ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಲ್ಫಿ ತೆಗೆಯೋದು ಕಲಿಯೋಕೆ 10 ಸಾವಿರ ರು?!

By Mahesh
|
Google Oneindia Kannada News

ಲಂಡನ್, ಜ. 5: ಈಗ ಸೆಲ್ಫಿ ಜಮಾನ. ಕೈಯಲ್ಲಿರುವ ಸ್ಮಾರ್ಟ್ ಫೋನ್ ಹಿಡಿದು ತಮ್ಮ ಭಾವಚಿತ್ರವನ್ನು ತಾವೇ ತೆಗೆದುಕೊಳ್ಳುವ ಸೆಲ್ಫ್ ಫೋಟೋಗ್ರಾಫಿ ಈಗ ಸೆಲ್ಫಿಯಾಗಿ ವಿಶ್ವದೆಲ್ಲೆಡೆ ಜನಪ್ರಿಯತೆ ಪಡೆದುಕೊಂಡಿದೆ. ಸೆಲ್ಫಿ ತೆಗೆದುಕೊಳ್ಳಲು ಕಷ್ಟವಾಗುತ್ತಿದೆಯೇ? ಚಿಂತೆ ಬೇಡ ಕೇವಲ 10 ಸಾವಿರ ರು ಪಾವತಿಸಿ ಸೆಲ್ಫಿ ತೆಗೆಯೋದು ಹೇಗೆ ಎಂಬ ಕೋರ್ಸ್ ಮಾಡಿ ಎಂದು ಯುಕೆಯ ಕಾಲೇಜೊಂದು ಆಫರ್ ನೀಡುತ್ತಿದೆ.

ಸಿಟಿ ಲಿಟ್ ಕಾಲೇಜು ಮೊತ್ತ ಮೊದಲ 'ಸೆಲ್ಫಿ ಕೋರ್ಸ್'ನ್ನು ಈ ವರ್ಷದ ಮಾರ್ಚ್‌ನಲ್ಲಿ ಆರಂಭಿಸಲಿದೆ. 'ದ ಆರ್ಟ್ ಆಫ್ ಫೋಟೊಗ್ರಫಿಕ್ ಸೆಲ್ಫ್-ಪೋಟ್ರೇಚರ್' ಎಂಬ ಹೆಸರಿನ ಕೋರ್ಸ್‌ನ ಶುಲ್ಕ 160 ಡಾಲರ್/ 132 ಯುರೋ (ಸುಮಾರು 10,000 ರೂ.).

UK college offers selfie course for 132 euros

ಒಂದು ತಿಂಗಳ ಅವಧಿಯ ಕೋರ್ಸ್ ಉಪನ್ಯಾಸಗಳು ಮತ್ತು ವಿಚಾರಸಂಕಿರಣಗಳನ್ನು ಹೊಂದಿರುತ್ತದೆ. 'ಕೋರ್ಸ್ ಸ್ವ-ಭಾವಚಿತ್ರ ಕುರಿತ ವಿದ್ಯಾರ್ಥಿಗಳ ತಿಳುವಳಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಫೋಟೋಗ್ರಾಫಿಯ ಕೆಲಸದಲ್ಲಿ ಸುತ್ತಮುತ್ತಲಿನ ಸಮಸ್ಯೆ, ಬಳಕೆ, ಬೆಳಕಿನ ಹಾಗೂ ಗಮನಾರ್ಹ ವಿವರ ವಿಚಾರಗಳನ್ನು ವಿವರಿಸಲು ಮತ್ತು ಹೊಸ ಹೊಸ ಕಲ್ಪನೆಗಳನ್ನು ಅಭಿವೃದ್ಧಿ ಪಡೆಸಿಕೊಳ್ಳಲು ಈ ಕೋರ್ಸ್ ಸಹಕಾರಿಯಾಗಲಿದೆ ಎಂದು ಕಾಲೇಜು ಹೇಳಿದೆ.

ಸೆಲ್ಫಿ ಫೋಟೋ ತೆಗೆದುಕೊಳ್ಳಲು ಹೋಗಿ ರೈಲು ಅಪಘಾತ, ಎತ್ತರ ಬೆಟ್ಟದಿಂದ ಜಿಗಿದು ಸಾವು,ಗೋಪುರದಿಂದ ಜಿಗಿದು ಸಾವು ಮುಂತಾದ ಪ್ರಕರಣಗಳು ಈ ಕೋರ್ಸ್ ಮೂಲಕ ಕಡಿಮೆಯಾಗಬಹುದು. ಸೆಲ್ಫಿ ತೆಗೆಯುವ ವಿಧಾನ ಬದಲಾದರೆ ಚಿತ್ರ ಚೆನ್ನಾಗಿ ಬರುತ್ತದೆ, ಸುರಕ್ಷಿತವಾಗಿರುತ್ತದೆ ಎಂದು ಹೇಳಲಾಗಿದೆ.(ಪಿಟಿಐ)

English summary
A U.K. college is offering its students a new course on the art of selfies and chance to become fully qualified selfie-takers. City Lit College will offer a first ever ‘selfie course’ for 132 euros or $160 starting this March called “The art of photographic self-portraiture”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X