Ukraine War: ರಷ್ಯಾದ 51 ಡ್ರೋನ್ ಉಡಾಯಿಸಿದ ಉಕ್ರೇನ್ ಮಿಲಿಟರಿ!
ಉಕ್ರೇನ್ & ರಷ್ಯಾ ನಡುವೆ ಮತ್ತಷ್ಟು ಘೋರವಾದ ಕಾಳಗ ಶುರುವಾಗಿದ್ದು, ಇಬ್ಬರ ಮಧ್ಯೆ ಭರ್ಜರಿ ಕದನ ಏರ್ಪಟ್ಟಿದೆ. ರಷ್ಯಾ ತನ್ನ ಬಳಿ ಇರುವ ಎಲ್ಲಾ ಅಸ್ತ್ರಗಳನ್ನು ತೋಡಿಕೊಂಡು ಬಂದು ಉಕ್ರೇನ್ ಮೇಲೆ ಹಾಕುತ್ತಿದೆ. ಮತ್ತೊಂದು ಕಡೆ ಉಕ್ರೇನ್ ಬೇರೆ ಬೇರೆ ಶ್ರೀಮಂತ ದೇಶಗಳ ಎದುರು ಭಿಕ್ಷೆ ಬೇಡಿಕೊಂಡು ಬಂದು ಬಾಂಬ್‌ಗಳನ್ನು ಸುರಿಯುತ್ತಿದೆ. ಹೀಗಿದ್ದಾಗ ದಿಢೀರ್ ರಷ್ಯಾ ಸೇನೆ ಉಕ್ರೇನ್ ವಿರುದ್ಧ 92 ಡ್ರೋನ್‌ಗಳ ಮೂಲಕ ದಾಳಿ ಮಾಡಿಬಿಟ್ಟಿದೆ.
ತಡರಾತ್ರಿ ಈ ರೀತಿ ರಷ್ಯಾ ಸೇನೆಯಿಂದ ದಿಢೀರ್ 92 ಡ್ರೋನ್‌ಗಳ ಮೂಲಕ ಉಕ್ರೇನ್ ನೆಲದ ಮೇಲೆ ದಾಳಿ ಆಗಿದೆ. ಉಕ್ರೇನ್ ಸೇನೆಯು ತಕ್ಷಣವೇ ಅಲರ್ಟ್ ಆಗಿದ್ದು, ರಷ್ಯಾ ಸೇನೆ ಹಾರಿಸಿದ್ದ ಡ್ರೋನ್‌ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ. ಆದರೆ ಅಷ್ಟರಲ್ಲೇ ರಷ್ಯಾ ಡ್ರೋನ್‌ಗಳು ಸಾಕಷ್ಟು ಹಾನಿಯನ್ನ ಮಾಡಿದ್ದವು. ನೋಡ ನೋಡುತ್ತಲೇ ಭಾರಿ ದೊಡ್ಡ ಹಾನಿ ಉಕ್ರೇನ್ ನೆಲದಲ್ಲಿ ಉಂಟಾಗಿದೆ. ಕೊನೆಗೂ ಹಂಗೋ ಹಿಂಗೋ ಮಾಡಿ 92 ಡ್ರೋನ್‌ಗಳ ಪೈಕಿ ಒಟ್ಟು 51 ಡ್ರೋನ್‌ಗಳನ್ನ ಕೆಳಗೆ ಬೀಳಿಸಿ ನಾಶಪಡಿಸಿದೆ ಉಕ್ರೇನ್ ಸೇನೆ.

ಕದನ ವಿರಾಮಕ್ಕೆ ಬೆಲೆ ಇಲ್ವಾ?
ರಷ್ಯಾ & ಉಕ್ರೇನ್ ನಡುವೆ ಯುದ್ಧ ನಿಲ್ಲಿಸಬೇಕು ಅಂತಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲಾ ಪ್ರಯತ್ನ ಮಾಡಿ, ಸೌದಿ ಅರೇಬಿಯಾದಲ್ಲಿ ಮಹತ್ವದ ಸಭೆಯನ್ನ ಕೂಡ ನಡೆಸಿದ್ದರು. ಆದರೆ ಟ್ರಂಪ್ ಮಾಡುತ್ತಿರುವ ಪ್ರಯತ್ನಗಳು ಫಲ ನೀಡಿಲ್ಲ ಅಂತಾ ಕಾಣುತ್ತದೆ. ಯಾಕಂದ್ರೆ ರಷ್ಯಾ & ಉಕ್ರೇನ್ ನಡುವೆ ಯುದ್ಧ ನಿಂತಿಲ್ಲ, ಎರಡೂ ದೇಶಗಳು ಈಗ ಕೂಡ ಬಡಿದಾಟ ಮುಂದುವರಿಸಿವೆ. ರಷ್ಯಾ ದಾಳಿಗೆ ಅಂತಾ ಹಾರಿಬಿಟ್ಟಿದ್ದ 92 ಡ್ರೋನ್‌ಗಳ ಪೈಕಿ 31 ಡೋನ್ ನಾಪತ್ತೆ ಆಗಿದ್ದು, ಇನ್ನುಳಿದ ಡ್ರೋನ್‌ಗಳನ್ನ ಉಕ್ರೇನ್ ನಾಶಪಡಿಸಿದೆ.
ವೊಲೊಡಿಮಿರ್ ಝೆಲೆನ್ಸ್ಕಿ ಹುಟ್ಟೂರಲ್ಲಿ ರಕ್ತಪಾತ
ರಷ್ಯಾ ದಾಳಿ ಪರಿಣಾಮ ಇದೀಗ ಕೀವ್, ಜೈಟೋಮಿರ್, ಸುಮಿ ಮತ್ತು ಡಿಪ್ರೊಪೆಟ್ರೋಪ್ಸ್ ಪ್ರದೇಶಗಳಲ್ಲಿ ಭಾರಿ ಹಾನಿಯಾಗಿದೆ. ಇಷ್ಟು ಮಾತ್ರವಲ್ಲ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹುಟ್ಟಿದ ಊರಿನ ಮೇಲೂ ರಣ ಭೀಕರ ದಾಳಿಯಾಗಿದೆ. ವೊಲೊಡಿಮಿರ್ ಝೆಲೆನ್ಸ್ಕಿ ಹುಟ್ಟೂರು ಕ್ರಿವಿ ರಿಹ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ ಇದೀಗ 14 ಜನರು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಹೀಗೆ ಕ್ರಿವಿ ರಿಹ್ ನಗರದ ಮೇಲೆ ದಿಢೀರ್ ದಾಳಿ ನಡೆದ ಕಾರಣ 50ಕ್ಕೂ ಹೆಚ್ಚು ಉಕ್ರೇನ್ ಜನರು ಗಾಯಗೊಂಡು ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ. ಗಾಯಾಗೊಂಡಿರುವ ಜನಗಳ ಪೈಕಿ ಹಲವರ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ, ಸಾವಿನ ಸಂಖ್ಯೆ ಹೆಚ್ಚಾಗುವ ಬಗ್ಗೆ ಆತಂಕ ಮೂಡಿದೆ. ರಷ್ಯಾ ಕೂಡಲೇ ದಾಳಿ ನಿಲ್ಲಿಸಬೇಕು ಎಂಬ ಆಗ್ರಹ ಕೂಡ ಕೇಳಿ ಬಂದಿದೆ.












Click it and Unblock the Notifications