ಉಕ್ರೇನ್ ಯುದ್ಧ ನಿಲ್ಲಿಸಲು ಸಿದ್ಧತೆ? ಚೀನಾದಲ್ಲಿ ನಡೆದಿಯಾ ಮಾಸ್ಟರ್ ಪ್ಲಾನ್?
ಚೀನಾ ನೆಲದಲ್ಲಿ ಭಾರಿ ದೊಡ್ಡ ಚರ್ಚೆಗಳು ಶುರುವಾಗಿವೆ, ಅದರಲ್ಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇದೀಗ ಭಾರಿ ದೊಡ್ಡ ಆಟ ಶುರುವಾಗಿದೆ. ಈ ನಡುವೆ ಉಕ್ರೇನ್ & ರಷ್ಯಾ ನಡುವಿನ ಯುದ್ಧಕ್ಕೂ ಬ್ರೇಕ್ ಹಾಕಲು ಎಲ್ಲಾ ರೀತಿಯ ಪ್ರಯತ್ನಗಳು ಶುರುವಾಗಿವೆ. ಹಾಗಾದ್ರೆ ಅಸಲಿಗೆ ಚೀನಾ ನೆಲದಲ್ಲಿ ಇದೀಗ ನಡೆಯುತ್ತಿರುವ ಬೆಳವಣಿಗೆ ಏನು? ದಿಢೀರ್ ರಷ್ಯಾ & ಉಕ್ರೇನ್ ಯುದ್ಧಕ್ಕೆ ಬ್ರೇಕ್ ಬೀಳುತ್ತಾ?
ಯುದ್ಧದಾಹ ಕಡಿಮೆ ಆಗಿಲ್ಲ ಅಂತಾ ಕಾಣುತ್ತಿದೆ, ಇದೇ ಕಾರಣಕ್ಕೆ ಮನುಷ್ಯರು ಪದೇ ಪದೇ ಯುದ್ಧ ಮಾಡುತ್ತಾ ಭೂಮಿ ಮೇಲೆ ವಿನಾಶ ಸೃಷ್ಟಿ ಮಾಡುತ್ತಿದ್ದಾರೆ. ಈಗಾಗಲೇ ದೊಡ್ಡ ದೊಡ್ಡ ಯುದ್ಧಗಳ ನೋಡಿ ಬೆಚ್ಚಿ ಬಿದ್ದಿರುವ ಮನುಷ್ಯರು ಇನ್ನಾದರೂ ಸೈಲೆಂಟ್ ಆಗಬಹುದು ಅನ್ನೋ ನಂಬಿಕೆ ಸುಳ್ಳಾಗಿದೆ. ಅದ್ರಲ್ಲೂ ರಷ್ಯಾ & ಉಕ್ರೇನ್ ಯುದ್ಧ ಹಾಗೂ ಇರಾನ್ & ಇಸ್ರೇಲ್ ಯುದ್ಧವು ಇಡೀ ಜಗತ್ತಿನಲ್ಲಿ ಆತಂಕ ಮೂಡಿಸಿದ್ದವು. ಹಾಗಾದ್ರೆ ಈಗಲಾದರೂ ರಷ್ಯಾ & ಉಕ್ರೇನ್ ಯುದ್ಧಕ್ಕೆ ಬ್ರೇಕ್ ಬೀಳುತ್ತಾ? ಚೀನಾ ಮೂಲಕ ಯುದ್ಧ ನಿಲ್ಲಿಸಲು ಮಾತುಕತೆ ನಡೆಯುತ್ತಿದೆಯಾ?

ಚೀನಾ ಈ ಯುದ್ಧ ನಿಲ್ಲಿಸುತ್ತಾ?
ರಷ್ಯಾ & ಉಕ್ರೇನ್ ಫೈಟಿಂಗ್ ನೋಡಿ ಏನು ಮಾಡಬೇಕು ಅಂತಾ ಜಗತ್ತಿಗೇ ಗೊತ್ತಾಗುತ್ತಿಲ್ಲ. ಈ ಪೈಕಿ ಯುರೋಪ್ ಖಂಡದ ದೇಶಗಳಲ್ಲಿ ಇನ್ನೂ ಆತಂಕಕಾರಿ ವಾತಾವರಣ ನಿರ್ಮಾಣ ಆಗಿದೆ. ಯಾಕಂದ್ರೆ ಈಗಾಗಲೇ ಯುರೋಪ್ ದೇಶಗಳಲ್ಲಿ ಸಾಕಷ್ಟು ಸಮಸ್ಯೆಗಳು ಶುರುವಾಗಿದ್ದು, ಈ ರೀತಿ ರಷ್ಯಾ & ಉಕ್ರೇನ್ ಬಡಿದಾಡುತ್ತಿರುವ ರೀತಿ ನೋಡಿ ವಿಶ್ವಸಂಸ್ಥೆ ಕೂಡ ಆತಂಕದ ಸುಳಿಗೆ ಸಿಲುಕಿದೆ. ಇಷ್ಟೆಲ್ಲಾ ಬೆಳವಣಿಗೆ ಚೀನಾ ಮಧ್ಯಪ್ರವೇಶ ಮಾಡಲು ಇದೀಗ ಆಗ್ರಹ ಮಾಡ್ತಾ ಇವೆ ನ್ಯಾಟೋ ದೇಶಗಳು.
ನ್ಯಾಟೋ ಪಡೆಗಳಿಂದ ಒತ್ತಡ ಹಾಕಲಾಗುತ್ತಿದೆಯಾ?
ಉಕ್ರೇನ್ ಭೂಮಿಯನ್ನ ಈಗಾಗಲೇ ಭಾಗಶಃ ನಾಶ ಮಾಡಿರುವ ರಷ್ಯಾ ಮಿಲಿಟರಿ, ಯಾರೇ ಕೆಮ್ಮಿದರೂ ಕಥೆ ಮುಗಿಸುತ್ತಿದೆ. ಹೀಗೆ ಒಂದೊಂದು ಹಂತದಲ್ಲೂ ಉಕ್ರೇನ್‌ಗೆ ಕರೆಂಟ್ ಶಾಕ್ ಕೊಟ್ಟು ರಷ್ಯಾ ಮುಂದೆ ನುಗ್ಗುತ್ತಿದೆ. ಹೀಗೆ ಶತ್ರುಪಡೆ ತನ್ನ ನೆಲದ ಒಳಗೆ ನುಗ್ಗಿ ಬಂದರೂ ಅಸಹಾಯಕ ಸ್ಥಿತಿಯಲ್ಲಿ ಉಕ್ರೇನ್ ನರಳುತ್ತಿದ್ದು, ಸೋಲು ಒಪ್ಪಿಕೊಂಡಂತೆ ಕೂತಿದೆ. ಇದೇ ಸಮಯದಲ್ಲಿ ಚೀನಾ ಮೂಲಕ ರಷ್ಯಾ ಜೊತೆಗೆ ಸಂಧಾನ ಮಾಡಿಸಿ ಯುದ್ಧ ನಿಲ್ಲಿಸುವ ಪ್ಲಾನ್ ಹಾಕಿವೆ ಪಾಶ್ಚಿಮಾತ್ಯ ದೇಶಗಳು. ಇದೇ ವಿಚಾರವಾಗಿ ಇದೀಗ ಒತ್ತಡ ಕೂಡ ಹಾಕಲಾಗ್ತಿದೆ ಎಂಬ ಸುದ್ದಿ ಹಬ್ಬಿದೆ. ಆದರೆ ಇದು ಸಕ್ಸಸ್ ಆಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications