USA Military: ಅಮೆರಿಕ ಸೇನೆಯಿಂದ ಇರಾನ್ ವಿರುದ್ಧ ರಹಸ್ಯ ಯುದ್ಧ ಶುರು, ಯಾವುದೇ ಕ್ಷಣದಲ್ಲಿ ಇರಾನ್ ಮೇಲೆ ದಾಳಿ?
ಅಮೆರಿಕ ಮತ್ತು ಇಸ್ರೇಲ್ ಒಂದಾಗಿ ಮಧ್ಯಪ್ರಾಚ್ಯದ ತಮ್ಮ ಶತ್ರು ಇರಾನ್‌ಗೆ ಒಂದು ಗತಿ ಕಾಣಿಸಲು ಸಜ್ಜಾಗಿದ್ದಾರೆ. ಇರಾನ್ ಪದೇ ಪದೇ ಇಸ್ರೇಲ್ ವಿಚಾರಕ್ಕೆ ಹೋಗುತ್ತೆ ಎನ್ನುವ ಕಾರಣಕ್ಕೆ ಅಮೆರಿಕದ ಅಧ್ಯಕ್ಷರು ನೇರವಾಗಿ ತಮ್ಮ ದೇಶದ ಬೃಹತ್ ಸೈನ್ಯವನ್ನು ಹಾಗೂ ನೌಕೆಗಳನ್ನು ಇದೀಗ ಇರಾನ್‌ನ ಗಡಿಗೆ ಕಳಿಸಿದ್ದಾರೆ. ಅದರಲ್ಲೂ ಅಮೆರಿಕದ ಬಳಿ ಇರುವ ಅತ್ಯಂತ ವಿನಾಶಕಾರಿ ಅಸ್ತ್ರಗಳೇ ಇರಾನ್ ನೆಲಕ್ಕೆ ತಮೀಪ ಬಂದು ತಲುಪಿವೆ. ಹೀಗಿದ್ದಾಗ ಇರಾನ್‌ಗೆ ಒಂದು ರೌಂಡ್ ಆಟ ಆಡಿಸಲು ಅಮೆರಿಕ ನಿರ್ಧಾರ ಮಾಡಿದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಅಮೆರಿಕ ಸೇನೆಯಿಂದ ಇರಾನ್ ವಿರುದ್ಧ ರಹಸ್ಯ ಯುದ್ಧ ಶುರು ಆಗಿದೆ.
ಡೊನಾಲ್ಡ್ ಟ್ರಂಪ್ ಅವರು ಈಗಾಗಲೇ ಹೇಳಿರುವಂತೆ ಇರಾನ್ ಈ ಬಾರಿ ಒಂದೋ ತಲೆಬಾಗಬೇಕು, ಅಥವಾ ಭೀಕರ ಯುದ್ಧಕ್ಕೆ ಸಿದ್ಧವಾಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಇರಾನ್ ಈ ಕೂಡಲೇ ಬಂದು ಅಮೆರಿಕದ ಜೊತೆಗೆ ಒಪ್ಪಂದ ಮಾಡಿಕೊಂಡರೆ ಎಲ್ಲವೂ ಸರಿಯಾಗಲಿದೆ, ಇಲ್ಲವಾದರೆ ಇರಾನ್ ಈ ಬಾರಿ ಸರಿಯಾಗಿ ಪಾಠ ಕಲಿಯಲಿದ್ದಾರೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಈ ಮೂಲಕ ಅಮೆರಿಕ ಸೇನೆ ಭಾರಿ ದೊಡ್ಡ ಮಟ್ಟದ ಕಾರ್ಯಾಚರಣೆಗೆ ಇದೀಗ ಸಜ್ಜಾದಂತೆ ಕಾಣುತ್ತಿದೆ. ಅದರಲ್ಲೂ ತನ್ನ ಎಲ್ಲಾ ಅಸ್ತ್ರಗಳನ್ನ ಬೇಕಾದರೆ ಇರಾನ್ ಮೇಲೆ ಪ್ರಯೋಗ ಮಾಡಲು ಅಮೆರಿಕ ಇದೀಗ ಸಜ್ಜಾಗಿ ನಿಂತಿರುವ ರೀತಿ ವಾತಾವರಣ ಸೃಷ್ಟಿಯಾಗಿದೆ.

ಶತ್ರು ನಾಶಕ್ಕೆ ಅಬ್ರಹಾಂ ಲಿಂಕನ್ ಬಳಕೆ!
ಅಮೆರಿಕ ಸೇನೆಯ ಬೃಹತ್ ಯುದ್ಧ ನೌಕೆ USS ಅಬ್ರಹಾಂ ಲಿಂಕನ್ ಮಧ್ಯಪ್ರಾಚ್ಯಕ್ಕೆ ಭರ್ಜರಿ ಎಂಟ್ರಿ ಕೊಟ್ಟು, ಇರಾನ್ ಹುಟ್ಟಡಗಿಸಲು ಸಜ್ಜಾಗಿದೆ. ಇನ್ನು USS ಅಬ್ರಹಾಂ ಲಿಂಕನ್‌ಗೆ ಇರುವ ಮತ್ತೊಂದು ಶಕ್ತಿ ಏನು ಎಂದರೆ, USS ಅಬ್ರಹಾಂ ಲಿಂಕನ್ ಶತ್ರುಗಳ ಜಲಗಡಿಗೆ ಹತ್ತಿರದಲ್ಲೇ ಇದ್ದರೂ ಅದನ್ನು ಗುರುತಿಸುವುದು ಕಷ್ಟವಂತೆ. ಎಲೆಕ್ಟ್ರಾನಿಕ್ ಸಂಕೇತಗಳು ಸೇರಿದಂತೆ ಯುದ್ಧ ನೌಕೆಗಳ ನಿಖರ ಜಾಗ ತಿಳಿಯಲು ಪ್ರಯೋಗಿಸುವ ಎಲ್ಲಾ ತಂತ್ರಗಳನ್ನು ಕೂಡ USS ಅಬ್ರಹಾಂ ಲಿಂಕನ್ ನಿಭಾಯಿಸುತ್ತದೆ. ಹೀಗಾಗಿ ಶತ್ರು ದೇಶಗಳಿಗೆ ಈ ನೌಕೆ ವಿರುದ್ಧ ಹೋರಾಡುವುದು ಕಷ್ಟದ ಕೆಲಸವಾಗುತ್ತದೆ.
ಗೊಂದಲ ಸೃಷ್ಟಿಸುವ ಅಬ್ರಹಾಂ ಲಿಂಕನ್!
USS ಅಬ್ರಹಾಂ ಲಿಂಕನ್ ಆಧುನಿಕ ಯುದ್ಧ ನೌಕೆ & ವಾಣಿಜ್ಯ ಹಡಗುಗಳು ಬಳಸುವ ಸ್ವಯಂಚಾಲಿತ ಗುರುತಿನ ವ್ಯವಸ್ಥೆಯನ್ನು ಕೂಡ ಬುದ್ಧಿವಂತಿಕೆಯಿಂದ ನಿರ್ವಹಣೆ ಮಾಡಲಿದೆ. ಈ ಸಂಕೇತಗಳನ್ನೂ ನಕಲು ಮಾಡುವ ಮೂಲಕ ಶತ್ರುಗಳಗೆ ದೊಡ್ಡ ಗೊಂದಲ ಮೂಡಿಸಲಿದೆ. ಅದು ಯುದ್ಧ ನೌಕೆಯೇ ಅಗಿದ್ದರೂ, ಶತ್ರು ದೇಶಗಳ ಡಿಜಿಟಲ್ ನಕ್ಷೆಯಲ್ಲಿ ವ್ಯಾಪಾರಿ ಟ್ಯಾಂಕರ್ ಅಥವಾ ವಾಣಿಜ್ಯ ಹಡಗುಗಳ ರೀತಿ ಕಾಣಿಸಿಕೊಂಡು ತನ್ನ ಗುರುತು ಮರೆಮಾಚುವ ಶಕ್ತಿ ಹೊಂದಿದೆ. ಅಲ್ಲದೆ ತಾನು ಇರುವ ದೂರದ ವಿಚಾರದಲ್ಲಿ ಕೂಡ USS ಅಬ್ರಹಾಂ ಲಿಂಕನ್ ಎದುರಾಳಿ ಪಡೆಯನ್ನು ತುಂಬಾ ಗೊಂದಲಕ್ಕೆ ತಳ್ಳಿ, ದಾಳಿ ಮಾಡಲು ಆಗದ ಪರಿಸ್ಥಿತಿಗೆ ದೂಡುತ್ತದೆ.
USS ಅಬ್ರಹಾಂ ಲಿಂಕನ್ 10 ಕಿಲೋ ಮೀಟರ್ ದೂರದಲ್ಲಿ ಇದ್ದರೆ, ಅದನ್ನ 100 ಕಿಲೋ ಮೀಟರ್ ಎಂದು ತೋರಿಸಿ ಗೊಂದಲ ಸೃಷ್ಟಿ ಮಾಡುವ ಶಕ್ತಿ ಹೊಂದಿದೆ. ಹೀಗಿದ್ದಾಗ ಅತ್ಯಾಧುನಿಕ ಅಸ್ತ್ರಗಳ ಕೊರತೆಯಿಂದ ಬಳಲುತ್ತಿರುವ ಇರಾನ್, ಅಮೆರಿಕದ USS ಅಬ್ರಹಾಂ ಲಿಂಕನ್ ಎದುರು ಗೆಲ್ಲುವುದು ಸುಲಭದ ಮಾತೇ ಅಲ್ಲ. ಇರಾನ್ ಮಾನಿಟರ್‌ಗಳು ಪ್ರೇತದ ರೀತಿ ಏನನ್ನೋ ಬೆನ್ನಟ್ಟುವಂತೆ ಮಾಡಿ ತನ್ನ ಕೆಲಸ ಸಾಧಿಸುತ್ತದೆ USS ಅಬ್ರಹಾಂ ಲಿಂಕನ್. ಹೀಗಾಗಿ ಇರಾನ್‌ಗೆ ಕೂಡ ಇದೀಗ ದೊಡ್ಡದಾಗಿ ಟೆನ್ಷನ್ ಶುರುವಾಗಿದ್ದು, ಯಾವುದೇ ಕ್ಷಣದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಒಪ್ಪಂದ ಆಗುವ ನಿರೀಕ್ಷೆ ಇದೆ.












Click it and Unblock the Notifications