ಅಬ್ಬಬ್ಬಾ ಲಾಟರಿ.. ಉಕ್ರೇನ್‌ಗೆ ಲಕ್ಷ ಲಕ್ಷ ಕೋಟಿ ರೂಪಾಯಿ ಗಿಫ್ಟ್!

ರಷ್ಯಾ VS ಉಕ್ರೇನ್ ಮಧ್ಯೆ ಹೊತ್ತಿಕೊಂಡಿರುವ ಬೆಂಕಿಗೆ, ಆಗಾಗ ಅಮೆರಿಕ ಗಾಳಿ ಊದುತ್ತಾ ಉಕ್ರೇನ್ ಬೆಂಬಲಕ್ಕೆ ನಿಲ್ಲುತ್ತಿದೆ. ಅದ್ರಲ್ಲೂ ರಷ್ಯಾ ವಿರುದ್ಧ ಅಮೆರಿಕ ಪರೋಕ್ಷವಾಗಿ ಯುದ್ಧ ಸಾರಿದ್ದು, ಇದೇ ಕಾರಣಕ್ಕೆ ಉಕ್ರೇನ್‌ಗೆ ಸಹಾಯ ಮಾಡುತ್ತಿದೆ ಎಂಬ ಆರೋಪ ಪದೇ ಪದೇ ಕೇಳಿಬರುತ್ತಿದೆ. ಇಂತಹ ಸಂದರ್ಭದಲ್ಲಿ ಅಮೆರಿಕ ಈಗ ಉಕ್ರೇನ್‌ಗೆ ಲಕ್ಷ ಲಕ್ಷ ಕೋಟಿ ರೂಪಾಯಿ ಗಿಫ್ಟ್ ಕೊಟ್ಟಿದೆ.

ಹೌದು ರಷ್ಯಾ ಯಾವಾಗ ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿ ತನ್ನ ಸೇನೆಯನ್ನು ಉಕ್ರೇನ್ ದೇಶದ ಒಳಗೆ ನುಗ್ಗಿಸಿತ್ತೋ, ಅದೇ ದಿನದಿಂದ ಭೀಕರ ಕಾಳಗ ಶುರುವಾಗಿತ್ತು. ಈ ನಡುವೆ ಉಕ್ರೇನ್‌ಗೆ ಬೆಂಬಲ ನೀಡಿದ್ದ ಅಮೆರಿಕ, ರಷ್ಯಾ ವಿರುದ್ಧ ಪರೋಕ್ಷವಾಗಿ ಅಖಾಡ ಪ್ರವೇಶ ಮಾಡಿದೆ ಎಂಬ ಆರೋಪಗಳು ಇವೆ. ಇಷ್ಟೆಲ್ಲಾ ಆರೋಪಗಳ ನಡುವೆ ಮಹತ್ವದ ಬೆಳವಣಿಗೆ ನಡೆದಿದೆ. ಅದು ಏನೆಂದರೆ ರಷ್ಯಾ ವಿರುದ್ಧ ಹೋರಾಡಲು ಈಗಾಗಲೇ ಲಕ್ಷ, ಲಕ್ಷ ಕೋಟಿ ರೂಪಾಯಿ ನೀಡಿದ್ದ ಅಮೆರಿಕ ಇದೀಗ ಮತ್ತೊಮ್ಮೆ, ದೊಡ್ಡ ಮೊತ್ತದ ಹಣವನ್ನು ಉಡುಗೊರೆಯಾಗಿ ಉಕ್ರೇನ್‌ಗೆ ನೀಡಿದೆ.

US Gave One More Aid Package To The Ukraine For War Against The Russia

ರಷ್ಯಾ ಪಿತ್ತ ನೆತ್ತಿಗೇರಿಸಿದ ಅಮೆರಿಕ

ಅಮೆರಿಕ ಈಗಾಗಲೇ ದೊಡ್ಡ ಮೊತ್ತದ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಿದ್ದು, ಈ ಪೈಕಿ ಉಕ್ರೇನ್, ತೈವಾನ್ ಮತ್ತು ಇಸ್ರೇಲ್‌ಗೆ ಸೇರಿ ಒಟ್ಟು 95 ಬಿಲಿಯನ್ ಡಾಲರ್ ಹಣದ ಸಹಾಯ ಮಾಡಲು ಮುಂದಾಗಿದೆ. ಈ 95 ಬಿಲಿಯನ್ ಡಾಲರ್ ಹಣದಲ್ಲಿ ಉಕ್ರೇನ್ ಕೂಡ ದೊಡ್ಡ ಮಟ್ಟದಲ್ಲಿ ಸಹಾಯ ಪಡೆಯಲಿದೆ. ಹೀಗಾಗಿ ರಷ್ಯಾ ವಿರುದ್ಧ ಉಕ್ರೇನ್‌ಗೆ ಮತ್ತೊಮ್ಮೆ ದೊಡ್ಡ ಮೊತ್ತದ ಸಹಾಯ ಮಾಡಲು ಮುಂದಾಗಿದೆ ಅಮೆರಿಕ. ಅಮೆರಿಕ ಹೀಗೆ ನೀಡುತ್ತಿರುವ ಸಹಾಯದಲ್ಲಿ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನ ಅಮೆರಿಕ ರವಾನಿಸುತ್ತಿದೆ ಎನ್ನಲಾಗಿದೆ. ಇದು ಮತ್ತೊಮ್ಮೆ ರಷ್ಯಾ ಸೇನೆ ಹಾಗೂ ರಷ್ಯಾ ಅಧ್ಯಕ್ಷರ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ಉಕ್ರೇನ್ ನೆಲ ರಷ್ಯಾ ವಶದಲ್ಲಿ?

ಮತ್ತೊಂದು ಕಡೆ ತಾನು ಉಕ್ರೇನ್‌ಗೆ ಶಸ್ತ್ರಾಸ್ತ್ರ ನೀಡಿ ಸಹಾಯ ಮಾಡುತ್ತಿರುವ ನಿರ್ಧಾರಕ್ಕೆ ಅಮೆರಿಕ ಸಬೂಬು ನೀಡಿದೆ. ಅದು ಏನೆಂದರೆ ಯುದ್ಧದಲ್ಲಿ ರಷ್ಯಾಗೆ ಚೀನಾ, ಇರಾನ್‌ ಮತ್ತು ಉತ್ತರ ಕೊರಿಯಾ ದೇಶಗಳು ನೆರವು ನೀಡುತ್ತಿವೆ. ಇದೇ ಕಾರಣಕ್ಕೆ ಅಮೆರಿಕ ಕೂಡ ಉಕ್ರೇನ್‌ಗೆ ಶಸ್ತ್ರಾಸ್ತ್ರ ರವಾನೆ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ವಿವರಣೆ ನೀಡಿದ್ದಾರೆ. ಇದು ಮತ್ತೊಮ್ಮೆ ರಷ್ಯಾ ಅಧ್ಯಕ್ಷ ಪುಟಿನ್ ಅವರ ಪಿತ್ತ ನೆತ್ತಿಗೇರಿಸಿದೆ. ಹೀಗಾಗಿ, ಉಕ್ರೇನ್ ವಿರುದ್ಧ ರಷ್ಯಾ ಸೇನೆ ಮತ್ತೊಮ್ಮೆ ಉಗ್ರ ದಾಳಿ ನಡೆಸುವ ಭಯ ಕೂಡ ಆವರಿಸಿದೆ. ಇದೀಗ ರಷ್ಯಾ ಸೇನೆ ಭಾಗಶಃ ಉಕ್ರೇನ್ ಪ್ರದೇಶವನ್ನು ತನ್ನ ವಶಕ್ಕೆ ಪಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+