ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್ ಮೇಲೆ ರಷ್ಯಾ ಸೈಬರ್ ದಾಳಿ, ಇಂಟರ್ನೆಟ್ ಸಂಪರ್ಕ ಕಡಿತ

|
Google Oneindia Kannada News

ಕೀವ್, ಫೆಬ್ರವರಿ 25: ಉಕ್ರೇನ್ ಮೇಲೆ ರಷ್ಯಾವು ಸೈಬರ್ ದಾಳಿ ನಡೆಸಿದ್ದು, ಪರಿಣಾಮ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದೆ.

ರಷ್ಯಾದ ಸೈಬರ್ ಆಕ್ರಮಣವು ಈಗಾಗಲೇ ದೇಶದ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಿದೆ ಎಂದು ಹೇಳಲಾಗಿದೆ.

1941ರಲ್ಲಿ ನಾಜಿಗಳಿಂದ ಇದೇ ರೀತಿ ದಾಳಿ ನಡೆದಿತ್ತು: ಉಕ್ರೇನ್1941ರಲ್ಲಿ ನಾಜಿಗಳಿಂದ ಇದೇ ರೀತಿ ದಾಳಿ ನಡೆದಿತ್ತು: ಉಕ್ರೇನ್

ಉಕ್ರೇನ್ ನಿಯಂತ್ರಿತ ನಗರವಾದ ಖಾರ್ಕಿವ್‌ನಲ್ಲಿ ಭಾರಿ ಸ್ಫೋಟಗಳು ಕೇಳಿಬಂದ ಸ್ವಲ್ಪ ಸಮಯದ ಬಳಿಕ ಇಂಟರ್ನೆಟ್ ಅಡಚಣೆ ಉಂಟಾಗಿದೆ. ಮೊಬೈಲ್‌ಗಳು ಕಾರ್ಯ ನಿರ್ವಹಿಸುವಾಗಲೇ ಪೂರೈಕೆದಾರ ಟ್ರಿಯೋಲನ್ ಸ್ಥಿರ-ಲೈನ್ ಸೇವೆಯಲ್ಲಿ ನಷ್ಟ ಉಂಟಾಗಿರುವುದನ್ನು ಬಳಕೆದಾರರು ವರದಿ ಮಾಡಿದ್ದಾರೆ ಎಂದು ಜಾಗತಿಕ ಇಂಟರ್ನೆಟ್ ಮಾನಿಟರ್ ಪ್ಲಾಟ್‌ಫಾರ್ಮ್ ನೆಟ್‌ಬ್ಲಾಕ್ಸ್‌ ಟ್ವೀಟ್ ಮಾಡಿದೆ.

Ukraine Faces Total Internet Blackout Amid War With Russia

ರಷ್ಯಾ ಪಡೆಗಳು ಈಗಾಗಲೇ ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ದಾಳಿ ನಡೆಸಿವೆ. ಇಂದು ಮುಂಜಾನೆ ರಷ್ಯಾದ ಯುದ್ಧ ವಿಮಾನವೊಂದು ದಾಳಿಗೆ ಮುಂದಾದಾಗ ಉಕ್ರೇನ್ ಪಡೆಗಳು ಆ ವಿಮಾನವನ್ನು ಹೊಡೆದುರುಳಿಸಿವೆ. ಈ ವೇಳೆ ಪತನಗೊಂಡ ವಿಮಾನ ವಸತಿ ಕಟ್ಟಡವೊಂದಕ್ಕೆ ಅಪ್ಪಳಿಸಿತು. ಪರಿಣಾಮ ಕಟ್ಟಡದ ಬಹುತೇಕ ಭಾಗಕ್ಕೆ ಹಾನಿಯಾಗಿದ್ದು, ಹೊತ್ತಿಕೊಂಡಿದ್ದ ಬೆಂಕಿಯನ್ನು ರಕ್ಷಣಾ ಸಿಬ್ಬಂದಿ ಶಮನಗೊಳಿಸಿದರು.

ಡೊನೆಟ್ಸ್‌ ಮಾರಿಯುಪೋಲ್‌ನ ಆಯಕಟ್ಟಿನ ಬಂದರು ನಗರದಲ್ಲಿ ಇಂಟರ್ನೆಟ್ ಅಡಚಣೆ ಉಂಟಾಗಿದೆ, ನಾಗರಿಕರ ಸಾವು ನೋವುಗಳ ವರದಿಗಳ ನಡುವೆಯೇ ಅನೇಕರು ಟೆಲಿಕಾಂ ಸೇವೆಗಳನ್ನು ಕಳೆದುಕೊಂಡಿದ್ದಾರೆ.

ರಷ್ಯಾ ಈ ಹಿಂದೆ ಉಕ್ರೇನ್‌ನ ಸರ್ಕಾರಿ ಸೈಟ್‌ಗಳ ವಿರುದ್ಧ ದಾಳಿ ಮಾಡಿತ್ತು, ಆದರೆ ಈಗ ತಳಮಟ್ಟದಿಂದಲೇ ದೂರಸಂಪರ್ಕ ಮೌಲಸೌಕರ್ಯವನ್ನು ನಿಷ್ಕ್ರಿಯಗೊಳಿಸಿದೆ. ಈ ಮೂಲಕ ಉಕ್ರೇನಿಯನ್ನರನ್ನು ಮೌನಗೊಳಿಸುವತ್ತ ಕ್ರಮ ಕೈಗೊಳ್ಳಲು ಮುಂದಾಗಿದೆ.

ಒಂದು ವೇಳೆ ರಷ್ಯಾ ನ್ಯಾಟೋ ರಾಷ್ಟ್ರಗಳ ತಂಟೆಗೆ ಬಂದರೆ ಅಮೆರಿಕ ಮಧ್ಯಪ್ರವೇಶಿಸುವುದು ಖಚಿತ. ರಷ್ಯಾವನ್ನು ಈಗ ತಡೆಯದಿದ್ದರೆ, ಅದು ಮತ್ತಷ್ಟು ಧೈರ್ಯಶಾಲಿಯಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಶ್ವೇತಭವನದಲ್ಲಿ ಮಾತನಾಡಿದ ಬೈಡನ್, ಉಕ್ರೇನ್ ವಿಚಾರವಾಗಿ ಪುಟಿನ್ ಅವರೊಂದಿಗೆ ಮಾತನಾಡಲು ನಾವು ಈವರೆಗೂ ಯಾವುದೇ ಪ್ಲ್ಯಾನ್ ಮಾಡಿಲ್ಲ. ಆದರೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದ್ದೇವೆ. ಉಕ್ರೇನ್ ಜನರ ನೋವನ್ನು ತಗ್ಗಿಸಲು ಅಮೆರಿಕ ಮಾನವೀಯ ಪರಿಹಾರವನ್ನು ನೀಡುತ್ತದೆ ಎಂದು ಭರವಸೆ ನೀಡಿದರು.

ನ್ಯಾಟೋ ಸದಸ್ಯರಾಗಿರುವ ಪೂರ್ವ ಯುರೋಪಿಯನ್ ರಾಷ್ಟ್ರಗಳಿಗೆ ಅಗತ್ಯವಿರುವ ಎಲ್ಲಾ ಮಿಲಿಟರಿ ಸೌಲಭ್ಯಗಳನ್ನು ನಾವು ಒದಗಿಸಿದ್ದೇವೆ. ಇದರಿಂದಾಗಿ ರಷ್ಯಾದ ದಾಳಿ ದೊಡ್ಡ ಸಂಘರ್ಷಕ್ಕೆ ತಿರುಗುವುದಿಲ್ಲ ಎಂದು ಭರವಸೆ ನೀಡಿದ್ದೇವೆ. ನ್ಯಾಟೋ ಹಿಂದೆಂದಿಗಿಂತಲೂ ಹೆಚ್ಚು ಒಗ್ಗೂಡಿದೆ ಎಂದು ಬೈಡನ್ ಅಭಿಪ್ರಾಯಪಟ್ಟಿದ್ದಾರೆ.

'ಸೋವಿಯತ್​ ಒಕ್ಕೂಟ ಮರುಸ್ಥಾಪನೆಗಾಗಿ': ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೆಚ್ಚಿನ ದುರುದ್ದೇಶಗಳನ್ನು ಹೊಂದಿದ್ದಾರೆ. 1988 ಮತ್ತು 1992ರ ಅವಧಿಯಲ್ಲಿ ಒಡೆದುಹೋದ ಸೋವಿಯತ್ ಯೂನಿಯನ್ ಅನ್ನು ಮತ್ತೆ ಒಗ್ಗೂಡಿಸಲು ಬಯಸಿದ್ದಾರೆ. ಆದರೆ ಅವರು ಉದ್ದೇಶಗಳು ರಾಷ್ಟ್ರಗಳ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಬೈಡನ್ ಹೇಳಿದ್ದಾರೆ.

ಬಿಡೆನ್ ಅವರು ಗುರುವಾರ ತಡರಾತ್ರಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದ್ದು, ಅಮೆರಿಕ ತನ್ನ ಮಿತ್ರರಾಷ್ಟ್ರಗಳು ಮತ್ತು ಯುರೋಪ್​ನ ಪಾಲುದಾರ ರಾಷ್ಟ್ರಗಳೊಂದಿಗೆ ಉಕ್ರೇನ್ ಜನರ ಸಹಾಯಕ್ಕೆ ಬರಲಿದೆ ಎಂದು ಭರವಸೆ ನೀಡಿದ್ದಾರೆ. ಇದರ ಜೊತೆಗೆ ಮಾನವೀಯ ನೆರವು ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಷ್ಯಾದ ಪಡೆಗಳ ವಿರುದ್ಧ ಹೋರಾಡಲು ಉಕ್ರೇನ್‌ಗೆ ಅಮೆರಿಕದ ಪಡೆಗಳನ್ನು ಕಳುಹಿಸುವುದಿಲ್ಲ ಎಂದು ಬೈಡನ್ ಹೇಳಿದ್ದು, ಅಮೆರಿಕದ ಸಂಸ್ಥೆಗಳು ಮತ್ತು ಮೂಲಸೌಕರ್ಯಗಳ ಮೇಲೆ ಸೈಬರ್‌ ಅಟ್ಯಾಕ್​ಗಳನ್ನು ನಡೆಸುವ ರಷ್ಯಾಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

English summary
After attacking Ukrainian government websites and banks with massive cyberattacks, Russia-sponsored hackers were now hitting Internet infrastructure in the country to silence the locals amid a full-blown war.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X