ಮಸೂದ್ ಅಝರ್ ನಿಷೇಧಕ್ಕೆ ವಿಶ್ವಸಂಸ್ಥೆಗೆ ಅಮೆರಿಕಾ ಮನವಿ

Subscribe to Oneindia Kannada

ಬೆಂಗಳೂರು, ಫೆಬ್ರವರಿ 7: ಕುಖ್ಯಾತ ಭಯೋತ್ಪಾದಕ, ಜೈಷ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಸ್ಥಾಪಕ ಹಾಗೂ ಪಠಾಣ್ ಕೋಟ್ ದಾಳಿಯ ರೂವಾರಿ ಮಸೂದ್ ಅಝರ್ ಗೆ ನಿಷೇಧ ಹೇರಬೇಕು ಅಂತ ಅಮೆರಿಕಾ ವಿಶ್ವಸಂಸ್ಥೆಯ ಬಾಗಿಲು ಬಡಿದಿದೆ.

ಇದರೊಂದಿಗೆ ಮಸೂದ್ ಅಜರ್ ಗೆ ನಿಷೇಧ ಹೇರಬೇಕು ಎಂದು ಕೋರಿದ್ದ ಭಾರತದ ವಾದಕ್ಕೆ ಹೊಸ ಬಲ ಬಂದಿದೆ. ಆದರೆ ಅಮೆರಿಕಾದ ಯತ್ನಕ್ಕೆ ಚೀನಾ ಮಾತ್ರ ಅಡ್ಡಗಾಲಾಗಿದೆ. ಕಳೆದ ಡಿಸೆಂಬರಿನಲ್ಲಿ ಮಸೂದ್ ಅಝರ್ ಗೆ ನಿಷೇಧ ಕೋರಿ ಭಾರತ ವಿಶ್ವಸಂಸ್ಥೆ ಮೆಟ್ಟಿಲು ಹತ್ತಿದಾಗಲೂ ಇದೇ ಚೀನಾ ಅಡ್ಡಗಾಲಾಗಿತ್ತು. [ಹಫೀಜ್ ನಿಂದ ಹೊಸ ಸಂಘಟನೆ ತೆಹ್ರೀಕ್ ಆಜಾದಿ ಜಮ್ಮು ಅಂಡ್ ಕಾಶ್ಮೀರ್]

US moves to UN for banning Jaish e Mohammed chief Masood Azhar

ಭಾರತ ವಿಶ್ವಸಂಸ್ಥೆಯ ಭದ್ರತಾ ಸಮಿತಿ ದೇಶಗಳ ಮನವೊಲಿಕೆಯಲ್ಲಿ ನಿರತವಾಗಿದ್ದು ವಿಶ್ವಸಂಸ್ಥೆಯಲ್ಲಿ ಮಸೂದ್ ಅಝರ್ ಗೆ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಹೊರಟಿದೆ. ಕಳೆದ ತಿಂಗಳಷ್ಟೆ ಭಾರತದ ಯತ್ನಕ್ಕೆ ಫ್ರಾನ್ಸ್ ಕೂಡಾ ಬೆಂಬಲ ನೀಡಿತ್ತು. ಹೆಚ್ಚಿನ ಎಲ್ಲಾ ದೇಶಗಳು ಭಾರತದ ಮನವಿಗೆ ಒಪ್ಪಿಗೆ ಸೂಚಿಸಿದ್ದರೆ ಚೀನಾ ಮಾತ್ರ ಅಡ್ಡಗಾಲಾಗಿದೆ. [ಅಮೆರಿಕದೊಳಗೆ ಭಯೋತ್ಪಾದನೆ, ಭಯೋತ್ಪಾದಕರು ತೂರುತ್ತಿರುವುದು ಎಲ್ಲಿಂದ?]

ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಒಟ್ಟು 1267 ಸದಸ್ಯರಲ್ಲಿ ಚೀನಾ ಮಾತ್ರ ಮಸೂದ್ ಅಝರ್ ಗೆ ನಿಷೇಧ ಹೇರುವುದನ್ನು ವಿರೋಧಿಸುತ್ತಿದೆ. ಡೊನಾಲ್ಡ್ ಟ್ರಂಪ್ ಅಮೆರಿಕಾ ಻ಅಧ್ಯಕ್ಷರಾದ ನಂತರ ಭಯೋತ್ಪಾದನೆ ವಿರುದ್ಧ ಸಮರ ಸಾರಿದ್ದು ಮಸೂದ್ ಅಝರ್ ಗೆ ನಿಷೇಧ ಹೇರಲು ಹೊರಟಿರುವುದೇ ಇದೇ ಸಾಲಿನ ಹೊಸ ಬೆಳವಣಿಗೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Finally America comes to support India. The United States of America on Tuesday moved to the United Nations for banning Pathankot terrorist attack mastermind, and Jaish e Mohammed chief Masood Azhar. Meanwhile, China has blocked US move to ban Azhar.
Please Wait while comments are loading...