• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌ಗೆ ಪರಿಹಾರ ನೀಡುವ ನಿರ್ಣಯದ ಪರ ಯುಎನ್‌ಜಿಎ ಮತ

|
Google Oneindia Kannada News

ನವದೆಹಲಿ, ನವೆಂಬರ್‌ 15: ವಿಶ್ವಸಂಸ್ಥೆ ಸಾಮಾನ್ಯ ಸಭೆ (ಯುಎನ್‌ಜಿಎ) ಉಕ್ರೇನ್‌ನ ರಷ್ಯಾದ ಆಕ್ರಮಣದಿಂದ ಉಂಟಾದ ಹಾನಿಗಳು ಪರಿಹಾರ ಹಾಗೂ ವಶಪಡಿಸಿಕೊಂಡ ಪ್ರದೇಶದ ವಾಪಸಾತಿ ಕಾರ್ಯವಿಧಾನವನ್ನು ರಚಿಸುವ ನಿರ್ಣಯದ ಪರವಾಗಿ ಮತ ಚಲಾಯಿಸಿತು.

ಒಟ್ಟು 94 ದೇಶಗಳು ಯುಎನ್‌ಜಿಎ ನಿರ್ಣಯದ ಪರವಾಗಿ ಮತ ಚಲಾಯಿಸಿದರೆ 14 ದೇಶಗಳು ವಿರುದ್ಧವಾಗಿ ಮತ ಚಲಾಯಿಸಿದವು. ಆದರೆ ಭಾರತ ಸೇರಿದಂತೆ 73 ರಾಷ್ಟ್ರಗಳು ಮತದಾನದಿಂದ ದೂರ ಉಳಿದವು. ವಿಶ್ವಸಂಸ್ಥೆ ವಿಶ್ವಸಂಸ್ಥೆ ಸಾಮಾನ್ಯ ಸಭೆ ಉಕ್ರೇನ್‌ ವಿರುದ್ಧ ರಷ್ಯಾದ ಆಕ್ರಮಣಕ್ಕೆ ಜವಾಬ್ದಾರಿಯಾಗಿರಬೇಕು ಎಂದು ತಿಳಿಸಿದೆ. 94 ದೇಶಗಳು ಉಕ್ರೇನ್‌ಗೆ ನೆರವಾಗಬೇಕು ಎಂದು ತಿಳಿಸಿವೆ. ಅಲ್ಲದೆ ಆಗಿರುವ ಹಾನಿಗಳನ್ನು ದೃಢೀಕರಿಸಲು ನೋಂದಾಯಿಸಿಕೊಳ್ಳಬೇಕು ಉಂಟಾದ ಹಾನಿಯಿಂದ ಹೊರಬರಲು ಪರಿಹಾರವನ್ನು ಅಗತ್ಯವನ್ನು ಸೂಚಿಸಬೇಕು ಎಂದು ಹೇಳಿದೆ.

ಜಿ 20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್‌ ಪುಟಿನ್‌ ಭಾಗವಹಿಸದಿರಲು ಕಾರಣವೇನು?ಜಿ 20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್‌ ಪುಟಿನ್‌ ಭಾಗವಹಿಸದಿರಲು ಕಾರಣವೇನು?

ಪಾಶ್ಚಿಮಾತ್ಯ ದೇಶಗಳು ಸಲ್ಲಿಸಿದ ಎರಡು ನಿರ್ಣಯವು ಉಕ್ರೇನ್‌ ವಿರುದ್ಧ ರಷ್ಯಾ ಆಕ್ರಮಣವನ್ನು ಖಂಡಿಸಿದೆ. ನಿರ್ಣಯದ ಪರ ಮತ ಹಾಕಿದ ಜೆಕ್‌ ಗಣರಾಜ್ಯವು ಉಕ್ರೇನ್‌ನಲ್ಲಿ ರಷ್ಯಾದಿಂದ ಉಂಟಾದ ಹಾನಿಗೆ ಆ ದೇಶವನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ತಿಳಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ರಷ್ಯಾ ಉಕ್ರೇನ್‌ನಲ್ಲಿನ ತನ್ನ ಯುದ್ಧದಿಂದ ಉಂಟಾದ ಹಾನಿಗಳಿಗೆ ಜವಾಬ್ದಾರರು ಎಂದು ಹೇಳಿ ಮತ ಹಾಕಿದೆ. ಝೆಕಿಯಾ ದೇಶವು ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನಿರ್ಣಯವನ್ನು ಬೆಂಬಲಿಸಿದ್ದು ಹಾನಿಯಿಂದಾದ ಪರಿಹಾರಗಳಿಗೆ ಕಾರ್ಯವಿಧಾನವನ್ನು ಆರಂಭಿಸಲು ಶಿಫಾರಸು ಮಾಡಿದೆ ಎಂದು ಜೆಕ್‌ ಗಣರಾಜ್ಯ ಯುಎನ್‌ ಮಿಷನ್‌ನಲ್ಲಿ ಟ್ವೀಟ್‌ ಮಾಡಿದೆ.

ಖೆರ್ಸನ್ ನಗರದಿಂದ ಹಿಂದೆ ಸರಿದ ರಷ್ಯಾ: ಉಕ್ರೇನ್‌ ಪ್ರಜೆಗಳ ಸಂಭ್ರಮಖೆರ್ಸನ್ ನಗರದಿಂದ ಹಿಂದೆ ಸರಿದ ರಷ್ಯಾ: ಉಕ್ರೇನ್‌ ಪ್ರಜೆಗಳ ಸಂಭ್ರಮ

ಫೆಬ್ರವರಿ ಕೊನೆಯ ವಾರದಲ್ಲಿ ಪ್ರಾರಂಭವಾದ ರಷ್ಯಾದ ಮಿಲಿಟರಿ ಕಾರ್ಯಾಚರಣೆಯಿಂದ ಇಲ್ಲಿಯವರೆಗೆ ಎರಡೂ ದೇಶಗಳ ಸಾವಿರಾರು ಮಿಲಿಟರಿ ಯೋಧರ ಸಾವಿಗೆ ಕಾರಣವಾಗಿದೆ. ಉಕ್ರೇನ್‌ ಮೇಲೆ ರಷ್ಯಾ ಯುದ್ಧದಿಂದ ಜಾಗತಿಕ ಆಹಾರ ಭದ್ರತೆಯ ಮೇಲೆ ಭಾರೀ ಹೊಡೆತ ಬಿದ್ದಿದೆ. ವ್ಯಾಪಾರ ವಸ್ತುಗಳ ಬೆಲೆಗಳ ತೀವ್ರ ಹೆಚ್ಚಳಕ್ಕೂ ಕಾರಣವಾಗಿದೆ.

ರಷ್ಯಾದೊಂದಿಗೆ ಉಕ್ರೇನ್‌ ಯುದ್ಧ ಆರಂಭವಾದಗಿನಿಂದಲೂ ಭಾರತದ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರಿದ್ದು ರಷ್ಯಾದಿಂದ ಆಮದು ಮಾಡಿಕೊಳ್ಳುವ ತೈಲ ರಫ್ತು, ಬೆಲೆಯಲ್ಲೂ ಹೊಡೆತ ನೀಡಿದೆ. ಭಾರತವು ರಷ್ಯಾವನ್ನು ಖಂಡಿಸಿಲ್ಲ. ಬದಲಾಗಿ ಅಲಿಪ್ತ ನೀತಿಯನ್ನು ಕಾಯ್ದುಕೊಂಡಿದ್ದು, ಸ್ವತಂತ್ರವಾಗಿದೆ. ವಿಶ್ವಸಂಸ್ಥೆಯ ವೇದಿಕೆಗಳಲ್ಲಿ ಹಿಂಸಾಚಾರ, ಶಾಂತಿ ಮತ್ತು ರಾಜತಾಂತ್ರಿಕತೆಯ ನಿಲುವಿಗೆ ಬದ್ಧತೆ ಕಾಯ್ದುಕೊಳ್ಳಲು ಆಗ್ರಹಿಸುತ್ತಿದೆ.

English summary
The United Nations General Assembly (UNGA) voted in favor of a resolution to create a mechanism for compensation for damages caused by Russia's invasion of Ukraine and the return of captured territory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X