ವೆನೆಜುವೆಲಾ ಮೇಲೆ ಅಮೆರಿಕ ಭೀಕರ ದಾಳಿ: ಅಧ್ಯಕ್ಷನ ಸೆರೆ ಹಿಡಿದು ದೇಶದಿಂದ ಹೊರಗಟ್ಟಿದ್ದೇವೆ: ಟ್ರಂಪ್ ಘೋಷಣೆ
ವಾಷಿಂಗ್ಟನ್: ವೆನೆಜುವೆಲಾ ದೇಶದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕ ಸೆರೆಹಿಡಿದು ದೇಶದಿಂದ ಹೊರಗೆ ಕಳುಹಿಸಿದ್ದೇವೆ. ಅಮೆರಿಕವು ವೆನೆಜುವೆಲಾದ ವಿರುದ್ಧ ಬೃಹತ್ ಪ್ರಮಾಣದ ದಾಳಿಯನ್ನು ಯಶಸ್ವಿಯಾಗಿ ಮಾಡಿದೆ ಎಂದು ಇಂದು ಶನಿವಾರ (ಜನವರಿ 03) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ವೆನೆಜುವೆಲಾದ ಮೇಲಿನ ಅಮೆರಿಕ ದಾಳಿಯ ಬಗ್ಗೆ ಖುದ್ದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಹಿಂದೆ ಅಮೆರಿಕಾ ದೇಶ ವೆನೆಜುವೆಲಾ ಮೇಲೆ ಬೆದರಿಕೆ ಹಾಕುತ್ತಲೇ ಬಂದಿತ್ತು. ಇದೀಗ ನಮ್ಮ ದೇಶ ವೆನೆಜುವೆಲಾ ಮೇಲೆ ಯಶಸ್ವಿಯಾಗಿ ಬೃಹತ್ ದಾಳಿ ನಡೆಸಿದೆ. ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಅವರ ಪತ್ನಿಯನ್ನು ಸೆರೆಹಿಡಿದು ಅವರ ದೇಶದಿಂದ ಹೊರಗೆ ನೂಕಲಾಗಿದೆ ಎಂದು ತಿಳಿಸಿದ್ದಾರೆ.

ವಿಶ್ವದ ದೊಡ್ಡಣ್ಣ ದೇಶ ವೆನೆಜುವೆಲಾ ರಾಜಧಾನಿ ಕ್ಯಾರಕಾಸ್‌ನ ಮೇಲೆ ದಾಳಿ ನಡೆಸಿ ಸ್ಪೋಟಿಸಿದೆ. ಇಲ್ಲಿನ ಮಿರಾಂಡಾ, ಅರಾಗುವಾ ಮತ್ತು ಲಾ ಗುಯಿರಾ ರಾಜ್ಯಗಳಲ್ಲಿಯೂ ದಾಳಿಗೆ ಒಳಪಟ್ಟಿವೆ ಎಂದು ಅಲ್ಲಿನ ಸರ್ಕಾರವೇ ಹೇಳಿಕೊಂಡಿದೆ. ಹೇಳಿದೆ. ಹೀಗಾಗಿ ಮಡುರೊ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲು ಮತ್ತು ರಕ್ಷಣಾ ಪಡೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಈ ದಾಳಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಯುಎಸ್‌ನ ಭೀಕರ ದಾಳಿ ಕುರಿತು ರಾಯಿಟರ್ಸ್ ವರದಿ, ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಫೋಟೋ, ವಿಡಿಯೋಗಳ ಪ್ರಕಾರ, ಸುಮಾರು 90 ನಿಮಿಷಗಳ ಕಾಲ ಕ್ಯಾರಕಾಸ್‌ನಾದ್ಯಂತ ಸ್ಫೋಟಗಳು ಸಂಭವಿಸಿವೆ. ವಿಮಾನಗಳ ದಾಳಿಯಿಂದ ಇಲ್ಲಿನ ನಗರಗಳು ಸುಟ್ಟು ಭಸ್ಮವಾದವು. ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದು, ಕಪ್ಪು ಹೊಗೆ ಆಕಾಶದುದ್ದಕ್ಕೂ ಆವರಿಸಿದ್ದು ಕಂಡು ಬಂತು.
ಮಹಿಳೆಯೊಬ್ಬರು "ನನ್ನ ಪ್ರೀತಿಯೇ ಅಲ್ಲಿ ನೋಡು' ಎಂದು ದಾಳಿ ದೃಶ್ಯ ಕಂಡು ಮಹಿಳೆ ಉಸಿರುಗಟ್ಟಿದ ಧ್ವನಿಯಲ್ಲಿ ಹೇಳಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ವೆನೆಜುವೆಲಾ ಬಹುಮುಖ್ಯ ಮಿಲಿಟರಿ ನೆಲೆಯ ಮೇಲೆ ಮೊದಲು ಅಮೆರಿಕಾ ವಿಮಾನ ದಾಳಿ ನಡೆಸಿದವು. ಬಳಿಕ ಅಲ್ಲಿಂದ ಇತರ ಕಡೆಗಳಲ್ಲೂ ದಾಳಿ ನಡೆಸಿವೆ. ಇದರ ಪ್ರಭಾವದಿಂದಾಗಿ ದಕ್ಷಿಣ ಪ್ರದೇಶದ ಮೇಲೆ ವಿದ್ಯುತ್ ಕಡಿತ ಮಾಡಲಾಯಿತು. ಇಲ್ಲಿನ ಜನ ಭಯ, ಆತಂಕದಲ್ಲಿ ಜೀವಿಸುವಂತಾಗಿದೆ ಎಂದು ವರದಿ ಆಗಿದೆ.
ಅಮೆರಿಕಾ ಅಧ್ಯಕ್ಷ ಟ್ರಂಪ್ ತನ್ನ ಗುರಿ, ಉದ್ದೇಶಗಳನ್ನು ಸಂಪೂರ್ಣವಾಗಿ ಸಾರ್ವಜನಿಕವಾಗಿ ತೆರೆದಿಟ್ಟಿಲ್ಲ. ಆದರೆ ದೇಶವನ್ನು ಬಿಟ್ಟು ಓಡಿಹೋಗುವಂತೆ ಅಧ್ಯಕ್ಷ ನಿಕೋಲಸ್ ಮಡುರೊ ಮೇಲೆ ನಿರಂತರ ಒತ್ತಡ ಹೇರಿ ದೇಶದಿಂದ ಬಿಟ್ಟು ಹೋಗುವಂತೆ ಮಾಡಿದ್ದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆಂದು ರಾಯಿಟರ್ಸ್ ವರದಿ ಮಾಡಿದೆ. ಅಧ್ಯಕ್ಷರು ಅಧಿಕಾರ ಬಿಡುವ ಬಗ್ಗೆ ಅಲ್ಲಿನ ಶ್ವೇತಭವನ ಪ್ರತಿಕ್ರಿಯಿಸಿಲ್ಲ.
"The United States of America has successfully carried out a large scale strike against Venezuela and its leader, President Nicolas Maduro, who has been, along with his wife, captured and flown out of the Country. This operation was done in conjunction with U.S. Law Enforcement.… pic.twitter.com/sFa5OC4ZrZ
— The White House (@WhiteHouse) January 3, 2026












Click it and Unblock the Notifications