ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಹೋಗುವ ಮುನ್ನ ಹುಷಾರ್: ಪ್ರಜೆಗಳಿಗೆ ಎಚ್ಚರಿಸಿದ್ದು ಏಕೆ ಅಮೆರಿಕಾ!?

|
Google Oneindia Kannada News

ನವದೆಹಲಿ, ನವೆಂಬರ್ 18: ಭಾರತದಲ್ಲಿ ಏರಿಕೆಯಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಯುನೈಟೆಡ್ ಸ್ಟೇಟ್ಸ್ ತಮ್ಮ ಪ್ರಜೆಗಳಿಗೆ ತಿಳಿಸಿದೆ. ಅಮೆರಿಕನ್ ಪ್ರಯಾಣಿಕರಿಗೆ ಇತ್ತೀಚೆಗಷ್ಟೇ ಪ್ರಯಾಣ ಸಲಹೆ- ಸೂಚನೆಗಳನ್ನು ಬಿಡುಗಡೆಗೊಳಿಸಿದೆ. ಈ ಸಲಹಾ ಪಟ್ಟಿಯಲ್ಲಿ ಭಾರತವನ್ನು 2ನೇ ಹಂತದ ವರ್ಗದಲ್ಲಿ ಗುರುತಿಸಲಾಗಿದೆ.

"ಲೈಂಗಿಕ ದೌರ್ಜನ್ಯದಂತಹ ಹಿಂಸಾತ್ಮಕ ಅಪರಾಧಗಳು, ಪ್ರವಾಸಿ ತಾಣಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಸಂಭವಿಸಿವೆ. ಈ ಹಿನ್ನೆಲೆ ನವೆಂಬರ್ 15ರಂದು ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್‌ನಲ್ಲಿ ಬ್ಯೂರೋ ಆಫ್ ಕಾನ್ಸುಲರ್ ಅಫೇರ್ಸ್ ಹೊರಡಿಸಿದ ಸಲಹೆಯಲ್ಲಿ, ಭಾರತಕ್ಕೆ ಪ್ರಯಾಣಿಸುವಾಗ "ಹೆಚ್ಚಿದ ಎಚ್ಚರಿಕೆ"ಯನ್ನು ರೂಢಿಸಿಕೊಳ್ಳಲು ಅಮೆರಿಕನ್ ಪ್ರಯಾಣಿಕರಿಗೆ ಸೂಚಿಸಲಾಗಿದೆ.

"ಭಾರತದಲ್ಲಿ ಅತ್ಯಾಚಾರವು ವೇಗವಾಗಿ ಬೆಳೆಯುತ್ತಿರುವ ಅಪರಾಧಗಳಲ್ಲಿ ಒಂದಾಗಿದೆ ಎಂದು ಭಾರತೀಯ ಅಧಿಕಾರಿಗಳು ವರದಿ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯದಂತಹ ಹಿಂಸಾತ್ಮಕ ಅಪರಾಧವು ಪ್ರವಾಸಿ ತಾಣಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಸಂಭವಿಸಿದೆ," ಎಂದು ಸಲಹೆಯಲ್ಲಿ ಹೇಳಲಾಗಿದೆ.

US Travel Aadvisory Flags Rape In India, Asks Its Visitors To Exercise Increased Caution

ಅಮೆರಿಕಾ ಪ್ರಜೆಗಳನ್ನು ಎಚ್ಚರಿಸುವುದು ಮೊದಲಲ್ಲ:

ಭಾರತಕ್ಕೆ ತನ್ನ ಪ್ರಯಾಣ ಸಲಹೆಗಳಲ್ಲಿ US ಲೈಂಗಿಕ ದೌರ್ಜನ್ಯವನ್ನು ಒಂದು ಕಾಳಜಿಯಾಗಿ ಎತ್ತಿ ತೋರಿಸುತ್ತಿರುವುದು ಇದೇ ಮೊದಲಲ್ಲ. ಕಳೆದ 2018 ಮತ್ತು 2019ರಲ್ಲಿ ಮೊದಲ ಬಾರಿಗೆ ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಪ್ರಮುಖವಾಗಿ ಉಲ್ಲೇಖಿಸಲಾಗಿತ್ತು. ಯುಎಸ್ ಮಹಿಳಾ ಪ್ರಯಾಣಿಕರಿಗೆ ಆ ಮೂಲಕ ಎಚ್ಚರಿಕೆ ನೀಡಲಾಗಿತ್ತು.

ಪ್ರವಾಸಕ್ಕೆ ನಾಲ್ಕು ವಿಭಾಗಗಳಲ್ಲಿ ದೇಶಗಳ ವಿಂಗಡಣೆ:

US ಸ್ಟೇಟ್ ಡಿಪಾರ್ಟ್ಮೆಂಟ್ ದೇಶಗಳಿಗೆ ನಾಲ್ಕು ವರ್ಗಗಳಲ್ಲಿ ಪ್ರಯಾಣ ಸಲಹೆಗಳನ್ನು ಅನುಸರಿಸುತ್ತದೆ. 2ನೇ ಹಂತದಲ್ಲಿ ಗುರುತಿಸಿಕೊಂಡಿರುವ ರಾಷ್ಟ್ರಗಳಿಗೆ ತೆರಳುವ ಅಮೆರಿಕಾ ಪ್ರಜೆಗಳು "ಹೆಚ್ಚಿನ ಎಚ್ಚರಿಕೆ" ವಹಿಸುವಂತೆ ಸೂಚಿಸಲಾಗುತ್ತದೆ. ಆದರೆ ಮೊದಲ ಹಂತದಲ್ಲಿ "ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ರೂಢಿಸಿಕೊಳ್ಳುವಂತೆ" ಸೂಚಿಸಿದೆ. 3ನೇ ಹಂತದಲ್ಲಿ ಗುರುತಿಸಿರುವ ದೇಶಗಳಿಗೆ ಪ್ರಯಾಣಿಸುವುದಕ್ಕೂ ಮೊದಲು "ಪ್ರಯಾಣವನ್ನು ಮರುಪರಿಶೀಲಿಸಿ" ಎಂದು ಸೂಚಿಸುತ್ತದೆ. 4ನೇ ಹಂತದಲ್ಲಿ ಗುರುತಿಸಿಕೊಂಡಿರುವ ರಾಷ್ಟ್ರಗಳಿಗೆ ಯಾವುದೇ ಕಾರಣಕ್ಕೂ ಪ್ರಯಾಣ ಮಾಡುವುದು ಬೇಡ ಎಂದು ಯುಎಸ್ ಸಲಹೆ ನೀಡುತ್ತದೆ.

ಭಾರತದಲ್ಲಿ ಹೆಚ್ಚಿದ ಅಪರಾಧಗಳ ಪಟ್ಟಿ:

ದೇಶದಲ್ಲಿ ಲೈಂಗಿಕ ಅಪರಾಧಗಳ ಹೊರತಾಗಿ ಭಯೋತ್ಪಾದನೆ, ಜನಾಂಗೀಯ ಗುಂಪುಗಳ ದಂಗೆ ಮತ್ತು ಮಾವೋವಾದಿ ದಂಗೆಯ ಹೆಚ್ಚಳವಾಗಿರುವ ಬಗ್ಗೆ ಯುಎಸ್ ಸಲಹೆಯಲ್ಲಿ ಉಲ್ಲೇಖಿಸಲಾಗಿದೆ. ಆ ಮೂಲಕ ಅಮೆರಿಕನ್ ಪ್ರಯಾಣಿಕರು ಭಾರತಕ್ಕೆ ಪ್ರಯಾಣಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ.

ಮರಣೋತ್ತರ ಪರೀಕ್ಷೆಗೆ ಕೇಂದ್ರದಿಂದ ಹೊಸ ನಿಯಮ: ನವೆಂಬರ್ 15ರಿಂದ ಜಾರಿಮರಣೋತ್ತರ ಪರೀಕ್ಷೆಗೆ ಕೇಂದ್ರದಿಂದ ಹೊಸ ನಿಯಮ: ನವೆಂಬರ್ 15ರಿಂದ ಜಾರಿ

ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ ಬಗ್ಗೆ ಉಲ್ಲೇಖ:

ಲೈಂಗಿಕ ಅಪರಾಧಗಳ ಹೊರತಾಗಿ, ಭಯೋತ್ಪಾದಕ ದಾಳಿ ಮತ್ತು ನಾಗರಿಕರ ಮೇಲಿನ ದಾಳಿಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಕೆಲವು ಜನಪ್ರಿಯ ಪ್ರವಾಸಿ ತಾಣಗಳಿಗೆ ಭೇಟಿ ನೀಡದಂತೆ ಅಮೆರಿಕನ್ ಪ್ರಯಾಣಿಕರಿಗೆ ಸಲಹೆ ನೀಡಲಾಗಿದೆ. "ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳು ಮತ್ತು ಹಿಂಸಾತ್ಮಕ ಕೃತ್ಯಗಳಿಂದ ಅಶಾಂತಿ ಉಂಟಾಗುತ್ತಿದೆ. ಈ ರಾಜ್ಯಕ್ಕೆ (ಪೂರ್ವ ಲಡಾಖ್ ಪ್ರದೇಶ ಮತ್ತು ಅದರ ರಾಜಧಾನಿ ಲೇಹ್‌ಗೆ ಭೇಟಿ ನೀಡುವುದನ್ನು ಹೊರತುಪಡಿಸಿ) ಎಲ್ಲಾ ಪ್ರಯಾಣದಿಂದ ದೂರವಿರಿ," ಎಂದು ಹೇಳಲಾಗಿದೆ.

"ವಿಶೇಷವಾಗಿ ಭಾರತ ಮತ್ತು ಪಾಕಿಸ್ತಾನವನ್ನು ಬೇರ್ಪಡಿಸುವ ಗಡಿ ನಿಯಂತ್ರಣ ರೇಖೆಯ (LOC) ಉದ್ದಕ್ಕೂ ಮತ್ತು ಕಾಶ್ಮೀರ ಕಣಿವೆಯ ಪ್ರವಾಸಿ ತಾಣಗಳಾದ ಶ್ರೀನಗರ, ಗುಲ್ಮಾರ್ಗ್ ಮತ್ತು ಪಹಲ್ಗಾಮ್‌ನಲ್ಲಿ ಹಿಂಸಾಚಾರ ಸಂಭವಿಸುತ್ತದೆ. LOC ಉದ್ದಕ್ಕೂ ಕೆಲವು ಪ್ರದೇಶಗಳಿಗೆ ವಿದೇಶಿಗರು ಭೇಟಿ ನೀಡುವುದನ್ನು ಭಾರತ ಸರ್ಕಾರವೇ ನಿಷೇಧಿಸುತ್ತದೆ.

ಈಶಾನ್ಯ, ಮಧ್ಯ, ಪೂರ್ವ ಭಾರತ ಪ್ರಯಾಣದ ಬಗ್ಗೆ ಎಚ್ಚರಿಕೆ:

ಈಶಾನ್ಯ ಭಾಗದಲ್ಲಿ ಬಸ್ಸುಗಳು, ರೈಲುಗಳು, ರೈಲು ಮಾರ್ಗಗಳು ಮತ್ತು ಮಾರುಕಟ್ಟೆಗಳಲ್ಲಿ ಬಾಂಬ್ ಸ್ಫೋಟ ಸೇರಿದಂತೆ ಜನಾಂಗೀಯ ದಂಗೆಕೋರ ಗುಂಪುಗಳ ಹಿಂಸಾಚಾರ ನಡೆಸುತ್ತಿವೆ. ಈ ಹಿನ್ನೆಲೆ ಭಾರತದ ಈಶಾನ್ಯ ಭಾಗಕ್ಕೆ ಪ್ರಯಾಣಿಸದಂತೆ ಅಮೆರಿಕನ್ನರಿಗೆ ಸಲಹೆಯಲ್ಲಿ ಎಚ್ಚರಿಸಲಾಗಿದೆ.

ಅಸ್ಸಾಂ, ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ, ತ್ರಿಪುರಾ ಮತ್ತು ಮಣಿಪುರ ರಾಜ್ಯಗಳಿಗೆ ಕೋಲ್ಕತ್ತಾದ ಯುಎಸ್ ಕಾನ್ಸುಲೇಟ್ ಜನರಲ್ ವಿಶೇಷ ಅನುಮತಿಯಿಲ್ಲದೆ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ ಎಂದು ಸಲಹೆಯನ್ನು ಸೇರಿಸಲಾಗಿದೆ.

ಮಧ್ಯ ಮತ್ತು ಪೂರ್ವ ಭಾರತದ ಭಾಗಗಳಲ್ಲಿ ಮಾವೋವಾದಿ ಉಗ್ರಗಾಮಿ ಗುಂಪುಗಳು ಅಥವಾ ನಕ್ಸಲೀಯರು "ದೊಡ್ಡ ಪ್ರಮಾಣದಲ್ಲಿ ಸಕ್ರಿಯರಾಗಿದ್ದಾರೆ" ಎಂದು ಯುಎಸ್ ಸಲಹೆಯಲ್ಲಿ ಹೇಳಲಾಗಿದೆ. ಪಶ್ಚಿಮ ಬಂಗಾಳದ ಮೂಲಕ ಪೂರ್ವ ಮಹಾರಾಷ್ಟ್ರ ಮತ್ತು ಉತ್ತರ ತೆಲಂಗಾಣದ ಪ್ರದೇಶಗಳಿಗೆ, ವಿಶೇಷವಾಗಿ ಛತ್ತೀಸ್‌ಗಢ ಮತ್ತು ಜಾರ್ಖಂಡ್‌ನ ಗ್ರಾಮೀಣ ಭಾಗಗಳಲ್ಲಿ ಮತ್ತು ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದ ಗಡಿಗಳಿಗೆ ಹೋಗದಂತೆ ಅದು ಅಮೆರಿಕದ ಪ್ರಯಾಣಿಕರಿಗೆ ಸಲಹೆ ನೀಡಿದೆ.

Recommended Video

ಮೂಲೆಗುಂಪಾದವರ ಆಟ ನೋಡಿ ಶಾಕ್ ಆದ ಐಪಿಎಲ್ ಫ್ರಾಂಚೈಸಿಗಳು | Oneindia Kannada

"ನಕ್ಸಲೀಯರು ಸ್ಥಳೀಯ ಪೊಲೀಸರು, ಅರೆಸೇನಾ ಪಡೆಗಳು ಮತ್ತು ಸರ್ಕಾರಿ ಅಧಿಕಾರಿಗಳ ಮೇಲೆ ಆಗಾಗ್ಗೆ ದಾಳಿಗಳನ್ನು ನಡೆಸುತ್ತಿದ್ದಾರೆ. "ಬೆದರಿಕೆಯ ಸ್ವರೂಪದಿಂದಾಗಿ" ನಕ್ಸಲೀಯ ಚಟುವಟಿಕೆಯಿರುವ ರಾಜ್ಯಗಳಿಗೆ ಪ್ರಯಾಣಿಸುವ ಎಲ್ಲಾ ಯುಎಸ್ ಪ್ರಯಾಣಿಕರು ವಿಶೇಷ ಅಧಿಕಾರವನ್ನು ಪಡೆಯಬೇಕು ಎಂದು ಹೇಳಲಾಗಿದೆ.

English summary
Bureau of Consular Affairs at the US State Department Issued In its latest travel advisory for American travellers coming to India, the US has highlighted rape as a major concern.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X