ಕೊರೊನಾ ಕಾರಣ: ಜಗತ್ತಿನ ಬಲಿಷ್ಠ ರಾಷ್ಟ್ರಗಳಿಂದ ಚೀನಾಗೆ ಛೀ.. ಥೂ..!
ನವದೆಹಲಿ, ಮೇ 31: ಚೀನಾದ ಸೂಕ್ಷ್ಮ ರೋಗಾಣುಗಳ ಪ್ರಯೋಗಾಲಯದಿಂದ ರಹಸ್ಯವಾಗಿ ಕೊವಿಡ್-19 ಸೋರಿಕೆ ಮಾಡಲಾಗಿದೆ ಎಂಬ ಆರೋಪ ಜಾಗತಿಕ ಮಟ್ಟದಲ್ಲಿ ದಿನಕ್ಕೊಂದು ಮಗ್ಗಲು ಬದಲಿಸುತ್ತಿದೆ. ಅಮೆರಿಕಾದ ವಾದವನ್ನು ವಿರೋಧಿಸಿದ ಬಲಿಷ್ಠ ರಾಷ್ಟ್ರಗಳು ಇದೀಗ ಚೀನಾ ವಿರುದ್ಧ ದೂಷಿಸುವುದಕ್ಕೆ ಶುರು ಮಾಡಿವೆ.
ವುಹಾನ್ ನಗರದಲ್ಲಿ ಇರುವ ಸೂಕ್ಷ್ಮರೋಗಾಣು ಅಧ್ಯಯನ ಸಂಸ್ಥೆಯಲ್ಲಿ ನಾಗರಿಕ ಸಂಶೋಧನೆಗಳ ಜೊತೆಗೆ ಸೇನಾ ಚಟುವಟಿಕೆಗಳೂ ನಡೆಯುತ್ತಿವೆ ಎಂದು ಯುಎಸ್ ಮಾಜಿ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಆರೋಪಿಸಿದ್ದಾರೆ.
ಉತ್ತಮ ನಾಗರಿಕ ಸಂಶೋಧನೆಗಳನ್ನು ನಡೆಸುವುದಾಗಿ ಬಿಂಬಿಸುತ್ತಿರುವ ಚೀನಾದ ವುಹಾನ್ ವೈರಾಲಜಿ ಸಂಸ್ಥೆಯು ನೇರವಾಗಿ ಪೀಪಲ್ಸ್ ಲಿಬರೇಷನ್ ಆರ್ಮಿ ಜೊತೆ ಸಂಪರ್ಕದಲ್ಲಿದೆ. ಅಲ್ಲದೇ ಸೂಕ್ಷ್ಮ ರೋಗಾಣುಶಾಸ್ತ್ರ ಅಧ್ಯಯನ ಸಂಸ್ಥೆಯಲ್ಲೇ ಸೇನಾ ಚಟುವಟಿಕೆಗಳನ್ನೂ ನಡೆಸಲಾಗುತ್ತಿದೆ ಎಂದು ಮೈಕ್ ಪೊಂಪಿಯೊ ದೂಷಿಸಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಅಮೆರಿಕಾ ಆರೋಪದ ಹಿಂದಿನ ಕಾರಣ?
ಕೊರೊನಾವೈರಸ್ ರೋಗದ ಬಗ್ಗೆ ಸಾಕಷ್ಟು ವಿಷಯಗಳನ್ನು ಚೀನಾ ಮರೆ ಮಾಚಲು ಯತ್ನಿಸುತ್ತಿದೆ. "ಅದು ಏನು ಎಂಬ ಬಗ್ಗೆ ಅವರು ಉತ್ತರ ನೀಡಲು ನಿರಾಕರಿಸುತ್ತಿದ್ದಾರೆ. ರೋಗದ ಗುಣಲಕ್ಷಣ ಏನು ಎಂಬುದನ್ನು ವಿವರಿಸುವುದಕ್ಕೆ ಅವರು ನಿರಾಕರಿಸುತ್ತಾರೆ. ಅಷ್ಟೇ ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ವುಹಾನ್ ವೈರಾಲಜಿಗೆ ಪ್ರವೇಶಿಸುವುದಕ್ಕೆ ಅವರು ಅನುಮತಿ ನಿರಾಕರಿಸುತ್ತಾರೆ" ಎಂದು ಮೈಕ್ ಪೊಂಪಿಯೋ ಕಿಡಿ ಕಾರಿದ್ದಾರೆ.

ಕೊವಿಡ್-19 ಮೂಲ ಹುಡುಕುತ್ತಿರುವ ಜಗತ್ತು
ಇಡೀ ಜಗತ್ತನ್ನು ಬಾಧಿಸುತ್ತಿರುವ ಕೊರೊನಾವೈರಸ್ ಸೋಂಕಿನ ಮೂಲವನ್ನು ಪತ್ತೆ ಮಾಡುವುದಕ್ಕೆ ವಿಶ್ವದ ಬಲಿಷ್ಠ ರಾಷ್ಟ್ರಗಳ ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ. ಚೀನಾದಲ್ಲೇ ಮೊದಲು ಕಾಣಿಸಿಕೊಂಡ ರೋಗದ ಹುಟ್ಟು ಹೇಗೆ ಎಂಬುದರ ಗುಟ್ಟು ಮಾತ್ರ ಇಂದಿಗೂ ರಟ್ಟಾಗುತ್ತಿಲ್ಲ. ಕೊವಿಡ್-19 ಸೋಂಕಿನ ಪ್ರಕರಣದ ಮೂಲ ಏನು ಎಂಬ ಬಗ್ಗೆ ಸ್ಪಷ್ಟತೆಯನ್ನು ಕೋರಲಾಗುತ್ತಿದೆ. ಈ ಹಿನ್ನೆಲೆ ಅಮೆರಿಕಾ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳು ಚೀನಾದ ಮೇಲೆ ಒತ್ತಡ ಹೇರುತ್ತಿವೆ.

ವೈದ್ಯಕೀಯ ಸಮುದಾಯವನ್ನು ವಂಚಿಸಿತಾ ಚೀನಾ?
ಆಸ್ಟ್ರೇಲಿಯಾ ಆತಿಥೇಯ ಸ್ಕೈ ಸುದ್ದಿ ವಾಹಿನಿಯ ಆಂಡ್ರೋ ಬೋಲ್ಟ್ ಫ್ಲಿಂಡರ್ಸ್ ವೈದ್ಯಕೀಯ ಕೇಂದ್ರದ ಅಂತಃಸ್ರಾವ ಶಾಸ್ತ್ರ ವಿಭಾಗದ ನಿರ್ದೇಶಕ ನಿಕೋಲೈ ಪೆಟ್ರೊಸ್ಕಿ ಜೊತೆ ಕಳೆದ ಮೇ 26ರಂದು ಈ ಬಗ್ಗೆ ಮಾತನಾಡಿದ್ದರು. ಇಡೀ ಜಗತ್ತಿನ ವೈದ್ಯಕೀಯ ಸಮುದಾಯವನ್ನು ಚೀನಾ ವಂಚಿಸಿದೆ ಎಂದು ಪೆಟ್ರೊಸ್ಕಿ ಹೇಳಿರುವ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಪೋಸ್ಟ್ ವರದಿ ಮಾಡಿದೆ. ಆಂಡ್ರ್ಯೂ ಬೋಲ್ಟ್ ಕೂಡ ತಮ್ಮ ಕಾರ್ಯಕ್ರಮದ ದಿ ಬೋಲ್ಟ್ ರಿಪೋರ್ಟ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದರು. ಅಂತೂ ಇತ್ತೀಚಿಗೆ ಬಹಳಷ್ಟು ತಜ್ಞರು ಸರಿಯಾಗಿ ಹೇಳುತ್ತಿದ್ದಾರೆ. ಈ ವೈರಸ್ ಚೀನಾದ ಲ್ಯಾಬ್‌ನಿಂದ ತಪ್ಪಿಸಿಕೊಂಡಂತೆ ಕಾಣುತ್ತದೆ ಎಂಬುದಾಗಿ ಹೇಳುತ್ತಿದ್ದಾರೆ.
COVID-19 ರೋಗಾಣು ಪ್ಯಾಂಗೊಲಿನ್‌ಗಳಿಂದ ಹುಟ್ಟಿಕೊಂಡಿದೆ ಎಂದು ಚೀನಾದ ಕೆಲವು ವಿಜ್ಞಾನಿಗಳು ಹೇಳಿದ್ದರು. ಆದರೆ ಹಾಗೆ ಆಗುವುದಕ್ಕೆ ಯಾವುದೇ ಸಾಧ್ಯತೆ ಇಲ್ಲ ಎಂದು ಪ್ರೊಫೆಸರ್ ನಿಕೋಲೈ ಪೆಟ್ರೊಸ್ಕಿ ತಿಳಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಪೋಸ್ಟ್ ವರದಿ ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆಗೆ ದತ್ತಾಂಶ ನೀಡಲು ನಿರಾಕರಣೆ
ಕೊರೊನಾವೈರಸ್ ಸೋಂಕಿನ ಮೂಲವನ್ನು ಹುಡುಕಿ ಹೊರಟ ವಿಶ್ವ ಆರೋಗ್ಯ ಸಂಸ್ಥೆಯ ತನಿಖಾ ತಂಡಕ್ಕೆ ವುಹಾನ್ ನಗರ ಸೂಕ್ಷ್ಮರೋಗಾಣು ಶಾಸ್ತ್ರ ಅಧ್ಯಯನ ಸಂಸ್ಥೆಯಿಂದ ರೋಗಾಣು ಸೋರಿಕೆ ಆಗಿರುವ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿತ್ತು. ಆದರೆ ಇತ್ತೀಚಿಗೆ ಅದೇ WHO ತನಿಖಾ ತಂಡದಲ್ಲಿದ್ದ ಸದಸ್ಯರೊಬ್ಬರು ಚೀನಾದ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ವುಹಾನ್ ನಗರ ವೈರಾಲಜಿ ಸಂಸ್ಥೆಗೆ ಪ್ರವೇಶಿಸಲು ಹಾಗೂ ಕೊವಿಡ್-19 ಸೋಂಕಿನ ಆರಂಭಿಕ ಹಂತದ ದತ್ತಾಂಶವನ್ನು ನೀಡಲು ಚೀನಾ ನಿರಾಕರಿಸಿತ್ತು ಎಂದು ಹೇಳಿರುವ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಪೋಸ್ಟ್ ವರದಿ ಮಾಡಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications