ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ಕೋರ್ಟಿನಿಂದ ಮೋದಿ ವಿರುದ್ಧದ ಕೇಸು ವಜಾ

By Mahesh
|
Google Oneindia Kannada News

ನ್ಯೂಯಾರ್ಕ್, ಜ.15: 2002ರ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಯುಎಸ್ ಫೆಡರಲ್ ಕೋರ್ಟ್ ಗುರುವಾರ ವಜಾಗೊಳಿಸಿದೆ.

ಯುಎಸ್ ಡಿಸ್ಟ್ರಿಕ್ ಜಡ್ಜ್ ಅನಾಲಿಸಾ ಟೋರೆಸ್ ಅವರನ್ನು ಈ ಪ್ರಕರಣದಿಂದ ಮುಕ್ತಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಅವರನ್ನು ಶಿಕ್ಷಿಸುವುದು ಈ ಕೋರ್ಟಿನ ವ್ಯಾಪ್ತಿಗೆ ಒಳಪಡುವುದಿಲ್ಲ. ಮೋದಿ ಅವರ ವಿರುದ್ಧದ ದೂರನ್ನು ತಿರಸ್ಕರಿಸಲಾಗಿದೆ. ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಸೂಚಿಸಲಾಗಿದೆ ಎಂದು ಜಡ್ಜ್ ಟೋರೆಸ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ. [ಯುಎಸ್ ನಲ್ಲಿ ಮೋದಿ ಅವರ ಆ ದಿನಗಳು]

US court dismisses lawsuit against Narendra Modi

2002ರಲ್ಲಿ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ಗೋಧ್ರಾ ಗಲಭೆಯಲ್ಲಿ ನರೇಂದ್ರ ಮೋದಿ ಪಾತ್ರದ ಕುರಿತು ಅಮೆರಿಕನ್ ಜೆಸ್ಟಿಸ್ ಸೆಂಟರ್(ಎಜೆಸಿ) ಎಂಬ ಮಾನವ ಹಕ್ಕು ಸಂಘಟನೆ ನ್ಯೂಯಾರ್ಕ್ ಕೋರ್ಟಿಗೆ ದೂರು ನೀಡಿತ್ತು. [ಭಾರತಕ್ಕೆ ಯುಎಸ್ ರಾಯಭಾರಿ ರಾಹುಲ್ ವರ್ಮ]

ಈ ಸಂಬಂಧ ಅರ್ಜಿ ಕೈಗೆತ್ತಿಕೊಂಡಿರುವ ನ್ಯೂಯಾರ್ಕ್ ನ್ಯಾಯಾಲಯ (Federal Court of Southern District of New York), ಪ್ರಧಾನಿ ಮೋದಿ ಅವರಿಗೆ ಈ ಹಿಂದೆ 2014ರ ಸೆಪ್ಟೆಂಬರ್ ನಲ್ಲಿ ಸಮನ್ಸ್ ಕೂಡಾ ಜಾರಿ ಮಾಡಿತ್ತು. ಅದರೆ, ಈಗ ಭಾರತದ ಪ್ರಧಾನಿಯಾಗಿ ಸರ್ಕಾರವನ್ನು ಮುನ್ನಡೆಸುವ ಅಧಿಕಾರ ಪಡೆದಿರುವುದರಿಂದ ಮೋದಿ ಅವರಿಗೆ "ಇಮ್ಯೂನಿಟಿ" ಸಿಕ್ಕಿದೆ. (ಪಿಟಿಐ)

English summary
A US federal court here today dismissed a lawsuit brought against Prime Minister Narendra Modi by a rights group in connection with the 2002 riots in Gujarat, saying he enjoys immunity as the sitting head of a foreign government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X