• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ವಿರುದ್ಧ ಉ.ಕೊರಿಯಾ ಯುದ್ಧ? ಸಿದ್ಧವಾಯ್ತಾ ಹೊಸ ‘ಅಣುಬಾಂಬ್’?

|
Google Oneindia Kannada News

ಕಿಮ್ ಜಾಂಗ್ ಉನ್ ಹೆಸರು ಹೇಳಿದ್ರೆ ಸಾಕು ಎಷ್ಟೋ ದೇಶಗಳ ಕಿವಿಗೆ ಬಾಂಬ್ ಸದ್ದು ಕೇಳಿಸದೇ ಇರದು. ಯಾಕಂದ್ರೆ ಕಿಮ್ ತನ್ನ 'ಅಣುಬಾಂಬ್' ಪರೀಕ್ಷೆಗಳ ಮೂಲಕವೇ ಹವಾ ಇಟ್ಟಿರುವ ಮನುಷ್ಯ. ಇಂತಹ ವ್ಯಕ್ತಿ ಇತ್ತೀಚೆಗೆ ಸುಮ್ಮನಾಗಿದ್ದಾನೆ ಅಂತಾ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಭಾವಿಸಿದ್ದವು. ಆದರೆ ಇದೀಗ ಎಲ್ಲರೂ ಬೆಚ್ಚಿಬೀಳಿಸುವ ವರದಿಯೊಂದು ಹೊರಬಿದ್ದಿದೆ.

Recommended Video

   Kim Jong Un ಮತ್ತೊಮ್ಮೆ ಶುರು ಮಾಡಿದರೇ ನ್ಯೂಕ್ಲಿಯರ್ ಕಿರಿಕ್ | Oneindia Kannada

   ಹೌದು, ಕಿಮ್ ಜಾಂಗ್ ಉನ್ ಸುಮ್ಮನೆ ಕೂತಿಲ್ಲ. ಬದಲಾಗಿ ಮತ್ತೊಂದು ಅಣುಬಾಂಬ್ ತಯಾರಿಕೆಗೆ ವೇದಿಕೆ ಕಲ್ಪಿಸಿದ್ದಾನೆ..! ಅಂದಹಾಗೆ ಉ.ಕೊರಿಯಾ ತನ್ನ ಯೊಂಗ್‌ಬಿಯಾನ್ ಪರಮಾಣು ಸ್ಥಾವರವನ್ನು ಮತ್ತೆ ಪ್ರಾರಂಭಿಸಿದೆ ಎನ್ನಲಾಗಿದೆ. ವಿಶ್ವಸಂಸ್ಥೆಯ ಪರಮಾಣು ಸಂಸ್ಥೆ ಈ ಆಘಾತಕಾರಿ ಮಾಹಿತಿ ನೀಡಿದೆ. ಇಷ್ಟು ಮಾತ್ರವಲ್ಲ ಯೊಂಗ್‌ಬಿಯಾನ್ ಪರಮಾಣು ಸ್ಥಾವರದಲ್ಲೇ ನ್ಯೂಕ್ಲಿಯರ್ ವೆಪನ್ಸ್‌ಗೆ ಬಳಸುವ 'ಪ್ಲುಟೋನಿಯಂ' ಉತ್ಪಾದಿಸಲಾಗುತ್ತದೆ ಎನ್ನಲಾಗಿದೆ.

   'ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ'ಯನ್ನ 2009ರಲ್ಲೇ ಉತ್ತರ ಕೊರಿಯಾದಿಂದ ಹೊರಹಾಕಲಾಗಿತ್ತು. ಹೀಗಾಗಿ ಮಾಹಿತಿ ಸಿಗುವುದು ಸ್ವಲ್ಪ ಕಷ್ಟಕರವಾಗಿತ್ತು. 'ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ' ಜಗತ್ತಿನ ಪರಮಾಣು ಶಕ್ತಿಯ ಉತ್ಪಾದನೆ ಮತ್ತು ಬಳಕೆ ಮೇಲೆ ಕಣ್ಣಿಟ್ಟಿರುತ್ತದೆ. 'ನ್ಯೂಕ್ಲಿಯರ್' ವೆಪನ್ಸ್ ಮೇಲೂ ಈ ಸಂಸ್ಥೆ ಕಣ್ಣಿಟ್ಟಿರುತ್ತದೆ. ಆದರೆ 2009 ರಲ್ಲಿ ಉತ್ತರ ಕೊರಿಯಾದಿಂದ ಈ ಸಂಸ್ಥೆಯನ್ನೇ ಹೊರಹಾಕಲಾಗಿತ್ತು. ಹೀಗಾಗಿ 'ಸ್ಯಾಟಲೈಟ್' ತೆಗೆದಿದ್ದ ಚಿತ್ರಗಳನ್ನು ಅಧ್ಯಯನ ನಡೆಸಿದಾಗ ಆಘಾತಕಾರಿ ಸಂಗತಿ ಹೊರಬಿದ್ದಿದೆ.

   ಜುಲೈ ತಿಂಗಳಲ್ಲೇ ತಯಾರಿ..!

   ಜುಲೈ ತಿಂಗಳಲ್ಲೇ ತಯಾರಿ..!

   ಪರಮಾಣು ಸ್ಥಾವರ ಅಂದರೆ ನ್ಯೂಕ್ಲಿಯರ್ ರಿಯಾಕ್ಟರ್‌ಗಳಲ್ಲಿ ರಿಯಾಕ್ಟರ್ ಬಿಸಿ ಹೆಚ್ಚಾಗದಂತೆ ತಂಪಾಗಿಸಲು ನೀರು ಬಳಸಲಾಗುತ್ತದೆ. ಹೀಗೆ ಯೊಂಗ್‌ಬಿಯಾನ್ ಪರಮಾಣು ಸ್ಥಾವರದಿಂದ ನೀರನ್ನು ಹೊರಹಾಕುತ್ತಿರುವ ಚಿತ್ರಗಳು ಉಪಗ್ರಹದ ಕಣ್ಣಿಗೆ ಬಿದ್ದಿವೆ. ಯೊಂಗ್‌ಬಿಯಾನ್ ಒಟ್ಟು 5 ಮೆಗಾವ್ಯಾಟ್ ವಿದ್ಯುತ್ ತಯಾರಿಕೆಯ ಸಾಮರ್ಥ್ಯ ಹೊಂದಿರುವ ಪರಮಾಣು ಸ್ಥಾವರ. 2018ರಲ್ಲಿ ಟ್ರಂಪ್ ಭೇಟಿ ಬಳಿಕ ಕಿಮ್ ಯೊಂಗ್‌ಬಿಯಾನ್ ಅಣುಸ್ಥಾವರವನ್ನ ಕಿಮ್ ಬಂದ್ ಮಾಡಿಸಿದ್ದ ಎಂಬಂತೆ ಕಾಣುತ್ತದೆ. 2018ರಿಂದ ಈವರೆಗೆ ಅಣುಸ್ಥಾವರದಲ್ಲಿ ಯಾವುದೇ ಚಟುವಟಿಕೆ ನಡೆದಿರಲಿಲ್ಲ. ಆದರೆ 2021ರ ಜುಲೈ ತಿಂಗಳವರೆಗೂ 5 ತಿಂಗಳ ಕಾಲ ಅಣುಸ್ಥಾವರ ಸಿಕ್ಕಾಪಟ್ಟೆ ಆಕ್ಟಿವ್ ಆಗಿತ್ತು ಎನ್ನುತ್ತಿದ್ದಾರೆ ತಜ್ಞರು.

   ಮುಂದೇನು ಕಿಮ್ ಕಥೆ..?

   ಮುಂದೇನು ಕಿಮ್ ಕಥೆ..?

   ಸುಮ್ಮನೆ ಇದ್ದ ಗಾಯವನ್ನು ಕಿಮ್ ಮತ್ತೆ ಕೆರೆದುಕೊಂಡಂತೆ ಕಾಣುತ್ತಿದೆ. ಎಲ್ಲವೂ ತಣ್ಣಗಾಗುವ ಹೊತ್ತಲ್ಲೇ ಈ ಸರ್ವಾಧಿಕಾರಿ ಮತ್ತೊಂದು ಎಡವಟ್ಟು ಮಾಡಿಕೊಂಡಿರುವುದು ಸ್ಪಷ್ಟವಾಗುತ್ತಿದೆ. ಕಿಮ್‌ನ ಇಂತಹ ತಪ್ಪುಗಳಿಗೆ ಕಾದು ಕೂತಿರುವ ಅಮೆರಿಕ ಮತ್ತೊಮ್ಮೆ ಉತ್ತರ ಕೊರಿಯಾ ವಿರುದ್ಧ ಮುಗಿಬೀಳೋದು ಪಕ್ಕಾ. ಅದು ಉತ್ತರ ಕೊರಿಯಾ ಜನರ ಮೇಲೆ ನೇರ ಪರಿಣಾಮ ಬೀರಲಿದೆ. ಏಕೆಂದರೆ ಈಗಾಗಲೇ ಉತ್ತರ ಕೊರಿಯಾ ಆಹಾರದ ಅಭಾವಕ್ಕೆ ಸಿಲುಕಿ ನರಳುತ್ತಿದೆ. ಇಂತಹ ಹೊತ್ತಲ್ಲೇ ನ್ಯೂಕ್ಲಿಯರ್ ವಿಚಾರ ದೊಡ್ಡ ಸದ್ದು ಮಾಡುತ್ತಿದೆ. ಹೀಗೇ ಮತ್ತೊಮ್ಮೆ ಕಿಮ್‌ನ ವಿಲನ್ ಮಾಡೋದಕ್ಕೆ ಅಮೆರಿಕ ಸಿದ್ಧವಾಗಿದೆ.

   ಬಾಂಬ್ ಪರೇಡ್‌ಗೆ ಸರ್ವಾಧಿಕಾರಿ ಸಾಕ್ಷಿ

   ಬಾಂಬ್ ಪರೇಡ್‌ಗೆ ಸರ್ವಾಧಿಕಾರಿ ಸಾಕ್ಷಿ

   ಉ. ಕೊರಿಯಾ ಜನವರಿ 14ರಂದು ನಡೆಸಿದ್ದ ಮಿಸೈಲ್ ಪರೇಡ್‌ ಜಗತ್ತಿನ ಗಮನ ಸೆಳೆದಿತ್ತು. ಖುದ್ದು ಕಿಮ್ ಮಿಸೈಲ್ ಪರೇಡ್‌ ವೀಕ್ಷಿಸಿದ್ದ. ಜನವರಿ 20ರಂದು ಬೈಡನ್ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದ್ದರೆ, ಜೋ ಬೈಡನ್‌ ಆಗಮನಕ್ಕೂ ಒಂದು ವಾರ ಮುನ್ನ ಮಿಸೈಲ್‌ಗಳನ್ನ ಪ್ರದರ್ಶನ ಮಾಡಿದ್ದ ಕಿಮ್ ಜಾಂಗ್ ಉನ್. ಅಲ್ಲದೆ ಈ ಪರೇಡ್ ವೇಳೆ ಮಾತನಾಡಿದ್ದ ಕಿಮ್ ಜಾಂಗ್ ಉನ್, ಏಷ್ಯಾದಲ್ಲಿರುವ ಉ.ಕೊರಿಯಾ ಶತ್ರು ರಾಷ್ಟ್ರಗಳಿಗೂ ಹಾಗೂ ಅಮೆರಿಕಕ್ಕೆ ತಕ್ಕ ಉತ್ತರ ನೀಡುವ ಸಲುವಾಗಿ ಮಿಲಿಟರಿ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸುತ್ತೇವೆ ಹಾಗೂ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ವೇಗ ನೀಡಲಾಗುವುದು ಎಂದಿದ್ದ.

   ಅಮೆರಿಕದ ಕ್ಷಿಪಣಿ ಕೇಂದ್ರ ಟಾರ್ಗೆಟ್..?

   ಅಮೆರಿಕದ ಕ್ಷಿಪಣಿ ಕೇಂದ್ರ ಟಾರ್ಗೆಟ್..?

   ಕಿಮ್ ಕ್ಷಿಪಣಿ ಯಾರನ್ನು ಟಾರ್ಗೆಟ್ ಮಾಡಿದೆ ಎಂಬ ಪ್ರಶ್ನೆ ಇದೀಗ ಜಗತ್ತನ್ನ ಕಾಡುತ್ತಿದೆ. ಆದರೆ ತಜ್ಞರು ಹೇಳುವಂತೆ ಕಿಮ್ ಕ್ಷಿಪಣಿಗಳು ಕಣ್ಣಿಟ್ಟಿರುವುದು ಅಮೆರಿಕದ ಕ್ಷಿಪಣಿ ಕೇಂದ್ರಗಳ ಮೇಲೆ. ಅಲಾಸ್ಕಾ ಸೇರಿ ಹಲವು ಪ್ರಾಂತ್ಯಗಳಲ್ಲಿ ಅಮೆರಿಕದ ಕ್ಷಿಪಣಿ ಕೇಂದ್ರಗಳಿವೆ. ಇದನ್ನೇ ಟಾರ್ಗೆಟ್ ಮಾಡಿ, ನ್ಯೂಕ್ಲಿಯರ್‌ ವೆಪನ್ ಉತ್ಪಾದನೆ ಮಾಡುತ್ತಿದೆ ಉತ್ತರ ಕೊರಿಯಾ. ಆದರೆ ಆದ್ರೆ ಅದು ಅಷ್ಟು ಸುಲಭವಲ್ಲ, ಆದರೂ ಕಿಮ್ ಜಾಂಗ್ ಉನ್ ಭಂಡತನ ಪ್ರದರ್ಶಿಸಲು ಮುಂದಾಗಿದ್ದಾನೆ. ಇದು ಅಮೆರಿಕ ನಾಯಕರಲ್ಲೂ ಆತಂಕ ಮೂಡಿಸಿದೆ.

   English summary
   UN atomic agency alleged in a report that N. Korea restarted Yongbyon nuclear reactor.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X