಾನದ ದಾಯ್ ಕುಂದಿ ಪ್ರಾಂತ್ಯದ ಖಾಸಗಿ ವಿ.ವಿಯಲ್ಲಿ ನೆಲದ ಮೇಲೆ ಕೂತು ಪರೀಕ್ಷೆ ಬರೆಯುತ್ತಿರುವ ಫೋಟೋ ಸೆರೆ ಹಿಡಿಯಲಾಗಿದೆ. ಆಕೆ ಪ್ರವೇಶ ಪರೀಕ್ಷೆ ಬರೆದಿದ್ದು, ಅದನ್ನು ಕಾನ್ ಕೋರ್ ಪರೀಕ್ಷೆ ಎನ್ನುತ್ತಾರೆ. ನಿಲ್ಲಿ ನಗರದ ನಸಿರ್ ಖೋರ್ಸಾ ಉನ್ನತ ಶಿಕ್ಷಣ ಸಂಸ್ಥೆಯ ಸಮಾಜ ವಿಜ್ಞಾನದ ಕೋರ್ಸ್ ಗೆ ಜಹಾನ್ ಪರೀಕ್ಷೆ ಬರೆದಿದ್ದಾರೆ.

ಆ ವಿ.ವಿ. ಪ್ರಾಧ್ಯಾಪಕರಾದ ಯಾಹ್ಯಾ ಇರ್ಫಾನ್ ಪ್ರಕಾರ, ಜಹಾನ್ ತಾಬ್ ತಮ್ಮ ಡೆಸ್ಕ್ ನಿಂದ ಎದ್ದು, ತಮ್ಮ ಮಗುವನ್ನು ನೋಡಿಕೊಳ್ಳಲು ಅನುಕೂಲ ಆಗುತ್ತದೆ ಎಂಬ ಕಾರಣಕ್ಕೆ ನೆಲದ ಮೇಲೆ ಕಾಲು ಚಾಚಿ ಕೂತಿದ್ದಂತೆ. ಜತೆಗೆ ಹಾಗೇ ನೆಲದ ಮೇಲೆ ಕೂತೇ ಪರೀಕ್ಷೆಯನ್ನು ಬರೆದಿದ್ದಾರೆ. ಪರೀಕ್ಷೆ ಬರೆದ ಫೋಟೋಗಳನ್ನು ತೆಗೆದವರು ಸಹ ಯಾಹ್ಯಾ ಇರ್ಫಾನ್ ಅವರೇ.

v25 year old Afghan woman takes exam while nursing her baby

ಇಡೀ ತರಗತಿಯಲ್ಲಿ ಆಕೆ ಬಗ್ಗೆ ಒಂದು ಹೆಮ್ಮೆ ಇತ್ತು ಎಂದು ಇರ್ಫಾನ್ ಮಾಧ್ಯಮವೊಂದಕ್ಕೆ ಹೇಳಿಕೊಂಡಿದ್ದಾರೆ. ಅಂದಹಾಗೆ ಜಹಾನ್ ತಾಬ್ ಗೆ ಮೂವರು ಮಕ್ಕಳು. ನಿಲ್ಲಿ ನಗರವನ್ನು ತಲುಪಲು ಆಕೆ ಆರು ಗಂಟೆ ಪ್ರಯಾಣ ಮಾಡಿದ್ದಾರೆ. ಆಕೆ ಪ್ರವೇಶ ಪರೀಕ್ಷೆಯೇನೋ ಪಾಸಾಗಿದ್ದಾರೆ. ಆದರೆ ಫೀ ಕಟ್ಟಲು ಸಾಧ್ಯ ಆಗುವುದಿಲ್ಲವೇನೋ ಎಂಬ ಆತಂಕ ಅಕೆಯದು.

v25 year old Afghan woman takes exam while nursing her baby

ಜಹಾನ್ ತಾಬ್ ನ ಪತಿ ರೈತರು. ಆಕೆಗೆ ಶಿಕ್ಷಣ ಮುಂದುವರಿಸಬೇಕು ಎಂಬ ಇಚ್ಛೆ ಇದೆ. ಸ್ಫೋಟ, ಸಾವು, ಭಯೋತ್ಪಾದಕರು ಇಂಥ ಸುದ್ದಿಯೇ ಬರುವ ಅಫ್ಘಾನಿಸ್ತಾನದಿಂದ ಮನ ಕರಗುವ ಸುದ್ದಿಯೊಂದು ಬಂದಿದೆ. ಆ ತಾಯಿ ಮುಂದೆ ಓದುವಂತಾಗಲಿ. ಇತರರಿಗೆ ಮಾದರಿ ಆಗಲಿ ಎಂದು ನಿಮ್ಮದೂ ಒಂದು ಹಾರೈಕೆ ಇರಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+