ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭದ್ರತೆ ಕಾರಣಕ್ಕೆ ಲಂಡನ್ ಸಾರಿಗೆ ಲೈಸನ್ಸ್ ಕಳೆದುಕೊಂಡ ಉಬರ್

By Sachhidananda Acharya
|
Google Oneindia Kannada News

ಲಂಡನ್, ಸೆಪ್ಟೆಂಬರ್ 22: ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುವ ದೈತ್ಯ ಕಂಪೆನಿ ಉಬರ್ ಲಂಡನ್ ಪರವಾನಿಗೆಯನ್ನು ಕಳೆದುಕೊಂಡಿದೆ. ಸೆಪ್ಟೆಂಬರ್ 30ಕ್ಕೆ ಉಬರ್ ನ ಲಂಡನ್ ಸಾರಿಗೆ ಲೈಸನ್ಸ್ ಕೊನೆಗೊಳ್ಳಲಿದ್ದು, ಭದ್ರತಾ ಕಾರಣಕ್ಕೆ ನವೀಕರಿಸುವುದಿಲ್ಲ ಎಂದು ಸಾರಿಗೆ ಅಧಿಕಾರಿಗಳು ಹೇಳಿದ್ದಾರೆ.

ಕುಮಾರಸ್ವಾಮಿಯಿಂದ ನವರಾತ್ರಿ ಗಿಫ್ಟ್, 'ನಮ್ಮ ಟೈಗರ್‌' ಆ್ಯಪ್‌ ಬಿಡುಗಡೆಕುಮಾರಸ್ವಾಮಿಯಿಂದ ನವರಾತ್ರಿ ಗಿಫ್ಟ್, 'ನಮ್ಮ ಟೈಗರ್‌' ಆ್ಯಪ್‌ ಬಿಡುಗಡೆ

ಆದರೆ ಉಬರ್ ಗೆ ಮರು ಪರಿಶೀಲನೆ ಅರ್ಜಿ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ಇದೆ ಎಂದು 'ಎಎಫ್ಪಿ' ಸುದ್ದಿ ಸಂಸ್ಥೆ ವರದಿ ಮಾಡಿದೆ. ಉಬರ್ ಸಂಸ್ಥೆಯಡಿಯಲ್ಲಿ ಲಂಡನಿನಲ್ಲಿ 25,000 ಚಾಲಕರು ಕಾರ್ಯ ನಿರ್ವಹಿಸುತ್ತಿದ್ದು, ಚಾಲಕರ ಭವಿಷ್ಯವೀಗ ತೂಗುಯ್ಯಾಲೆಯಲ್ಲಿದೆ.

Uber loses license to operate in London

ಉಬರ್ ನ ಕಾರ್ಯ ನಿರ್ವಹಣೆಯಲ್ಲಿ ಸಾರ್ವಜನರಿಕ ಸುರಕ್ಷತೆ ಮತ್ತು ಭದ್ರತೆಗೆ ಧಕ್ಕೆಯಾಗುವಂತಹ ಅಂಶಗಳಿವೆ. ಉಬರ್ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಲೈಸನ್ಸ್ ರದ್ದು ಪಡಿಸಲು ಸಾರಿಗೆ ಇಲಾಖೆ ಕಾರಣವನ್ನು ನೀಡಿದೆ.

ಸಾರಿಗೆ ಇಲಾಖೆಯ ಈ ತೀರ್ಮಾನವನ್ನು ಬೆಂಬಲಿಸುವುದಾಗಿ ಲಂಡನ್ ಮೇಯರ್ ಸಾದಿಕ್ ಖಾನ್ ಹೇಳಿದ್ದಾರೆ. ಲಂಡನ್ ಜನರಿಗೆ ಅತ್ಯುತ್ತಮ ತಂತ್ರಜ್ಞಾನ ಬೇಕು ನಿಜ. ಆದರೆ ಸುರಕ್ಷತೆಯನ್ನು ಪಣಕ್ಕಿಟ್ಟು ಯಾವುದೇ ತಂತ್ರಜ್ಞಾನಗಳು ಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.

ಇದೀಗ ಸಾರಿಗೆ ಲೈಸನ್ಸ್ ಗೆ ಹೊಸದಾಗಿ ಅರ್ಜಿ ಸಲ್ಲಿಸಲಾಗುವುದು ಎಂದು ಉಬರ್ ಕಂಪನಿ ಹೇಳಿದೆ.

English summary
The global cab aggregator Uber lost license to operate in London, reports said. London's transport regulator has rejected Uber's application to renew its license to operate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X