ಹಿಲರಿ ಬೆಂಬಲಕ್ಕೆಂದು ಸೂಟಿನಲ್ಲಿ ಬಂದ ಮಹಿಳೆಯರು

Posted By:
Subscribe to Oneindia Kannada

ವಾಷಿಂಗ್ಟನ್ ಡಿಸಿ, ನವೆಂಬರ್ 08 : ನಮ್ಮ ಭಾರತದಲ್ಲಿ ಮತ ಹಾಕಲು ಹೋಗುವಾಗ ಎಂಥ ಬಟ್ಟೆ ಹಾಕಿಕೊಂಡು ಹೋಗಬೇಕು ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾವ ಬಟ್ಟೆ ಹಾಕಿಕೊಂಡರೇನು, ಯಾರಿಗೆ ಮತ ಹಾಕಿದರೇನು, ನಮ್ಮ ಹಣೆಬರಹ ಅಷ್ಟೇ ಎಂದು ಯಾವನೋ ಒಬ್ಬನಿಗೆ ಬಟನ್ ಒತ್ತಿ ಬಂದಿರುತ್ತಾರೆ.

ಆದರೆ, ಅಮೆರಿಕದಲ್ಲಿ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆಯಲ್ಲಿನ ಈ ವಿಶೇಷತೆ ನೋಡಿ. ಡಿಮೊಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ಬೆಂಬಲಿಸುತ್ತಿರುವ ಮಹಿಳೆಯರನೇಕರು ಸೂಟಿನಲ್ಲಿ ಬಂದು ಮತ ಚಲಾಯಿಸುತ್ತಿದ್ದಾರೆ.

ಹಿಲರಿಯನ್ನು ಬೆಂಬಲಿಸುವವರು ಪ್ಯಾಂಟ್‌ಸೂಟ್ ನೇಷನ್ ಅಂತ ಫೇಸ್ ಬುಕ್ ಪುಟವನ್ನೇ ತೆರೆದಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಬೆಂಬಲಿಗರು ಈ ಪುಟವನ್ನು ಹಿಂಬಾಲಿಸುತ್ತಿದ್ದಾರೆ. ನಮ್ಮಲ್ಲಿ ಸೂಟ್ ಬೂಟ್ ಕಿ ಸರ್ಕಾರ್ ಅಂತ ಗೇಲಿ ಮಾಡುವವರೂ ಇದ್ದಾರೆ. [ಬಿಹಾರದಲ್ಲಿ ಮೋದಿ ಸೂಟ್-ಬೂಟ್ ಬಗ್ಗೆ ರಾಹುಲ್ ಮಾತು]

US Election 2016 : Women come in pantsuit to support Hillary

ಇನ್ನು ಹಲವಾರು ಮಹಿಳೆಯರು ಬಿಳಿ ಸೂಟಿನಲ್ಲಿ ಬಂದು ಹಿಲರಿ ಪರವಾಗಿ ಮತ ಚಲಾಯಿಸುತ್ತಿದ್ದಾರೆ. 20ನೇ ಶತಮಾನದ ಆರಂಭದಲ್ಲಿ ಅಮೆರಿಕದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಸಿಗಬೇಕು ಎಂದು ಮಹಿಳಾಮಣಿಗಳು ಬಿಳಿ ಸೂಟ್ ಧರಿಸಿ ಹೋರಾಟ ನಡೆಸಿದ್ದರು. ಈ ಹೋರಾಟಗಾರ್ತಿಯರ ಗೌರವಾರ್ಥವಾಗಿ ಸ್ತ್ರೀಯರು ಬಿಳಿ ಸೂಟ್ ಧರಿಸಿ ಮತದಾನಕ್ಕೆ ಬರುತ್ತಿದ್ದಾರೆ.

ಪ್ರಸ್ತುತ ಚುನಾವಣೆ ಆರೋಪ ಪ್ರತ್ಯಾರೋಪಗಳು, ಕೆಸರೆರಚಾಟಗಳು, ವಾದ ವಿವಾದಗಳು, ಈಮೇಲ್ ಹಗರಣಗಳು, ಲೈಂಗಿಕ ಆರೋಪಗಳಿಂದ ಹೊಲಸು ಹಿಡಿದಿದ್ದು, ಅದನ್ನೆಲ್ಲ ತೊಳೆದುಹಾಕುವ ಸಂಕೇತವಾಗಿ ಶ್ವೇತವರ್ಣದ ದಿರಿಸಿನಲ್ಲಿ ಮತ ಚಲಾವಣೆಗೆ ಬಂದಿರುವುದಾಗಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. [ಕಟ್ಟಕಡೆಯ ಸಮೀಕ್ಷೆಯಲ್ಲಿ ಹಿಲರಿ ಕ್ಲಿಂಟನ್ ಜಯಭೇರಿ!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Women across the United States are wearing pantsuits on Tuesday in a show of support for Hillary Clinton, Democartic candidate in US Election 2016. Many are inspired by a Facebook group called Pantsuit Nation. Some are also wearing white in honor of the suffragists.
Please Wait while comments are loading...