ಚಳಿ.. ಚಳಿ.. ಚಳಿಗಾಲದಲ್ಲಿ ನರಳುತ್ತಿರುವ ಉಕ್ರೇನ್ ಜನರ ಗೋಳು ಕೇಳುವುದು ಯಾರು?
ಉಕ್ರೇನ್ ಹಾಗೂ ರಷ್ಯಾ ಯುದ್ಧ ಘೋರವಾಗಿರುವ ಸಮಯದಲ್ಲೇ, ರಷ್ಯಾ ಸೇನೆಯಿಂದ ಭೀಕರ ದಾಳಿ ಮುಂದುವರಿದಿದೆ. ಉಕ್ರೇನ್‌ನ ವಸತಿ ಪ್ರದೇಶಗಳ ಮೇಲೆ ರಷ್ಯಾ ಮಿಲಿಟರಿ ದಾಳಿ ಮಾಡಿ ಎಲ್ಲವನ್ನೂ ನಾಶ ಮಾಡುತ್ತಿದೆ, ಇದರ ಜೊತೆಗೆ ವಿದ್ಯುತ್ ಸೇರಿದಂತೆ ಇಂಧನ ಪೂರೈಕೆ ಕೂಡ ಹಾಳು ಮಾಡಿದೆ ಎಂಬ ಆರೋಪವನ್ನ ಉಕ್ರೇನ್ ಮಾಡುತ್ತಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಉಕ್ರೇನ್ ಜನರು ನೂರಾರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಮುಖವಾಗಿ ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರವೇ ಇರುವ ಉಕ್ರೇನ್ ದೇಶದಲ್ಲಿ ಭಯಾನಕ ಚಳಿಗಾಲ ಶುರುವಾಗಿದ್ದು, ಜನರು ನರಳಿ & ನರಳಿ ಹೋಗುತ್ತಿದ್ದಾರೆ.
ರಷ್ಯಾ ಮತ್ತೊಮ್ಮೆ ಉಕ್ರೇನ್ ವಿರುದ್ಧ ರೊಚ್ಚಿಗೆದ್ದು ದಾಳಿ ನಡೆಸಲು ಶುರು ಮಾಡಿದೆ. ಸಂಧಾನಕ್ಕೆ ಮುಂದಾಗಿದ್ದರೂ ಉಕ್ರೇನ್ ಮಾತ್ರ ಕೇರ್ ಮಾಡುತ್ತಿಲ್ಲ ಎಂಬ ಆರೋಪ & ಆಕ್ರೋಶದ ನಡುವೆಯೇ ದಿಢೀರ್ ರಷ್ಯಾ ಮಿಲಿಟರಿ ಘನಘೋರ ದಾಳಿ ಮಾಡಲು ಮುಂದೆ ಬಂದಿದೆ. ಈ ಮೂಲಕ ಉಕ್ರೇನ್ ದೇಶಕ್ಕೆ ಸೇರಿದ ಪ್ರದೇಶಗಳ ಮೇಲೆ ಭಾರಿ ದೊಡ್ಡ ಮಟ್ಟದಲ್ಲಿ ದಾಳಿ ಆರಂಭವಾಗಿದೆ. ಹೀಗಿದ್ದಾಗಲೇ ಭಾರಿ ಚಳಿ ಕಾರಣಕ್ಕೆ ಈ ಭೀಕರ ದಾಳಿ ಸಹಿಸಿಕೊಳ್ಳಲು ಉಕ್ರೇನ್ ನಿವಾಸಿಗಳು ನರಳುತ್ತಿದ್ದಾರೆ.

ಮೈಕೊರೆಯುವ ಚಳಿ ನಡುವೆ ಒದ್ದಾಟ
ಮೊದಲೇ ಹೇಳಿದಂತೆ ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರ ಇರುವ ಉಕ್ರೇನ್ ದೇಶದಲ್ಲಿ ಭೀಕರವಾಗಿ ಇರುತ್ತದೆ ಈ ಚಳಿಗಾಲ. ವಿಪರೀತ ಮೈಕೊರೆಯುವ ಚಳಿ ಕಾರಣಕ್ಕೆ ಯಾವಾಗ ಏನು ಬೇಕದ್ರೂ ಆಗುತ್ತದೆ ಅನ್ನೋ ಪರಿಸ್ಥಿತಿ ಇರುತ್ತದೆ. ಹೀಗಾಗಿಯೇ ಚಳಿಯಿಂದ ರಕ್ಷಣೆ ಪಡೆಯಲು ವಿದ್ಯುತ್ & ಇಂಧನ ಬೇಕೆ ಬೇಕು. ಇಷ್ಟೆಲ್ಲಾ ಒದ್ದಾಟದ ನಡುವೆ ಉಕ್ರೇನ್ ದೇಶಕ್ಕೆ ಸರಿಯಾಗಿ ವಿದ್ಯುತ್ ಮತ್ತು ಇಂಧನ ಸರಬರಾಜು ಆಗುತ್ತಿಲ್ಲ. ಹೀಗಾಗಿ ಮೈಕೊರೆಯುವ ಚಳಿ ಮಧ್ಯೆ ಒದ್ದಾಟ ನಿರಂತರವಾಗಿದೆ.
ಯದ್ಧ ನಿಲ್ಲಿಸಲು ಅಮೆರಿಕ ಕೈಯಲ್ಲೇ ಆಗಲಿಲ್ಲ!
ಇನ್ನು ಅಮೆರಿಕ ಕೂಡ ಎಲ್ಲಾ ರೀತಿಯ ಪ್ರಯತ್ನ ಮಾಡಿ ಈ ಯುದ್ಧವನ್ನ ನಿಲ್ಲಿಸಲು ಒದ್ದಾಡಿ ಹೋಗಿತ್ತು. ಇಷ್ಟಾದರೂ ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸಲು ಅಮೆರಿಕ ಕೈಯಲ್ಲಿ ಕೂಡ ಈಗ ಆಗಿಲ್ಲ. ಹೀಗಾಗಿ ಪರಿಸ್ಥಿತಿ ಇನ್ನಷ್ಟು ಭೀಕರವಾಗಿದ್ದು, ವಾತಾವರಣ ತಿಳಿಗೊಳಿಸಿ ಯುದ್ಧವನ್ನು ಕಂಟ್ರೋಲ್ ಮಾಡಲು ನಡೆಸುತ್ತಿರುವ ಪ್ರಯತ್ನಗಳು ಫಲ ನೀಡುತ್ತಿಲ್ಲ. ಇದು ಈಗ ಇನ್ನೊಂದು ಮಹಾಯುದ್ಧದ ಆತಂಕ ಮೂಡಿಸಿದೆ. ಆತಂಕದ ನಡುವೆ ಈಗ ಇನ್ನೊಂದು ಆತಂಕ ಇಡೀ ಜಗತ್ತನ್ನು ಯುದ್ಧದ ಕತ್ತಲೆಯಲ್ಲಿ ಕೊಳೆಯುವಂತೆ ಮಾಡುತ್ತಿರುವುದು ವಿಪರ್ಯಾಸವೇ ಸರಿ ಎನ್ನಬಹುದು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications