Gaza War: ಅಂತೂ ಇಂತೂ ಗಾಜಾ ಪ್ರಜೆಗಳಿಗೆ ಸಿಕ್ಕಿತು ಬಿಗ್ ರಿಲೀಫ್!
ಗಾಜಾ ಪಟ್ಟಿಯಲ್ಲಿ ತೀವ್ರ ಪ್ರಮಾಣದಲ್ಲಿ ಯುದ್ದ ನಡೆಯುತ್ತಿದ್ದು, ಹಿಂಸಾಚಾರ ಹಿನ್ನೆಲೆಯಲ್ಲಿ ಈಗಾಗಲೇ 50,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂಬ ಆರೋಪ ಇದೆ. ಅದ್ರಲ್ಲೂ 80,000ಕ್ಕೂ ಹೆಚ್ಚು ಕಟ್ಟಡಗಳು ಕೂಡ ಹಮಾಸ್ & ಇಸ್ರೇಲ್ ಯುದ್ಧದಲ್ಲಿ ಪೀಸ್, ಪೀಸ್ ಆಗಿ ಹೋಗಿರುವ ಆರೋಪ ಕೂಡ ಇದೆ. ಇಷ್ಟೆಲ್ಲದರ ನಡುವೆ ಕೂಡ ಯುದ್ಧ ಮುಂದುವರಿದು, ಗಾಜಾ ಪಟ್ಟಿಯಲ್ಲಿ ಜನರಿಗೆ ಹನಿ ನೀರು ಸಿಗುವುದು ಕೂಡ ಕಷ್ಟವಾಗಿತ್ತು. ಇಂತಹ ಸಂಕಷ್ಟದ ಸಮಯದಲ್ಲೇ ಗಾಜಾ ಪಟ್ಟಿ ಜನರಿಗೆ ಇದೀಗ ಬಿಗ್ ರಿಲೀಫ್ ಸಿಕ್ಕಿದೆ!
ಹೌದು, ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಲ್ಲಿಸಬೇಕು ಎಂಬ ಒತ್ತಡ ಇಡೀ ಜಗತ್ತಿನಾದ್ಯಂತ ಕೇಳಿ ಬಂದಿತ್ತು. ಹೀಗಿದ್ದರೂ ಗಾಜಾ ಪಟ್ಟಿಯಲ್ಲಿ ಇನ್ನೂ ಶಾಂತಿ ಮೂಡಿ ಯುದ್ಧ ನಿಲ್ಲಿಸಿಲ್ಲ, ಬದಲಾಗಿ ಗಾಜಾ ಪಟ್ಟಿಯಲ್ಲಿ ಬಡಿದಾಟ ಮತ್ತಷ್ಟು ಹೆಚ್ಚಾಗಿದೆ. ಇದೇ ಕಾರಣಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಒತ್ತಡ ಹೆಚ್ಚಾಗಿತ್ತು, ಇಸ್ರೇಲ್ ವಿರುದ್ಧ ಈ ವಿಚಾರದಲ್ಲಿ ಬೇಸರ ಹೊರ ಹಾಕಿದ್ದವು ಪ್ರಮುಖ ಪಾಶ್ಚಿಮಾತ್ಯ ದೇಶಗಳು. ಇಷ್ಟೆಲ್ಲದರ ಮಧ್ಯೆ ಇದೀಗ ಗಾಜಾ ಪಟ್ಟಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ!

ಗಾಜಾ ಪಟ್ಟಿ ಜನರಿಗೆ ಬಿಗ್ ರಿಲೀಫ್!
ಹೌದು, ಇಸ್ರೇಲ್ ಒಪ್ಪಿಗೆ ಸೂಚಿಸಿ & ವಿರಾಮ ಘೋಷಣೆ ಮಾಡಿದ ನಂತರ ಗಾಜಾ ಜನರಿಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನೆಲ್ಲಾ ಪೂರೈಕೆ ಮಾಡಲು ಮುಂದಾಗಿದೆ ವಿಶ್ವಸಂಸ್ಥೆ. ಕಳೆದ ಮಾರ್ಚ್ ತಿಂಗಳಿಂದ ಅಂದ್ರೆ, ಸುಮಾರು 2 ತಿಂಗಳಿಂದ ಅಗತ್ಯ ವಸ್ತುಗಳು ಸಿಗದೆ ಒದ್ದಾಡಿ ಹೋಗಿದ್ದರು ಗಾಜಾ ಪಟ್ಟಿ ಜನರು. ಆದರೆ ಇದೀಗ ಇಸ್ರೇಲ್ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದು, ಗಾಜಾ ಪಟ್ಟಿ ಗಡಿ ಭಾಗದಲ್ಲಿ ನಿಂತಿದ್ದ ಅಗತ್ಯ ವಸ್ತುಗಳ ಟ್ರಕ್ ಮತ್ತು ಇತರ ವಾಹನಗಳನ್ನು ಒಳಗೆ ಬಿಡಲಾಗಿದೆ. ಈ ಮೂಲಕ ಗಾಜಾ ಪಟ್ಟಿಯಲ್ಲಿ ಒದ್ದಾಡುತ್ತಿದ್ದ ಜನರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಯುದ್ಧ ನಿಲ್ಲುವುದು ಯಾವಾಗ?
2023ರ ಅಕ್ಟೋಬರ್ 7 ಶನಿವಾರ ಶುರುವಾಗಿದ್ದ ಇಸ್ರೇಲ್ & ಹಮಾಸ್ ನಡುವಿನ ಯುದ್ಧದಲ್ಲಿ ಈಗಾಗಲೇ ಸಾವಿರ ಸಾವಿರ ಜನರ ಜೀವ ಬಲಿಯಾಗಿದೆ. ಗಾಜಾ ಪಟ್ಟಿಯ ಭಾಗಶಃ ಕಟ್ಟಡಗಳು ಪೀಸ್ ಪೀಸ್ ಆಗಿವೆ. ಜನ ಜೀವ ಉಳಿಸಿಕೊಳ್ಳಲು ನೂರಾರು ಕಿಲೋ ಮೀಟರ್ ದೂರಕ್ಕೆ ಓಡಿ ಹೋಗಿದ್ದು, ಇಷ್ಟಾದರೂ ಗಲಾಟೆ ಮಾತ್ರ ನಿಂತಿಲ್ಲ. ಹಿಂಸಾಚಾರದ ಬೆಂಕಿಯಲ್ಲಿ ಗಾಜಾ ಪಟ್ಟಿ ಬೆಂದು ಹೋಗಿದೆ. ಇದೇ ವಿಚಾರವಾಗಿ ಜಗತ್ತಿನ ಹಲವು ದೇಶಗಳು ಧ್ವನಿ ಎತ್ತಿದ್ದು, ಯುದ್ಧ ನಿಲ್ಲಬೇಕು ಎಂಬ ಆಗ್ರಹ ಮಾಡುತ್ತಿವೆ. ಆದರೂ ಯುದ್ಧ ನಿಂತಿಲ್ಲ, ಮತ್ತೊಂದು ಕಡೆ ಈ ಯುದ್ಧದ ನಂತರ ಗಾಜಾ ಪಟ್ಟಿಯನ್ನು ಇಸ್ರೇಲ್ ವಶಕ್ಕೆ ಪಡೆಯುತ್ತಾ? ಎಂಬ ಪ್ರಶ್ನೆ ಕೂಡ ಮೂಡಿದೆ.












Click it and Unblock the Notifications