Breaking: ಯುಎಸ್ ಫುಡ್ ಕೋರ್ಟ್‌ನಲ್ಲಿ ಗುಂಡಿನ ದಾಳಿ, 3 ಮಂದಿ ಸಾವು
ವಾಶಿಂಗ್ಟನ್, ಜುಲೈ 18: ಯುನೈಟೆಡ್ ಸ್ಟೇಟ್ಸ್‌ನ ಇಂಡಿಯಾನಾ ಸ್ಟೇಟ್ ಮಾಲ್‌ನ ಫುಡ್ ಕೋರ್ಟ್‌ನಲ್ಲಿ ವ್ಯಕ್ತಿಯೊಬ್ಬ ನಡೆಸಿರುವ ಗುಂಡಿನ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರೀನ್‌ವುಡ್ ಪಾರ್ಕ್ ಮಾಲ್‌ನಲ್ಲಿ ಈ ಘಟನೆ ನಡೆದಿದ್ದು, ಬಂದೂಕುಧಾರಿಯೊಬ್ಬ ಶಸ್ತ್ರಸಜ್ಜಿತ ನಾಗರಿಕರೊಬ್ಬರನ್ನು ಕೊಂದಿದ್ದಾನೆ ಎಂದು ಪೊಲೀಸು ಹೇಳಿದ್ದಾರೆ. ಇಬ್ಬರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗ್ರೀನ್‌ವುಡ್ ಪೊಲೀಸ್ ಇಲಾಖೆಯ ಮುಖ್ಯಸ್ಥ ಜಿಮ್ ಐಸನ್ ಹೇಳಿದ್ದಾರೆ.
"ಗ್ರೀನ್‌ವುಡ್ ಪೊಲೀಸ್ ಇಲಾಖೆಯು ಪರಿಸ್ಥಿತಿಯನ್ನು ನಿಯಂತ್ರಿಸಿದೆ. ಕಮಾಂಡ್ ಪೋಸ್ಟ್‌ನೊಂದಿಗೆ ನೇರ ಸಂಪರ್ಕದಲ್ಲಿದ್ದು, ಹೆಚ್ಚಿನ ಬೆದರಿಕೆಗಳೇನಿಲ್ಲ," ಎಂದು ಮೇಯರ್ ಮಾರ್ಕ್ ಮೈಯರ್ಸ್ ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಾರೆ.

ಗುಂಡಿನ ದಾಳಿ ಉದ್ದೇಶ ತಿಳಿದಿಲ್ಲ: ಬಂದೂಕುಧಾರಿ, ವಯಸ್ಕ ಪುರುಷ, ಶಸ್ತ್ರಸಜ್ಜಿತ ನಾಗರಿಕನಿಂದ ಗುಂಡಿಕ್ಕಿ ಕೊಂದಿದ್ದಾನೆ. ಆದಾಗ್ಯೂ, ಗುಂಡಿನ ದಾಳಿಯ ಹಿಂದಿನ ಉದ್ದೇಶವೇನು ಎಂಬುದು ಖಾತ್ರಿಯಾಗಿಲ್ಲ. ಈ ಕುರಿತು ಪೊಲೀಸರು ತನಿಖೆ ಶುರು ಮಾಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಸ್ಥಳೀಯ ತುರ್ತು ಕರೆ ಕೇಂದ್ರವು ಫುಡ್ ಕೋರ್ಟ್‌ನಲ್ಲಿ ಸಂಜೆ 6 ಗಂಟೆಗೆ GMT ನಲ್ಲಿ ಶೂಟಿಂಗ್ ನಡೆದಿರುವ ಬಗ್ಗೆ ದೂರುಗಳು ಕೇಳಿ ಬರುವುದಕ್ಕೆ ಶುರುವಾಯಿತು ಎಂದು ಮುಖ್ಯ ಜಿಮ್ ಐಸನ್ ಹೇಳಿದ್ದಾರೆ.












Click it and Unblock the Notifications