
Breaking: ಯುಕೆ ಉಪ ಪ್ರಧಾನಿಯಾಗಿ ಡೊಮಿನಿಕ್ ರಾಬ್ ನೇಮಕ
ಲಂಡನ್, ಅಕ್ಟೋಬರ್ 25: ಯುನೈಟೆಡ್ ಕಿಂಗ್ ಡಮ್ ನೂತನ ಪ್ರಧಾನಮಂತ್ರಿ ರಿಷಿ ಸುನಕ್, ಕಿಂಗ್ ಚಾರ್ಲ್ಸ್ III ಅನ್ನು ಭೇಟಿಯಾದ ಒಂದು ಗಂಟೆಯೊಳಗೆ ತಮ್ಮ "ಕೆಲಸವು ತಕ್ಷಣ ಪ್ರಾರಂಭವಾಗಲಿದೆ" ಎಂಬ ಭರವಸೆಯನ್ನು ಮೂಡಿಸಲು ಹೊರಟಿದ್ದಾರೆ.
ಲಿಜ್ ಟ್ರಸ್ ಸಂಪುಟದ ಸಚಿವರ ಹೊರತಾಗಿ ಹೊಸ ಸಂಪುಟವನ್ನು ರಚಿಸುವಂತೆ ಸೂಚಿಸಲಾಗಿತ್ತು. ಇದರ ಬೆನ್ನಲ್ಲೇ ಕೆಲವು ಸಚಿವರನ್ನು ವಜಾಗೊಳಿಸಿದ ರಿಷಿ ಸುನಕ್, ಎರಡು ನಿರ್ಣಾಯಕ ನೇಮಕಾತಿಗಳನ್ನು ಮಾಡಿದ್ದಾರೆ. ಉಪ ಪ್ರಧಾನ ಮಂತ್ರಿಯಾಗಿ ಡೊಮಿನಿಕ್ ರಾಬ್ ಮತ್ತು ಹಣಕಾಸು ಮಂತ್ರಿಯಾಗಿ ಜೆರೆಮಿ ಹಂಟ್ ಅನ್ನು ನೇಮಿಸಿದ್ದಾರೆ.
ಬ್ರಿಟನ್ ಪ್ರಧಾನಿಯಾದ ಬಳಿಕ ರಿಷಿ ಸುನಕ್ ಹೇಳಿದ್ದೇನು?
ವ್ಯಾಪಾರ ಕಾರ್ಯದರ್ಶಿ ಜಾಕೋಬ್ ರೀಸ್-ಮೊಗ್, ನ್ಯಾಯ ಕಾರ್ಯದರ್ಶಿ ಬ್ರಾಂಡನ್ ಲೂಯಿಸ್, ಪಿಂಚಣಿ ಕಾರ್ಯದರ್ಶಿ ಕ್ಲೋಯ್ ಸ್ಮಿತ್ ಮತ್ತು ಅಭಿವೃದ್ಧಿ ಸಚಿವ ವಿಕಿ ಫೋರ್ಡ್ ಸೇರಿದಂತೆ ಇದುವರೆಗೆ ನಾಲ್ವರು ಸಚಿವರನ್ನು ಕೆಳಗಿಳಿಸುವಂತೆ ಸೂಚಿಸಲಾಗಿದೆ.
ಎರಡು ಪ್ರಮುಖ ನೇಮಕಾತಿ ಬಗ್ಗೆ ಟ್ವೀಟ್:
ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಉಪ ಪ್ರಧಾನಿಯಾಗಿದ್ದ ಡೊಮಿನಿಕ್ ರಾಬ್, ನ್ಯಾಯಾಂಗ ಖಾತೆಯ ರಾಜ್ಯ ಕಾರ್ಯದರ್ಶಿ ಸ್ಥಾನವನ್ನೂ ಹೊಂದಿರುತ್ತಾರೆ. ಅದೇ ರೀತಿ ಕ್ವಾಸಿ ಕ್ವಾರ್ಟೆಂಗ್ ಬದಲಿಗೆ ಜೆರೆಮಿ ಹಂಟ್ ಅನ್ನು ಹಣಕಾಸು ಸಚಿವರಾಗಿ ಮುಂದುವರಿಯಲಿದ್ದಾರೆ. ಈ ಬಗ್ಗೆ ಪ್ರಧಾನಿ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಲಾಗಿದೆ.
ಪ್ರಧಾನಿ ಆಗಿ ರಿಷಿ ಸುನಕ್ ಮೊದಲ ಭಾಷಣ:
ಪ್ರಧಾನ ಮಂತ್ರಿಯಾಗಿ ತಮ್ಮ ಮೊದಲ ಭಾಷಣದಲ್ಲಿ ರಿಷಿ ಸುನಕ್, ತಮ್ಮ ಸರ್ಕಾರದ ಕಾರ್ಯಸೂಚಿಯ ಹೃದಯಭಾಗದಲ್ಲಿ "ಆರ್ಥಿಕ ಸ್ಥಿರತೆ ಮತ್ತು ಸಾಮರ್ಥ್ಯ" ವನ್ನು ಇರಿಸುವುದಾಗಿ ಭರವಸೆ ನೀಡಿದರು. "ನಂಬಿಕೆಯೇ ಸಂಪಾದನೆಯಾಗಿದ್ದು, ನಾನು ನಿಮ್ಮನ್ನು ಸಂಪಾದಿಸಿದ್ದೇನೆ," ಎಂದು ಅವರು ಹೇಳಿದರು. ಇದೇ ವೇಳೆ ತಮ್ಮ ಹಿಂದಿನವರ "ತಪ್ಪುಗಳನ್ನು" ಸರಿಪಡಿಸುವ ಕ್ರಮಗಳ ಬಗ್ಗೆ ವಿವರಿಸಿದರು.
ಸುನಕ್ ಬಲವಾದ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆ, ಶಾಲೆಗಳು, ಸುರಕ್ಷಿತ ಬೀದಿಗಳು, ಸಶಸ್ತ್ರ ಪಡೆಗಳನ್ನು ಬೆಂಬಲಿಸುವುದು, ನಿರುದ್ಯೋಗವನ್ನು ಮಟ್ಟಹಾಕುವುದರ ಜೊತೆಗೆ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯನ್ನು ಈಡೇರಿಸುವುದಾಗಿ ಹೇಳಿದರು. ಇದು ಪ್ರತಿ ಹಂತದಲ್ಲೂ ಸಮಗ್ರತೆ, ವೃತ್ತಿಪರತೆ ಮತ್ತು ಹೊಣೆಗಾರಿಕೆಯನ್ನು ಹೊಂದಿರುತ್ತದೆ ಎಂದು ಹೇಳಿದರು.