ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌-ರಷ್ಯಾ ಬಿಕ್ಕಟ್ಟು: ಉಕ್ರೇನ್‌ ತೊರೆಯಲು ಭಾರತೀಯರಿಗೆ ಮತ್ತೆ ಸೂಚನೆ

|
Google Oneindia Kannada News

ನವದೆಹಲಿ, ಫೆಬ್ರವರಿ 20: ಪೂರ್ವ ಯೂರೋಪಿಯನ್ ರಾಷ್ಟ್ರದಲ್ಲಿ ಉಳಿಯುವುದು "ಅಗತ್ಯವೆಂದು ಪರಿಗಣಿಸದಿದ್ದರೆ" ಭಾರತವು ಉಕ್ರೇನ್‌ನಲ್ಲಿ ವಾಸಿಸುವ ವಿದ್ಯಾರ್ಥಿಗಳು ಸೇರಿದಂತೆ ತನ್ನ ನಾಗರಿಕರನ್ನು ಹಿಂದಿರುಗುವಂತೆ ಮತ್ತೆ ಸೂಚನೆ ನೀಡಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಪ್ರಸ್ತುತ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಹಿಂದೆ ಸೂಚನೆ ನೀಡಿತ್ತು. ಈಗ ಮತ್ತೆ ಸೂಚನೆ ನೀಡಿದೆ.

ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ರಷ್ಯಾದ ಸಂಭಾವ್ಯ ಆಕ್ರಮಣದ ಕುರಿತು ಉದ್ವಿಗ್ನತೆಯ ಮಧ್ಯೆ ದೇಶದಿಂದ ಹೊರಬರಲು ಲಭ್ಯವಿರುವ ಯಾವುದೇ ವಾಣಿಜ್ಯ ಅಥವಾ ಚಾರ್ಟರ್ ವಿಮಾನದ ಸಹಾಯ ಪಡೆದುಕೊಳ್ಳಿ ಎಂದು ಹೇಳಿದೆ. "ಉಕ್ರೇನ್‌ನಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಟ್ಟದ ಉದ್ವಿಗ್ನತೆ ಹಿನ್ನೆಲೆಯಲ್ಲಿ ಎಲ್ಲಾ ಭಾರತೀಯ ಪ್ರಜೆಗಳು ಮತ್ತು ಎಲ್ಲಾ ಭಾರತೀಯ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಉಕ್ರೇನ್ ತೊರೆಯಲು ಸೂಚಿಸಲಾಗಿದೆ," ಎಂದು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

 ಉಕ್ರೇನ್‌-ರಷ್ಯಾ ಬಿಕ್ಕಟ್ಟು: ಭಾರತೀಯರು ಉಕ್ರೇನ್‌ ತೊರೆಯಲು ಸೂಚನೆ ಉಕ್ರೇನ್‌-ರಷ್ಯಾ ಬಿಕ್ಕಟ್ಟು: ಭಾರತೀಯರು ಉಕ್ರೇನ್‌ ತೊರೆಯಲು ಸೂಚನೆ

"ಭಾರತೀಯ ವಿದ್ಯಾರ್ಥಿಗಳು ಚಾರ್ಟರ್ ಫ್ಲೈಟ್‌ಗಳ ಬುಕ್ಕಿಂಗ್‌ಗಾಗಿ ಆಯಾ ವಿದ್ಯಾರ್ಥಿ ಗುತ್ತಿಗೆದಾರರೊಂದಿಗೆ ಸಂಪರ್ಕದಲ್ಲಿರಲು ಸಲಹೆ ನೀಡಲಾಗುತ್ತದೆ. ಯಾವುದೇ ನವೀಕರಣಕ್ಕಾಗಿ ರಾಯಭಾರ ಕಚೇರಿಯ ಫೇಸ್‌ಬುಕ್, ವೆಬ್‌ಸೈಟ್ ಮತ್ತು ಟ್ವಿಟರ್ ಅನ್ನು ಅನುಸರಿಸುವುದನ್ನು ಮುಂದುವರಿಸಿ," ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

Ukraine-Russia Crisis: Leave Ukraine, India Tells Its Citizens

ಮಾಹಿತಿ ಮತ್ತು ಸಹಾಯದ ಅಗತ್ಯವಿರುವ ಉಕ್ರೇನ್‌ನಲ್ಲಿರುವ ಭಾರತೀಯರು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಥವಾ ಮೀಸಲಾದ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿರುವ ಎಂಇಎ ಅನ್ನು ಸಹ ಸಂಪರ್ಕಿಸಬಹುದು. ಈ ವಾರದ ಆರಂಭದಲ್ಲಿ ಜನರು ವಿಮಾನ ಟಿಕೆಟ್‌ಗಳನ್ನು ಪಡೆಯದಿರುವ ವರದಿಗಳಿವೆ. ಉಕ್ರೇನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು 24 ಗಂಟೆಗಳ ಸಹಾಯವಾಣಿಯನ್ನು ಹೊಂದಿದೆ.

ಉಕ್ರೇನ್‌ ತೊರೆಯಲು ಈ ಹಿಂದೆ ಸೂಚನೆ ನೀಡಿದ್ದ ಭಾರತೀಯ ರಾಯಭಾರ ಕಚೇರಿ

ಈ ಬಗ್ಗೆ ಈ ಹಿಂದೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಭಾರತದ ರಾಯಭಾರ ಕಚೇರಿಯು, "ಉಕ್ರೇನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯ ನಡುವೆ ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳು, ವಿಶೇಷವಾಗಿ ವಾಸ್ತವ್ಯದ ಅಗತ್ಯವಿಲ್ಲದ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಹೊರಡುವ ಬಗ್ಗೆ ಯೋಚಿಸಬಹುದು. ಭಾರತೀಯ ಪ್ರಜೆಗಳು ಈ ಬಿಕ್ಕಟ್ಟಿನಿಂದ ತೊಂದರೆಗೆ ಒಳಗಾಗುವುದನ್ನು ತಪ್ಪಿಸಬೇಕು. ಉಕ್ರೇನ್‌ ಒಳಗೆಯೂ ಅಗತ್ಯವಿದ್ದರೆ ಮಾತ್ರ ಸಂಚಾರ ಮಾಡಿ," ಎಂದು ಸಲಹೆ ನೀಡಲಾಗಿದೆ.

"ಉಕ್ರೇನ್‌ನಲ್ಲಿ ಇರುವ ಭಾರತೀಯ ಪ್ರಜೆಗಳ ಸ್ಥಿತಿಯನ್ನು ತಿಳಿಯಲು ಸುಲಭವಾಗಲು, ಅಗತ್ಯ ಬಂದಾಗ ಭಾರತೀಯ ಪ್ರಜೆಗಳನ್ನು ಸಂಪರ್ಕ ಮಾಡಲು ಸುಲಭವಾಗುವಂತೆ ರಾಯಭಾರ ಕಚೇರಿಗೆ ಅಗತ್ಯವಿರುವ ಮಾಹಿತಿಯನ್ನು ನೀಡುವಂತೆ ವಿನಂತಿ ಮಾಡಲಾಗಿದೆ. ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ಎಲ್ಲಾ ಸೇವೆಗಳನ್ನು ಒದಗಿಸಲು ರಾಯಭಾರ ಕಚೇರಿಯು ಸಾಮಾನ್ಯವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ," ಎಂದು ಕೂಡಾ ತಿಳಿಸಲಾಗಿದೆ.

ಉಕ್ರೇನ್‌ನಲ್ಲಿರುವ ಭಾರತೀಯರ ನೆರವಿಗಾಗಿ 3 ಏರ್‌ ಇಂಡಿಯಾ ವಿಮಾನಗಳ ಹಾರಾಟ

Recommended Video

ಕೊಟ್ಟ ಅವಕಾಶದಲ್ಲೆ ಹೆಸರು ಮಾಡಿದ ಸೂರ್ಯ | Oneindia Kannada

ಉಕ್ರೇನ್‌ನಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಭಾರತೀಯರ ನೆರವಿಗಾಗಿ ಮೂರು ಏರ್ ಇಂಡಿಯಾ ವಿಮಾನಗಳನ್ನು ಕಳುಹಿಸಲಾಗಿದೆ. ಮುಂದಿನ ವಾರ ಫೆಬ್ರವರಿ 22, 24 ಮತ್ತು 26 ರಂದು ಭಾರತ- ಉಕ್ರೇನ್ ನಡುವೆ ಏರ್ ಇಂಡಿಯಾದ ಮೂರು ವಿಮಾನಗಳು ಹಾರಾಟ ನಡೆಸಲಿವೆ. ಬೋರಿಸ್ಪಿಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಗಳು ಟೇಕ್ ಆಫ್ ಆಗಲಿದ್ದು, ಏರ್ ಇಂಡಿಯಾ ಬುಕಿಂಗ್ ಕಚೇರಿಗಳು, ವೆಬ್‌ಸೈಟ್, ಕಾಲ್ ಸೆಂಟರ್ ಮತ್ತು ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮೂಲಕ ಬುಕಿಂಗ್ ಆರಂಭವಾಗಿದೆ ಎಂದು ಏರ್ ಇಂಡಿಯಾ ಶುಕ್ರವಾರ ಟ್ವೀಟರ್ ನಲ್ಲಿ ಮಾಹಿತಿ ನೀಡಿದೆ. (ಒನ್‌ಇಂಡಿಯಾ ಸುದ್ದಿ)

English summary
Ukraine Crisis: India asks Indian nationals to leave Ukraine temporarily given the uncertainties of the current situation between Ukraine and Russia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X