ಅಮೆರಿಕ ವಿರುದ್ಧ ಪರೋಕ್ಷವಾಗಿ ಗುಡುಗಿದ ಇರಾನ್, ಕೆಲವೇ ದಿನಗಳಲ್ಲಿ ಯುದ್ಧ ಶುರುವಾಗುವ ಭೀತಿ | US Military
ಮಧ್ಯಪ್ರಾಚ್ಯ ಭಾಗದಲ್ಲಿ ಯಾವುದೇ ಕಾರಣಕ್ಕೂ ನೆಮ್ಮದಿ ನೆಲೆಸುವ ಸಾಧ್ಯತೆ ಈಗಿನ ವಾತಾವರಣಕ್ಕೆ ಕಾಣುತ್ತಿಲ್ಲ. ಒಂದು ಕಡೆ ಅಮೆರಿಕ ಸಂಧಾನ ಪ್ರಕ್ರಿಯೆ ನಡೆಸಲು ಸಂಪೂರ್ಣವಾಗಿ ಸಿದ್ಧವಿಲ್ಲ, ಆ ಕಡೆ ಇರಾನ್ ಕೂಡ ತಲೆಬಾಗಿ ನಡೆಯಲು ಸಿದ್ಧವಿಲ್ಲ. ಇಬ್ಬರೂ ಹೀಗೆ ಬಡಿದಾಡುವ ಸಮಯದಲ್ಲೇ ಮತ್ತೆ ಮತ್ತೆ ಯುದ್ಧದ ಆತಂಕ ಮನೆ ಮಾಡುತ್ತಲೇ ಇದೆ. ಇನ್ನೊಂದು ಕಡೆ ಇರಾನ್ ನೆಲದಲ್ಲಿ ಯಾರೂ ಇರಬೇಡಿ ಎಂದು ಜಗತ್ತಿನ ಹಲವು ದೇಶಗಳು ತಮ್ಮ, ತಮ್ಮ ಪ್ರಜೆಗಳಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಿವೆ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕ ವಿರುದ್ಧ ಪರೋಕ್ಷವಾಗಿ ಗುಡುಗಿದ ಇರಾನ್ ಮಾಡಿದ್ದೇನು ಗೊತ್ತಾ?
ಇರಾನ್ ಸೈಲೆಂಟ್ ಆಗುತ್ತಿಲ್ಲ, ಇನ್ನೊಂದು ಕಡೆ ಅಮೆರಿಕ ಬಿಡುತ್ತಿಲ್ಲ. ಇಬ್ಬರೂ ಭರ್ಜರಿಯಾಗಿ ಫೈಟ್ ಮಾಡುತ್ತಿದ್ದು, ನಾನಾ?? ನೀನಾ?? ಎನ್ನುತ್ತಿವೆ ಇದೀಗ. ಇಬ್ಬರೂ ಫೈಟಿಂಗ್ ಮಾಡುತ್ತಿರುವ ರೀತಿಗೆ, ತಿಕ್ಕಾಟಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಮಹಾಯುದ್ಧವೇ ಶುರು ಆಗುತ್ತೇನೋ? ಎಂಬ ಅನುಮಾನ ಕಾಡದೆ ಇರದು. ನೋಡ ನೋಡುತ್ತಲೇ ಪರಿಸ್ಥಿತಿ ಭೀಕರವಾಗುತ್ತಿದ್ದು, ಯುದ್ಧ ಕಾರ್ಮೋಡ ಎಲ್ಲೆಡೆ ಆವರಿಸಿದೆ. ಯಾವುದೇ ಕ್ಷಣದಲ್ಲಿ ದೊಡ್ಡ ಗಲಾಟೆ ನಡೆದು ಮಧ್ಯಪ್ರಾಚ್ಯ ನಲುಗಿ ಹೋಗುವ ಆತಂಕ ಇದೀಗ ಆವರಿಸಿದೆ. ಇದೇ ಕಾರಣಕ್ಕೆ ಅಮೆರಿಕ & ಇರಾನ್ ನಡುವೆ ಶಾಂತಿ ಮಾತುಕತೆ ನಡೆಸಲು ಸಭೆ ಆಯೋಜನೆ ಮಾಡಲಾಗಿದ್ದು, ಆದರೆ ಸಂಧಾನ ಆರಂಭಕ್ಕೂ ಮೊದಲೇ ಇರಾನ್ ಮತ್ತೊಮ್ಮೆ ಅಮೆರಿಕ ವಿರುದ್ಧ ಗುಡುಗಿದೆ.

ಸೇನೆ ಪ್ರಮಾಣ ಹೆಚ್ಚಿಸಿದ ಅಮೆರಿಕ
ಇರಾನ್ ಗಡಿಯಲ್ಲಿ ಅಮೆರಿಕ ತನ್ನ ಸೇನೆಯ ಪ್ರಮಾಣವನ್ನು ಮತ್ತಷ್ಟು ಹೆಚ್ಚು ಮಾಡಿದ್ದು, ಹೀಗೆ ಯುದ್ಧಕ್ಕೆ ಬೇಕಾದ ಎಲ್ಲಾ ತಾಯಾರಿಯನ್ನ ಮಾಡಿಕೊಂಡಿದೆ ಅಮೆರಿಕ. ಅಕಸ್ಮಾತ್ ತಮ್ಮ ಮಾತನ್ನು ಇರಾನ್ ಕೇಳದೇ ಇದ್ದರೆ ಯಾವುದೇ ಪರಿಸ್ಥಿತಿ ಎದುರಿಸಲು ಇದೀಗ ಅಮೆರಿಕ ಸೇನೆ ರೆಡಿಯಾಗಿದ್ದು, ಈ ಸಮಯದಲ್ಲೇ ರಷ್ಯಾ ಮತ್ತು ಚೀನಾ ನಾಯಕರು ಇರಾನ್ ಬೆನ್ನಿಗೆ ನಿಂತಿದ್ದಾರೆ. ಇದು ಅಮೆರಿಕ ಮತ್ತು ಮಿತ್ರರ ಪಾಲಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಮತ್ತೊಂದು ಕಡೆ ಇರಾನ್ ಕೂಡ ಯಾವುದೇ ಪರಿಸ್ಥಿತಿಗೆ ಸಿದ್ಧ ಎಂದು ಈಗ ತೊಡೆತಟ್ಟಿ ನಿಂತಿದ್ದು, ಸಂಧಾನ ಸಕ್ಸಸ್ ಆಗುವುದು ಈಗಿನ ಪರಿಸ್ಥಿತಿ ನೋಡಿದರೆ ಬಹುತೇಕ ಅನುಮಾನ ಎನ್ನಲಾಗುತ್ತಿದೆ.
ಒಟ್ನಲ್ಲಿ ಡೊನಾಲ್ಡ್ ಟ್ರಂಪ್ ಅವರ ಆದೇಶದ ಹಿನ್ನೆಲೆ ಅಮೆರಿಕ ಸೇನೆ ಇರಾನ್ ಬಳಿ ಬೀಡುಬಿಟ್ಟು, ಯುದ್ಧಕ್ಕೆ ಸಜ್ಜಾಗಿದೆ. ಹಾಗೇ ಇನ್ನೊಂದು ಕಡೆ ಇರಾನ್ ಕೂಡ ಬನ್ನಿ ಯುದ್ಧಕ್ಕೆ ನೋಡೋಣ ಎಂಬ ಸಂದೇಶ ಕೊಡುತ್ತಿದ್ದು, ಭವಿಷ್ಯದಲ್ಲಿ ಘೋರ ಸೇನಾ ಕಾರ್ಯಾಚರಣೆಯ ಮುನ್ಸೂಚನೆ ಸಿಗುತ್ತಿದೆ. ಹೀಗಿದ್ದಾಗ ನಾವೇನು ಕಡಿಮೆ ಇಲ್ಲ ಎಂದು ರಷ್ಯಾ ಹಾಗೂ ಚೀನಾ ಕೂಡ ಇರಾನ್ ಬೆನ್ನಿಗೆ ನಿಂತಿವೆ. ಪರಿಸ್ಥಿತಿ ಕ್ಷಣಕ್ಷಣಕ್ಕೂ ಮಧ್ಯಪ್ರಾಚ್ಯ ಭಾಗದಲ್ಲಿ ಇದೀಗ ಕಠಿಣವಾಗುತ್ತಾ ಸಾಗುತ್ತಿರುವುದು ಜಾಗತಿಕ ಮಟ್ಟದಲ್ಲಿ ಚಿಂತೆ ತರಿಸಿದೆ.












Click it and Unblock the Notifications