• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಸಾವಿನ ಸಂಖ್ಯೆಯಲ್ಲಿ ಸ್ಪೇನ್ ಹಿಂದಿಕ್ಕಿದ ಅಮೆರಿಕ

|

ದೆಹಲಿ, ಏಪ್ರಿಲ್ 9: ಜಗತ್ತಿನಾದ್ಯಂತ 15 ಲಕ್ಷ ಜನರಿಗೆ ಸೋಂಕು ಪತ್ತೆಯಾಗಿದ್ದು, 88,518 ಜನರು ಮೃತಪಟ್ಟಿದ್ದಾರೆ. ಇದುವರೆಗೂ ಇಟಲಿ ದೇಶದಲ್ಲಿ ಅತಿ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಟಲಿ ಬಿಟ್ಟರೆ ಸ್ಪೇನ್‌ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸಾವನ್ನಪ್ಪಿದ್ದರು.

ಆದರೆ, ಅಮೆರಿಕ ದೇಶ ಕೊರೊನಾ ಸಾವಿನ ಸಂಖ್ಯೆಯಲ್ಲಿ ಸ್ಪೇನ್ ದೇಶವನ್ನ ಹಿಂದಿಕ್ಕಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಸಾವು ವರದಿಯಾಗಿರುವ ದೇಶಗಳ ಪೈಕಿ ಇಟಲಿ ಬಿಟ್ಟರೆ ಎರಡನೇ ಸ್ಥಾನದಲ್ಲಿ ಯುಎಸ್‌ ಸ್ಥಾನ ಪಡೆದುಕೊಂಡಿದೆ.

ಸಾವಿನ ಅಂದಾಜು ವರದಿ ನೋಡಿ ಸಮಾಧಾನಗೊಂಡ ಅಮೆರಿಕ?

ಟಾಪ್ ಐದು ರಾಷ್ಟ್ರಗಳ ಪಟ್ಟಿ ಇಲ್ಲಿದೆ

ಇಟಲಿ - 139,422 ಸೋಂಕಿತರು, 17,669 ಸಾವು

ಅಮೆರಿಕ - 435,160 ಸೋಂಕಿತರು, 14,797 ಸಾವು

ಸ್ಪೇನ್ - 148,220 ಸೋಂಕಿತರು, 14,792 ಸಾವು

ಫ್ರಾನ್ಸ್ - 112,950 ಸೋಂಕಿತರು, 10,869 ಸಾವು

ಯುಕೆ - 60,733 ಸೋಂಕಿತರು, 7,097 ಸಾವು

ಅಮೆರಿಕದಲ್ಲಿ ಒಂದೇ ದಿನ 1940 ಸಾವಿರ ಜನರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಸತತ ಎರಡು ದಿನಗಳು ಸುಮಾರು 2000 ಜನರು ಯುಎಸ್‌ ದೇಶದಲ್ಲಿ ಕೊರೊನಾ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದಾರೆ.

ಕೊರೊನಾ ಐಸೋಲೇಶನ್ ವಾರ್ಡ್‌ನಲ್ಲಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ?

ಉಳಿದ ದೇಶಗಳ ಅಂಕಿ ಅಂಶಗಳನ್ನು ಗಮನಿಸಿದರೆ ಅಮೆರಿಕದಲ್ಲಿ ಅತಿ ಹೆಚ್ಚು ಸೋಂಕಿತರು ವರದಿಯಾಗಿದ್ದಾರೆ. ಸ್ಪೇನ್ ಮತ್ತು ಅಮೆರಿಕ ನಡುವೆ ಅಷ್ಟು ದೊಡ್ಡ ವ್ಯತ್ಯಾಸವಿಲ್ಲ. ಸ್ಪೇನ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಸಾವಿನ ಸಂಖ್ಯೆ ಇಳಿಮುಖವಾಗಿದೆ. ಆದರೆ, ಅಮೆರಿಕದಲ್ಲಿ ಮಾತ್ರ ದಿನದಿಂದ ದಿನಕ್ಕೆ ಸೋಂಕಿತರು ಮತ್ತು ಸಾವಿನ ಸಂಖ್ಯೆ ಏರುತ್ತಲೇ ಇದೆ.

English summary
US has beaten Spain in number of deaths, now stands next to Italy: sees another deadliest day with 2,000 death for second day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X