Israel And Iran: ಇರಾನ್ ಜೊತೆಗೆ ಸಂಧಾನ ಮಾಡಿಕೊಳ್ಳಲು ಸರ್ಕಸ್ ಶುರು?
ಇರಾನ್ & ಇಸ್ರೇಲ್ ಜಗಳ ನೋಡಿ ಯುರೋಪ್ ಮತ್ತು ಬ್ರಿಟನ್ ಹೆದರುತ್ತಿವೆ ಎಂಬ ಆರೋಪಕ್ಕೆ ಇದೀಗ ಮತ್ತಷ್ಟು ಬಲ ಸಿಕ್ಕಿದೆ. ಯಾಕಂದ್ರೆ ಇಸ್ರೇಲ್ ವಿರುದ್ಧ ಘೋರವಾಗಿ ದಾಳಿ ಮಾಡುತ್ತಿರುವ ಇರಾನ್ ಸೇನೆ ಭಯದ ವಾತಾವರಣ ಸೃಷ್ಟಿ ಮಾಡಿದ್ದು, ತನ್ನ ಶತ್ರು ಪಡೆಯನ್ನು ಹೇಗಾದರೂ ಮಾಡಿ ಇಲ್ಲ ಅನ್ನಿಸಬೇಕು ಎಂದು ತೊಡೆ ತಟ್ಟಿದೆ. ಆದರೆ ಇಬ್ಬರ ಮಧ್ಯೆ ಇದೇ ರೀತಿ ಕಿರಿಕ್ ಮುಂದುವರಿದರೆ ಭವಿಷ್ಯದಲ್ಲಿ ಭಾರಿ ದೊಡ್ಡ ಏಟು ಬೀಳುವುದು ಗ್ಯಾರಂಟಿ ಅನ್ನೋದನ್ನ ಅರಿತುಕೊಂಡು, ದೀಢೀರ್ ಸಂಧಾನಕ್ಕೆ ಸಿದ್ಧವಾಗಿದೆ ಯುರೋಪ್ ಒಕ್ಕೂಟ & ಬ್ರಿಟನ್.
ಇಸ್ರೇಲ್ ಮತ್ತು ಇರಾನ್ ನಡುವೆ ಆಗಾಗ ದೊಡ್ಡ ಮಟ್ಟಿಗೆ ಜಗಳ ಆಗುತ್ತಲೇ ಇರುತ್ತದೆ, ಕೆಲವು ದಿನಗಳ ಕಾಲ ಫೈಟಿಂಗ್ ಮಾಡುವ ಈ ಎರಡೂ ದೇಶಗಳು ಮತ್ತೆ ಸುಮ್ಮನೆ ಆಗುತ್ತಿದ್ದವು. ಆದರೆ ಈ ಬಾರಿ ಎಲ್ಲಾ ಹಾರಿ ಹೋಗುವಂತೆ ಫೈಟಿಂಗ್ ಮಾಡುತ್ತಿದ್ದಾರೆ ಇಸ್ರೇಲ್ & ಇರಾನ್ ಸೈನಿಕರು. ಮಿಸೈಲ್‌ಗಳ ಮೂಲಕ ಭಾರಿ ದೊಡ್ಡ ಮಟ್ಟದಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಿದ್ದು, ಇನ್ನು ಕೆಲವೇ ಕೆಲವು ದಿನಗಳಲ್ಲಿ ಈ ಯುದ್ಧ ಪರಮಾಣು ಯುದ್ಧವಾಗಿ ಬದಲಾಗುವ ಭಯ ಕೂಡ ಆವರಿಸಿದೆ. ಇಂತಹ ಸಮಯದಲ್ಲೇ ಅತ್ತ ಯುರೋಪ್ ಒಕ್ಕೂಟ & ಇತ್ತ ಬ್ರಿಟನ್ ಸೇರಿ ಸಂಧಾನ ಮಾತುಕತೆಗೆ ಮುಂದಾಗಿವೆಯಂತೆ.

ಯುದ್ಧ ನಿಲ್ಲಿಸಲು ಮಹತ್ವದ ಹೆಜ್ಜೆ?
ದಿಢೀರ್ ಇಸ್ರೇಲ್ & ಇರಾನ್ ನಡುವೆ ಯುದ್ಧ ಶುರುವಾಗಲು ಕಾರಣವಾಗಿದ್ದು ಡ್ರೋನ್ ಕಿರಿಕ್. ಹೀಗೆಲ್ಲಾ ಸಣ್ಣ ವಿಷಯ ದೊಡ್ಡದು ಮಾಡಿ ಇಬ್ಬರೂ ಘೋರ ಯುದ್ಧಕ್ಕೆ ಮುನ್ನುಡಿ ಬರೆದರು. ಅಷ್ಟಕ್ಕೂ ಇರಾನ್ ತನ್ನ ಪ್ರದೇಶದ ಕಡೆಗೆ ಸುಮಾರು 100 ಡ್ರೋನ್ ಹಾರಿಸಿದೆ ಅಂತಾ ಇಸ್ರೇಲ್ ಮಿಸೈಲ್ ಅಟ್ಯಾಕ್ ಮಾಡಿತ್ತು. ಆ ನಂತರ ರೊಚ್ಚಿಗೆದ್ದ ಇರಾನ್ ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ದಾಳಿ ಮಾಡುತ್ತಿದ್ದು, ಹೀಗೆಲ್ಲಾ ಈ ಇಬ್ಬರ ನಡುವೆ ರಣಭೀಕರ ವಾರ್ ನಡೆಯುವಾಗಲೇ ಎಚ್ಚೆತ್ತುಕೊಂಡಿರುವ ಯುರೋಪ್ ಒಕ್ಕೂಟ ಮತ್ತು ಬ್ರಿಟನ್ ನಾಯಕರು ಯುದ್ಧ ನಿಲ್ಲಿಸಲು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಜಿನೀವಾ ನಗರದಲ್ಲಿ ಇರಾನ್ & ಇಸ್ರೇಲ್ ಸಂಧಾನ?
ಈಗಿರುವ ಮಾಹಿತಿ ಪ್ರಕಾರ ಸ್ವಿಜರ್ಲ್ಯಾಂಡ್ ದೇಶದ ಜಿನೀವಾ ನಗರದಲ್ಲಿ ಇರಾನ್ & ಇಸ್ರೇಲ್ ನಡುವಿನ ಈ ಯುದ್ಧ ನಿಲ್ಲಿಸಲು ಮಹತ್ವದ ಮಾತುಕತೆ ಆರಂಭ ಆಗಲಿದೆಯಂತೆ. ಈಗಾಗಲೇ ಯುರೋಪ್ ಸಚಿವರು ಸಂಧಾನ & ಕದನ ವಿರಾಮ ಘೋಷಣೆಗೆ ಚರ್ಚೆ ಶುರು ಮಾಡಿದ್ದು, ಬ್ರಿಟನ್ ಕೂಡ ಒಪ್ಪಂದಕ್ಕೆ ಸಾಥ್ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲದೆ ಮತ್ತೊಂದು ಕಡೆ ವಿಶ್ವಸಂಸ್ಥೆ ಕೂಡ ಯುದ್ಧ ನಿಲ್ಲಿಸಲು ಬೇಕಾಗಿರುವ ಪ್ರಯತ್ನಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುತ್ತಿದ್ದು, ಭಾರಿ ಕುತೂಹಲ ಕೆರಳಿದೆ. ಮತ್ತೊಂದು ಕಡೆ ಈ ಯುದ್ಧ ನಿಂತರೆ ಆ ಮೂಲಕ ಜಾಗತಿಕ ಮಟ್ಟದಲ್ಲಿ ಮತ್ತೊಂದು ಪರಮಾಣು ಯುದ್ಧದ ಭಯ ನಿಂತು ಹೋಗಲಿದೆ.












Click it and Unblock the Notifications