ಬಿಜೆಪಿ ಕಾರ್ಪೋರೇಟರ್ ಮನೆಗೆ ಪಾಕಿಸ್ತಾನಿ ಸೊಸೆ: ಮಗನಿಗೆ ಆನ್‌ಲೈನ್‌ನಲ್ಲಿ ಮದುವೆ!

ಜೌನ್‌ಪುರ ಅಕ್ಟೋಬರ್ 20: ಎರಡು ದೇಶಗಳ ನಡುವೆ ಗಡಿ ಹಾಗೂ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಮನುಷ್ಯರ ಹೃದಯಗಳ ನಡುವಿನ ಸಂಬಂಧ ಗಟ್ಟಿಯಾಗಿಯೇ ಇರುತ್ತದೆ ಎಂಬುದಕ್ಕೆ ಸಾಕ್ಷಿಯಾಗುವಂತಹ ಪ್ರಕರಣ ನಡೆದಿದೆ. ಉತ್ತರ ಪ್ರದೇಶದ ಜಾನ್‌ಪುರದ ಬಿಜೆಪಿ ಕಾರ್ಪೋರೇಟರ್ ತಹಸೀನ್ ಶಾಹಿದ್ ಅವರ ಪುತ್ರ ಪಾಕಿಸ್ತಾನದ ಹುಡುಗಿಯನ್ನು ಆನ್‌ಲೈನ್‌ನಲ್ಲಿ ಮದುವೆಯಾದ ಘಟನೆ ನಡೆದಿದೆ.

ಕಾರ್ಪೋರೇಟರ್ ತಹಸೀನ್ ಪುತ್ರ ಅಬ್ಬಾಸ್ ಜಾನ್‌ಪುರದಲ್ಲಿಯೇ ಫ್ಲಿಪ್‌ಕಾರ್ಟ್‌ನಲ್ಲಿ ಕೆಲಸ ಮಾಡುತ್ತಾರೆ. ವಧು ಅಂದ್ಲೀಬ್ ಜಹ್ರಾ ಪಾಕಿಸ್ತಾನದ ವಿಶ್ವವಿದ್ಯಾಲಯವೊಂದರಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

UP Jaunpur BJP Corporator s son gets married to Pakistani girl in online

ಕಾರ್ಪೋರೇಟರ್ ತಹಸೀನ್ ತಮ್ಮ ಅಕ್ಕ ರಾಣಾ ಯಾಸ್ಮಿನ್ ಜೈದಿ ಅವರ ಮದುವೆಯನ್ನು 1986ರಲ್ಲಿ ಮಾಡಿದರು. ರಾಣಾ ಯಾಸ್ಮಿನ್ ಜೈದಿ ಅವರ ಕುಟುಂಬ ಪಾಕಿಸ್ತಾನದ ಲಾಹೋರ್‌ನಲ್ಲಿ ನೆಲೆಸಿದೆ. ತಹಸೀನ್ ಅವರ ತಂದೆ ಮತ್ತು ತಾಯಿ ಮಗಳು ರಾಣಾ ಯಾಸ್ಮಿನ್ ಜೈದಿ ಅವರೊಂದಿಗೆ ತಹಸೀನ್ ಮಗನನ್ನು ಮದುವೆ ಮಾಡಿಸಬೇಕು ಎಂದು ಹಲವು ವರ್ಷಗಳ ಹಿಂದಿನಿಂದಲೂ ಆಸೆಪಟ್ಟಿದ್ದರು. ಹೀಗಾಗಿ ತಹಸೀನ್ ಅವರು ತಮ್ಮ ಪುತ್ರ ಅಬ್ಬಾಸ್‌ಗೆ ತಮ್ಮ ಅಕ್ಕನ ಮಗಳೊಂದಿಗೆ ಮದುವೆ ಮಾಡಿಸಲು ನಿರ್ಧರಿಸುತ್ತಾರೆ.

ವೀಸಾ ಸಿಗಲಿಲ್ಲ

ಅಂತೆಯೇ ಕಾರ್ಪೋರೇಟರ್ ತಹಸೀನ್ ಅವರು ತಮ್ಮ ಹಿರಿಯ ಮಗ ಮೊಹಮ್ಮದ್ ಅಬ್ಬಾಸ್ ಹೈದರ್ ಮತ್ತು ಪಾಕಿಸ್ತಾನದ ಲಾಹೋರ್‌ನ ಅಂದ್ಲೀಬ್ ಜಹ್ರಾ ಅವರೊಂದಿಗೆ ಒಂದು ವರ್ಷದ ಹಿಂದೆ ವಿವಾಹವನ್ನು ನಿಶ್ಚಯಿಸಿದ್ದರು.

UP Jaunpur BJP Corporator s son gets married to Pakistani girl in online

ಮದುವೆ ವಿಚಾರವಾಗಿ ಎರಡೂ ಕುಟುಂಬಗಳಲ್ಲಿ ಸಂತಸದ ವಾತಾವರಣ ಇತ್ತು. ಮದುವೆ ಸಿದ್ಧತೆಗಳು ಭರದಿಂದ ಸಾಗಿದ್ದವು. ಆದರೆ ಮದುವೆಯ ದಿನಾಂಕ ಸಮೀಪಿಸಿದಾಗ ಪಾಕಿಸ್ತಾನಕ್ಕೆ ತೆರಳಲು ಹುಡುಗನ ಕುಟುಂಬಸ್ಥರಿಗೆ ವೀಸಾ ಸಿಗಲಿಲ್ಲ. ಇದೇ ವೇಳೆ ಅಂದ್ಲೀಬ್ ಅವರ ತಾಯಿ ರಾಣಾ ಯಾಸ್ಮಿನ್ ಜೈದಿ ಅವರ ಆರೋಗ್ಯ ಕೂಡ ಹದಗೆಟ್ಟಿತು. ಅವರನ್ನು ಐಸಿಯುಗೆ ದಾಖಲಿಸಲಾಯಿತು. ಹೀಗಿರುವಾಗ ಮದುವೆಗಾಗಿ ಪಾಕಿಸ್ತಾನಕ್ಕೆ ತೆರಳುವುದೇ ಕಷ್ಟವಾಯಿತು.

ಆನ್ಲೈನ್ ​​ನಿಕಾಹ್

ಈ ವೇಳೆ ಎರಡೂ ಕುಟುಂಬಗಳು ಒಂದು ವಿಶಿಷ್ಟ ನಿರ್ಧಾರವನ್ನು ತೆಗೆದುಕೊಂಡಿವೆ. ಶುಕ್ರವಾರ ರಾತ್ರಿ ನೂರಾರು ಜನ ಮದುವೆ ಮನೆ ಸೇರಿದರು. ಜೌನ್‌ಪುರದಲ್ಲಿ ಸಂಬಂಧಿಕರು ಜಮಾಯಿಸಿದರು. ಮತ್ತೊಂದೆಡೆ ಅಂದ್ಲೀಬ್ ಅವರ ಕುಟುಂಬ ಮದುವೆ ಮನೆ ಸೇರಿದರು. ನಂತರ ಉಭಯ ದೇಶಗಳ ಮೌಲಾನ ನೆರವಿನಿಂದ ಆನ್ ಲೈನ್ ಮದುವೆ ಆಯೋಜಿಸಲಾಯಿತು. ಈ ಅದ್ಭುತ ಸಮಾರಂಭವನ್ನು ಟಿವಿ ಪರದೆಯಲ್ಲಿ ನೇರಪ್ರಸಾರ ಮಾಡಲಾಯಿತು. ಆನ್‌ಲೈನ್‌ನಲ್ಲೇ ಮೌಲಾನಾ ಇಸ್ಲಾಮಿಕ್ ಆಚರಣೆಗಳ ಪ್ರಕಾರ ನಿಕಾಹ್ ಮಾಡಿದರು.

ದೇಶಗಳ ನಡುವಿನ ವಿವಾಹ ಸಂಬಂಧ

ಶಿಯಾ ಧಾರ್ಮಿಕ ಮುಖಂಡ ಮೌಲಾನಾ ಮಹ್ಫೂಜುಲ್ ಹಸನ್ ಖಾನ್ ನಿಕಾಹ್ ಪ್ರಕ್ರಿಯೆಯನ್ನು ವಿವರಿಸುತ್ತಾ, ಇಸ್ಲಾಂ ಧರ್ಮದಲ್ಲಿ ಹುಡುಗಿಯ ಒಪ್ಪಿಗೆ ಬಹಳ ಮುಖ್ಯವಾಗಿರುತ್ತದೆ. ಹುಡುಗಿ ಮೌಲಾನಾಗೆ ಆನ್‌ಲೈನ್‌ನಲ್ಲೇ ಅನುಮತಿ ನೀಡಿದರೆ, ನಂತರ ನಿಕಾಹ್ ಮಾಡಬಹುದು ಎಂದು ಹೇಳಿದರು. ಅದರಂತೆ ಜೋಡಿಗಳ ಒಪ್ಪಿಗೆ ಮೇರೆಗೆ ಮದುವೆ ಕೂಡ ಆನ್‌ಲೈನ್‌ನಲ್ಲೇ ನಡೆದಿದೆ.

ಇತ್ತೀಚೆಗೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿರುವುದು ಎರಡೂ ದೇಶಗಳ ಜನರಲ್ಲಿ ಬಾಂಧವ್ಯ ಸುಧಾರಿಸುವ ಭರವಸೆ ಮೂಡಿಸಿದೆ.

ಎರಡು ದೇಶಗಳ ಹೃದಯದ ಕಥೆ

ಮದುವೆಯ ನಂತರ, ವರ ಮೊಹಮ್ಮದ್ ಅಬ್ಬಾಸ್ ಹೈದರ್ ತನ್ನ ಪತ್ನಿ ಅಂದ್ಲೀಬ್ ಅವರನ್ನು ಭಾರತಕ್ಕೆ ಬರಲು ಪಾಕಿಸ್ತಾನ ಸರ್ಕಾರ ಶೀಘ್ರದಲ್ಲೇ ವೀಸಾ ನೀಡಬೇಕು ಎಂದು ಮನವಿ ಮಾಡಿದರು. ಬಿಜೆಪಿ ಎಂಎಲ್ಸಿ ಬ್ರಿಜೇಶ್ ಸಿಂಗ್ ಪ್ರಿಶು ಅವರು ಜಿಲ್ಲೆಯ ನಾಗರಿಕರೊಂದಿಗೆ ವಿವಾಹ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅವರು ಈ ವಿಶೇಷ ಸಂದರ್ಭದಲ್ಲಿ ವರನ ತಂದೆಯನ್ನು ಅಭಿನಂದಿಸಿದರು. ಇದು ಕೇವಲ ಎರಡು ಕುಟುಂಬಗಳಲ್ಲದೇ ಎರಡು ದೇಶಗಳ ಹೃದಯದ ಕಥೆ. ರಾಜಕೀಯ ಮತ್ತು ಗಡಿಗಳ ನಡುವೆ ಅನೇಕ ಸಮಸ್ಯೆಗಳು ಉದ್ಭವಿಸಿದರೆ, ಮಾನವೀಯತೆ ಮತ್ತು ಸಂಬಂಧಗಳ ಎಳೆ ಅವುಗಳನ್ನು ಸಂಪರ್ಕಿಸಲು ಕೆಲಸ ಮಾಡುತ್ತದೆ ಎಂದರು.

ಅಲ್ಲದೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತೊಮ್ಮೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆಗೆ ಮನವಿ ಮಾಡಿದ್ದು, ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಸ್ವಲ್ಪ ಮಟ್ಟಿಗೆ ಪರಿಹರಿಸುವ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+