• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

|
   ಹೆಚ್ಚಾಯ್ತು ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ | Oneindia Kannada

   ಟೆಹರಾನ್, ಜನವರಿ 3: ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಅಮೆರಿಕದ ಸೇನೆಯು ಇರಾನ್ ಸೇನೆಯ ಕಮಾಂಡರ್ ಖಾಸಿಂ ಸೋಲೆಮನಿ ಹತ್ಯೆ ನಡೆಸಿರುವುದು ಅಂತಾರಾಷ್ಟ್ರೀಯ ತೀವ್ರ ಚರ್ಚೆಗೀಡುಮಾಡಿದೆ. ಹಲವು ವರ್ಷಗಳಿಂದ ನಡೆಯುತ್ತಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

   ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೂಚನೆಯಂತೆ ಈ ದಾಳಿ ಮತ್ತು ಹತ್ಯೆ ನಡೆದಿದೆ ಎಂದು ಅಮೆರಿಕ ಸೇನೆಯ ಪ್ರಧಾನ ಕಚೇರಿ ತಿಳಿಸಿದೆ. ವಿದೇಶದಲ್ಲಿನ ಅಮೆರಿಕದ ನಾಗರಿಕರನ್ನು ಹಾಗೂ ದೇಶದ ಹಿತಾಸಕ್ತಿಗಳನ್ನು ಕಾಪಾಡಲು ನಮ್ಮ ಅಧ್ಯಕ್ಷರು ತೆಗೆದುಕೊಂಡ ನಿರ್ಧಾರದಂತೆ ಈ ದಾಳಿ ನಡೆದಿದೆ ಎಂದು ಹೇಳಿದೆ.

   ಇರಾಕ್‌ನಲ್ಲಿ ಇರಾನಿನ ಸೇನಾಧಿಕಾರಿಯನ್ನು ಹತ್ಯೆಗೈದ ಅಮೆರಿಕ

   ತನ್ನ ಖುದ್ಸ್ ಪಡೆಯ ಸೇನಾಧಿಕಾರಿಯನ್ನು ಹತ್ಯೆಗೈದ ಅಮೆರಿಕದ ಮೇಲೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಖಾಸಿಂ ಸೋಲೆಮನಿ ಅವರ ಹತ್ಯೆಯು 'ಅತ್ಯಂತ ಅಪಾಯಕಾರಿ ಹಾಗೂ 'ಮೂರ್ಖತನದ ಕೃತ್ಯ' ಎಂದು ಕಿಡಿಕಾರಿರುವ ಇರಾನ್, ಮುಂದಿನ ಎಲ್ಲ ಪರಿಣಾಮಗಳಿಗೆ ಅಮೆರಿಕವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

   ದಾಳಿ ನಡೆಸಲು ಸಂಚು ರೂಪಿಸಿದ್ದರು

   ದಾಳಿ ನಡೆಸಲು ಸಂಚು ರೂಪಿಸಿದ್ದರು

   ಇರಾಕ್ ಸೇರಿದಂತೆ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ರಾಯಭಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಲು ಸೋಲೆಮನಿ ಸಂಚು ರೂಪಿಸಿದ್ದರು. ಹೀಗಾಗಿ ಅದನ್ನು ತಡೆಯಲು ಈ ದಾಳಿ ನಡೆಸಲಾಗಿದೆ. ಅಮೆರಿಕ ಹಾಗೂ ಅದರ ಮಿತ್ರಪಡೆಗಳ ನೂರಾರು ಸೈನಿಕರ ಸಾವಿಗೆ ಸೋಲೆಮನಿ ಹಾಗೂ ಅವರ ಖುದ್ಸ್ ಪಡೆಯೇ ಕಾರಣ ಎಂದು ಅಮೆರಿಕದ ರಕ್ಷಣಾ ಇಲಾಖೆ ಆರೋಪಿಸಿದೆ.

   ಅಮೆರಿಕ ಪರಿಣಾಮ ಎದುರಿಸಬೇಕಾಗುತ್ತದೆ

   ಅಮೆರಿಕ ಪರಿಣಾಮ ಎದುರಿಸಬೇಕಾಗುತ್ತದೆ

   'ಅಮೆರಿಕದ ಅಂತಾರಾಷ್ಟ್ರೀಯ ಭಯೋತ್ಪಾದನೆ ಹಾಗೂ ದಾಯೆಶ್ (ಐಸಿಸ್), ಅಲ್ ನುಸ್ರಾಹ್, ಅಲ್ ಕೈದಾ ಮುಂತಾದವುಗಳ ವಿರುದ್ಧ ಹೋರಾಡುತ್ತಿದ್ದ ಜನರಲ್ ಸೋಲೆಮನಿ ಅವರನ್ನು ಗುರಿಯಾಗಿಸಿ ದಾಳಿ ಮಾಡಿ ಕೊಲೆ ಮಾಡಿದ ಕೃತ್ಯವು ಅತ್ಯಂತ ಅಪಾಯಕಾರಿ ಮತ್ತು ಮೂರ್ಖತನದ್ದು. ತನ್ನ ಪುಂಡಾಟಿಕೆಯ ದುಸ್ಸಾಹಸಗಳ ಪರಿಣಾಮಗಳನ್ನು ಅಮೆರಿಕವು ಅನುಭವಿಸಬೇಕಾಗುತ್ತದೆ' ಎಂದು ಇರಾನ್ ವಿದೇಶಾಂಗ ಸಚಿವ ಜಾವೇದ್ ಝಾರಿಫ್ ಹೇಳಿದ್ದಾರೆ.

   ಇರಾನ್ ನ ತೈಲ ಟ್ಯಾಂಕರ್ ಮೇಲೆ ಜೆಡ್ಡಾ ಸಮೀಪ ಕ್ಷಿಪಣಿ ದಾಳಿ

   ಡೊನಾಲ್ಡ್ ಟ್ರಂಪ್ ಟ್ವೀಟ್

   ಡೊನಾಲ್ಡ್ ಟ್ರಂಪ್ ಟ್ವೀಟ್

   ಸೋಲೆಮನಿ ನಿಧನದ ಸುದ್ದಿ ದೃಢಪಡುತ್ತಿದ್ದಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಮೆರಿಕದ ಧ್ವಜದ ಚಿತ್ರವನ್ನು ಪ್ರಕಟಿಸಿದ್ದರು. ಅದರಲ್ಲಿ ಯಾವುದೇ ಒಕ್ಕಣೆ ಇರಲಿಲ್ಲ. ಖಾಸಿ ಸೋಲೆಮನಿ ಜತೆಗೆ ಇರಾನ್‌ನ ಅರೆಸೇನಾಪಡೆ ಹಶೀದ್-ಅಲ್-ಶಾಬಿಯ ಡೆಪ್ಯುಟಿ ಕಮಾಂಡರ್ ಕೂಡ ಮೃತಪಟ್ಟಿದ್ದಾರೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

   ದಾಳಿಯಲ್ಲಿ ಎಂಟು ಮಂದಿ ಸಾವು

   ದಾಳಿಯಲ್ಲಿ ಎಂಟು ಮಂದಿ ಸಾವು

   ಇರಾಕಿನ ಬಾಗ್ದಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿದ್ದು, ಇರಾನ್ ಬೆಂಬಲಿತ ಸಶಸ್ತ್ರ ಪಡೆಯ ಮುಖ್ಯಸ್ಥ ಸೋಲೆಮನಿ ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ. ಪ್ರಭಾವಿ ವ್ಯಕ್ತಿಯೋರ್ವನನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಖಾಸಿಂ ಸೋಲೆಮನಿ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ. ಆದರೆ ಈ ಪ್ರಭಾವಿ ವ್ಯಕ್ತಿ ಯಾರೆಂಬುದು ತಿಳಿದಿಲ್ಲ. ಈ ಘಟನೆ ಇರಾನ್-ಅಮೆರಿಕ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ.

   English summary
   Iran termed US act of killing Soleimani and extremely dangerous and foolish escalation. US bears responsibility for all consequences of its rogue adventurism.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X