ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರನೇ ಲಸಿಕೆಗೆ ಅನುಮತಿ ನೀಡಿದ ಬ್ರಿಟನ್; ಮಾಡರ್ನಾಗೆ ಬೇಡಿಕೆ

|
Google Oneindia Kannada News

ಬ್ರಿಟನ್, ಜನವರಿ 08: ಬ್ರಿಟನ್ ಔಷಧ ನಿಯಂತ್ರಣ ಪ್ರಾಧಿಕಾರವು ಅಮೆರಿಕ ಬಯೋಟೆಕ್ ಕಂಪನಿಯ ಮಾಡರ್ನಾ ಲಸಿಕೆಗೆ ಶುಕ್ರವಾರ ಅನುಮತಿ ನೀಡಿದೆ. ಈ ಮೂಲಕ ದೇಶದಲ್ಲಿ ಅನುಮತಿ ಪಡೆದಿರುವ ಮೂರನೇ ಲಸಿಕೆ ಇದಾಗಿದೆ.

ಇದೀಗ ಫೈಜರ್/ಬಯೋಟೆಕ್ ಹಾಗೂ ಆಕ್ಸ್ ಫರ್ಡ್/ಆಸ್ಟ್ರಾಜೆನೆಕಾ ಲಸಿಕೆಗಳೊಂದಿಗೆ ಬ್ರಿಟನ್ ನಲ್ಲಿ ಮಾಡರ್ನಾ ಲಸಿಕೆಯನ್ನೂ ಜನರಿಗೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ.

ದೇಶದಲ್ಲಿ ಶೀಘ್ರದಲ್ಲಿಯೇ ಬರಲಿದೆ ಮೂಗಿನ ಮೂಲಕ ನೀಡುವ ಕೋವಿಡ್-19 ಲಸಿಕೆದೇಶದಲ್ಲಿ ಶೀಘ್ರದಲ್ಲಿಯೇ ಬರಲಿದೆ ಮೂಗಿನ ಮೂಲಕ ನೀಡುವ ಕೋವಿಡ್-19 ಲಸಿಕೆ

ಮಾಡರ್ನಾ ಲಸಿಕೆ ಕುರಿತು ಸೂಕ್ತ ಮಾಹಿತಿ, ಅಂಕಿಅಂಶಗಳನ್ನು ಪರಿಗಣಿಸಿ 70 ಲಕ್ಷ ಡೋಸ್ ಗಳಿಗೆ ಬೇಡಿಕೆ ಇರಿಸಿ ಒಪ್ಪಂದ ಮಾಡಿಕೊಂಡಿದೆ. ಆದರೆ ಮಾರ್ಚ್ ನಂತರ ಈ ಲಸಿಕೆ ಲಭ್ಯವಾಗುವುದಾಗಿ ತಿಳಿದುಬಂದಿದೆ. ಮಾಡರ್ನಾ ಕಂಪನಿಯ ಉತ್ಪಾದನಾ ಸಾಮರ್ಥ್ಯ ವಿಸ್ತರಿಸಿದ ನಂತರ ಲಂಡನ್ ಗೆ ಲಸಿಕೆ ಪೂರೈಸಲಾಗುವುದು ಎಂದು ತಿಳಿಸಿದೆ.

UK Approves Moderna Vaccine Against COVID 19

"ಬ್ರಿಟನ್ ನಾದ್ಯಂತ 1.5 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಮಾಡರ್ನಾ ಲಸಿಕೆಯು ಕೊರೊನಾ ವಿರುದ್ಧ ಹೋರಾಟದ ಮತ್ತೊಂದು ಅಸ್ತ್ರವಾಗಿದೆ. ಮಾಡರ್ನಾ ಲಸಿಕೆ ಲಭ್ಯವಾದ ನಂತರ ಮತ್ತಷ್ಟು ಜನರಿಗೆ ಲಸಿಕೆ ನೀಡಲಾಗುವುದು" ಎಂದು ಬ್ರಿಟನ್ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ಕಾಕ್ ತಿಳಿಸಿದ್ದಾರೆ.

ಅಮೆರಿಕದ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ಮಾಡರ್ನಾ ಲಸಿಕೆಯನ್ನು ಸುಮಾರು 30 ಸಾವಿರ ಜನರ ಮೇಲೆ ಪ್ರಯೋಗಿಸಲಾಗಿದೆ. ಈ ಲಸಿಕೆ ಶೇ.94.5 ಪರಿಣಾಮಕಾರಿ ಎಂದು ತಿಳಿದುಬಂದಿದ್ದು, ಕಳೆದ ತಿಂಗಳು ಅಮೆರಿಕದಲ್ಲಿ ಲಸಿಕೆಗಳನ್ನು ನೀಡಲಾಗಿದೆ. ಅಮೆರಿಕ, ಕೆನಡಾ, ಯುರೋಪ್ ರಾಷ್ಟ್ರಗಳಲ್ಲಿ ಈಗಾಗಲೇ ಮಾಡರ್ನಾ ಲಸಿಕೆ ಬಳಕೆಗೆ ಅನುಮತಿ ಸಿಕ್ಕಿದೆ.

English summary
UK's medicine regulatory authority on Friday approved a third COVID-19 vaccine Moderna in country
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X