Zakir Hussain: ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರ ಸಾಧನೆಗಳು ಒಂದೆರಡಲ್ಲ
ಭಾರತ ಮಾತ್ರವಲ್ಲದೆ ಜಾಗತಿಕವಾಗಿ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಿಸಲಾಗಿತ್ತು. ನಿನ್ನೆಯೇ ಅವರ ನಿಧನವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇಂದು ಅವರ ಕುಟುಂಬದವರು ಜಾಕಿರ್ ಅವರ ನಿಧನವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಹುಸೇನ್ ಅವರು ಕಳೆದೆರಡು ವಾರಗಳಿಂದ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸಿದ್ಧ ಸಂಗೀತಗಾರರಾದ ಹುಸೇನ್ ಅವರು 1988ರಲ್ಲಿ ಪದ್ಮಶ್ರೀ ಹಾಗೂ 2002ರಲ್ಲಿ ಪದ್ಮಭೂಷಣ, 2023ರಲ್ಲಿ ಪದ್ಮವಿಭೂಷಣ ಗೌರವಕ್ಕೂ ಪಾತ್ರರಾಗಿದ್ದರು. ಇನ್ನು ಅವರು ಜಾಗತಿಕವಾಗಿಯೂ ಹಲವು ಸಾಧನೆಗಳನ್ನು ಮಾಡಿದ್ದಾರೆ.

ತಬಲಾ ವಾದಕ ಉಸ್ತಾದ್ ಅಲ್ಲಾ ರಖಾ ಖಾನ್ ಅವರ ಪುತ್ರರಾದ ಜಾಕಿರ್ ಹುಸೇನ್ ಅವರು ಭಾರತೀಯ ಮತ್ತು ಜಾಗತಿಕ ಸಂಗೀತಗಾರರಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದರು. ಹುಸೇನ್ ಅವರು ತಮ್ಮ ಏಳನೇ ವಯಸ್ಸಿನಲ್ಲೇ ತಬಲಾ ವಾದಿಸುವುದನ್ನು ಶುರು ಮಾಡಿದ್ದರು. 12ನೇ ವಯಸ್ಸಿಗೆ ಅವರು ಭಾರತದಾದ್ಯಂತ ತಮ್ಮ ತಬಲಾ ಪ್ರದರ್ಶನ ನೀಡಿದ್ದರು. ಅವರು ತಮ್ಮ ಮೊದಲ ಸಂಗೀತ ಕಚೇರಿಯನ್ನು ಅಮೆರಿಕಾದಲ್ಲಿ ಪ್ರದರ್ಶಿಸಿದರು.
ಅವರ ಚೊಚ್ಚಲ ಆಲ್ಬಂ ಆದ ಲಿವಿಂಗ್ ಇನ್ ದಿ ಮೆಟೀರಿಯಲ್ ವರ್ಲ್ಡ್ 1973ರಲ್ಲಿ ಬಿಡುಗಡೆಯಾಗಿತ್ತು. ವಿಶಿಷ್ಟ ಪ್ರತಿಭೆಗೆ ಹೆಸರುವಾಸಿಯಾದ ಅವರು ಯಾವುದೇ ಸಮತಟ್ಟಾದ ಮೇಲ್ಮೈಯನ್ನು ಬಳಸಿ ಲಯವನ್ನು ರಚಿಸುತ್ತಿದ್ದರು. ಸಂಗೀತಕ್ಕೆ ತವಾ ಮತ್ತು ಥಾಲಿಯಂತಹ ಅಡುಗೆ ಪಾತ್ರೆಗಳನ್ನು ಸಹ ಬಳಸಿ ಗಮನ ಸೆಳೆದಿದ್ದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಜಾಕಿರ್ ಹುಸೇನ್ ಅವರು 1999ರಲ್ಲಿ ಯುಎಸ್ ನ್ಯಾಷನಲ್ ಎಂಡೋಮೆಂಟ್ ಫಾರ್ ದಿ ಆರ್ಟ್ಸ್‌ನಿಂದ ಪ್ರತಿಷ್ಠಿತ ನ್ಯಾಷನಲ್ ಹೆರಿಟೇಜ್ ಫೆಲೋಶಿಪ್ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ. ಸಾಂಪ್ರದಾಯಿಕ ಸಂಗೀತಕ್ಕೆ ಅವರ ಕೊಡುಗೆಗಳು ಅನನ್ಯವಾಗಿದ್ದು, 2009ರಲ್ಲಿ ಅವರು ಮಿಕ್ಕಿ ಹಾರ್ಟ್ ಅವರೊಂದಿಗೆ ಗ್ಲೋಬಲ್ ಡ್ರಮ್ ಪ್ರಾಜೆಕ್ಟ್‌ನ ಭಾಗವಾಗಿ ತಮ್ಮ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದರು.
ಹುಸೇನ್ ಅವರು ತಬಲಾ ವಾದಕನ ಪಾತ್ರವನ್ನು ಮನೋವೈದ್ಯಕ್ಕೆ ಹೋಲುತ್ತದೆ ಎಂದು ವಿವರಿಸುತ್ತಾರೆ. ಸಂಗೀತ ಮತ್ತು ಇತರ ಸಂಗೀತಗಾರರ ಮನಸ್ಥಿತಿಯನ್ನು ಅವರು ಅಂತರ್ಗತವಾಗಿ ಅರ್ಥಮಾಡಿಕೊಳ್ಳುತ್ತಾರೆ ಹಾಗೂ ಅದಕ್ಕೆ ತಕ್ಕಂತೆ ತಮ್ಮ ಸಂಗೀತದಿಂದ ಮೋಡಿ ಮಾಡುತ್ತಿದ್ದರು. ಲಯ, ಸಂಸ್ಕೃತಿ ಮತ್ತು ಸಹಯೋಗದ ಬಗ್ಗೆ ಅವರ ಆಳವಾದ ತಿಳುವಳಿಕೆಯು ಜಾಝ್, ರಾಕ್ ಮತ್ತು ಇತರ ಪ್ರಕಾರಗಳೊಂದಿಗೆ ಭಾರತೀಯ ಶಾಸ್ತ್ರೀಯ ಲಯಗಳನ್ನು ಬೆಸೆಯುತ್ತಿದ್ದರು.

ಜಾಕಿರ್ ಅವರು ತಮ್ಮ ಸಂಗೀತ ಸಾಧನೆಗಳ ಜೊತೆಗೆ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ವಾನಪ್ರಸ್ಥಂ ಸೇರಿದಂತೆ ಹಲವಾರು ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಇದನ್ನು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗಿತ್ತು. ಅಲ್ಲದೆ ಅವರು ಹೀಟ್ ಅಂಡ್ ಡಸ್ಟ್ (1983), ಲಿಟಲ್ ಬುದ್ಧ (1993) ಮತ್ತು ಅಪೋಕ್ಯಾಲಿಪ್ಸ್ ನೌ (1979) ನಂತಹ ಚಲನಚಿತ್ರಗಳಿಗಲ್ಲೂ ತಮ್ಮ ಕೈಚಳಕ ತೋರಿದ್ದಾರೆ.
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯ ಮತ್ತು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹುಸೇನ್ ಅವರು ಶಿಕ್ಷಣತಜ್ಞರೂ ಆಗಿದ್ದರು. ಮಾಸ್ಟರ್‌ಕ್ಲಾಸ್‌ಗಳು ಹಾಗೂ ಕಾರ್ಯಾಗಾರಗಳ ಮೂಲಕ ಅವರು ಹಲವು ಸಂಗೀತಗಾರರಿಗೆ ಮಾರ್ಗದರ್ಶನ ನೀಡಿದ್ದರು. ಲಯ, ಸಂಗೀತ ಮತ್ತು ಜೀವನದ ಬಗ್ಗೆ ಅವರಲ್ಲಿದ್ದ ಆಳವಾದ ಜ್ಞಾನವನ್ನು ಹಂಚಿಕೊಂಡಿದ್ದರು ಎನ್ನಲಾಗಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications