ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೆಮೆನ್‌: ಹೂತಿ ಬಂಡುಕೋರರು ಹಾರಿಸಿದ ಕ್ಷಿಪಣಿ ಹೊಡೆದುರುಳಿಸಿದ ಯುಎಇ

|
Google Oneindia Kannada News

ಯೆಮೆನ್‌ನಲ್ಲಿ ಹೂತಿ ಬಂಡುಕೋರರು ಹಾರಿಸಿದ ಕ್ಷಿಪಣಿಯನ್ನು ಯುಎಇ ಹೊಡೆದುರುಳಿಸಿದೆ.

ಈ ಕುರಿತು ಯುನೈಟೆಡ್ ಅರಬ್ ಎಮಿರೇಟ್ಸ್‌ ಮಾಹಿತಿ ನೀಡಿದೆ, ಯಾವುದೇ ದಾಳಿ ಭೀತಿಯನ್ನು ಎದುರಿಸಲು ಸಿದ್ಧವಾಗಿದ್ದು, ಎಲ್ಲಾ ದಾಳಿಗಳಿಂದ ದೇಶವನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.

ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ, ಖಂಡಾಂತರ ಕ್ಷಿಪಣಿಯ ಅವಶೇಷಗಳು ಅಬುಧಾಬಿ ಎಮಿರೇಟ್ಸ್‌ನ ಸುತ್ತಲಿನ ಪ್ರದೇಶದಲ್ಲಿ ಬಿದ್ದಿವೆ ಎಂದು ಪ್ರಕಟಣೆ ತಿಳಿಸಿದೆ.

UAE Intercepts Two Ballistic Missiles Fired By Yemens Huthi Rebels: Defence Ministry

ಯುಎಇ, ಹೌತಿ ಬಂಡುಕೋರರ ವಿರುದ್ಧದ ಹೋರಾಟದಲ್ಲಿ ಯೆಮೆನ್ ಸರ್ಕಾರವನ್ನು ಬೆಂಬಲಿಸುತ್ತಿರುವ ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟದ ಭಾಗವಾಗಿದೆ. ಯೆಮೆನ್‌ನಲ್ಲಿ ಹೂತಿ ಬಂಡುಕೋರರು, ಅಬುಧಾಬಿ ಮೇಲೆ ನಡೆಸಿದ ಡ್ರೋನ್ ದಾಳಿಯ ಹೊಣೆ ಹೊತ್ತುಕೊಂಡ ಒಂದು ವಾರದ ಅಂತರದಲ್ಲಿ ಈ ಘಟನೆ ನಡೆದಿದೆ.

2014ರಲ್ಲಿ ಇರಾನ್ ಬೆಂಬಲಿತ ಹೂತಿ ಬಂಡುಕೋರರು ಯೆಮೆನ್‌ನ ಸನಾ ನಗರವನ್ನು ವಶಪಡಿಸಿಕೊಂಡ ಬಳಿಕ ನಾಗರಿಕ ಯುದ್ಧವು ಪ್ರಾರಂಭವಾಗಿದೆ. ಡ್ರೋನ್ ದಾಳಿಯ ಬೆನ್ನಲ್ಲೇ ಒಕ್ಕೂಟವು ಹೌತಿ ಬಂಡುಕೋರರ ಹಿಡಿತದಲ್ಲಿರುವ ರಾಜಧಾನಿ ಸನಾ ಮೇಲೆ ಪ್ರತಿದಾಳಿ ನಡೆಸಿತ್ತು. ಇದರಲ್ಲಿ ಕನಿಷ್ಠ 11ಮಂದಿ ಮೃತಪಟ್ಟಿದ್ದರು.

ಇತ್ತೀಚೆಗೆ, ಯೆಮೆನ್ ಜೈಲಿನ ಮೇಲೆ ವೈಮಾನಿಕ ದಾಳಿ ನಡೆದಿದ್ದು, ಪರಿಣಾಮ 100 ಕೈದಿಗಳು ಸಾವನ್ನಪ್ಪಿರುವ ಘಟನೆ ನಡೆದಿತ್ತು.

ಹೂತಿ ಬಂಡುಕೋರರಿಂದ ಮತ್ತೊಂದು ಭೀಕರ ದಾಳಿ ನಡೆದಿದೆ. ಯೆಮೆನ್​ನ ಸಾದಾ ಜೈಲಿನ ಮೇಲೆ ಬಂಡುಕೋರರು ವೈಮಾನಿಕ ದಾಳಿ ನಡೆಸಿದ್ದು, 100ಕ್ಕೂ ಅಧಿಕ ಕೈದಿಗಳು ಮೃತಪಟ್ಟಿದ್ದಾರೆ. ಅಲ್ಲದೇ 200ಕ್ಕೂ ಅಧಿಕ ಕೈದಿಗಳು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಇದುವರೆಗೆ 100 ಅಧಿಕ ಶವಗಳನ್ನು ಹೊರ ತೆಗೆಯಲಾಗಿದೆ. ಕಟ್ಟಡದ ಅವಶೇಷಗಳಡಿ ಇನ್ನಷ್ಟು ಕೈದಿಗಳ ಶವಗಳು ಸಿಲುಕಿರುವ ಸಾಧ್ಯತೆ ಇದೆ. 200ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

'ಯೆಮೆನ್​ನ ಸಾದಾ ಜೈಲಿನ ಮೇಲೆ ಇರಾನ್​ ಬೆಂಬಲಿತ ಹೌತಿ ಬಂಡುಕೋರರು ನಡೆಸಿದ ದಾಳಿಯಿಂದ ಜೈಲಿನ ಕಟ್ಟಡ ಧ್ವಂಸವಾಗಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿದವರನ್ನು ರಕ್ಷಣೆ ಮಾಡಲಾಗುತ್ತಿದೆ. ಸೌದಿಯ ರಕ್ಷಣಾ ಪಡೆಗಳು ಇಲ್ಲಿಗೆ ಧಾವಿಸುತ್ತಿವೆ' ಎಂದು ಯೆಮೆನ್​ ರೆಡ್​​ಕ್ರಾಸ್​ ಸಮಿತಿಯ ಅಧಿಕಾರಿ ಬಶೀರ್​ ಒಮರ್​ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ, ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ)ದ ರಾಜಧಾನಿಯಲ್ಲಿರುವ ಪೆಟ್ರೋಲ್‌ ಬಂಕ್‌ಗಳ ಮೇಲೆ ಹೌತಿ ಬಂಡುಕೋರರು ದಾಳಿ ಮಾಡಿದ ಬೆನ್ನಲ್ಲೇ, ಸೌದಿ ಅರೆಬಿಯಾ ನೇತೃತ್ವದ ಮೈತ್ರಿ ಪಡೆಗಳು ಯೆಮೆನ್‌ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 14 ಮಂದಿ ಸಾವಿಗೀಡಾಗಿದ್ದಾರೆ.

ಯೆಮೆನ್‌ ರಾಜಧಾನಿ ಸನಾ ಮೇಲೆ ಈ ಬಾಂಬ್‌ ದಾಳಿ ನಡೆದಿದ್ದು, ಆ ಮೂಲಕ ಮಧ್ಯ ಪ್ರಾಚ್ಯದಲ್ಲಿ ಮತ್ತೆ ಬಾಂಬುಗಳ ಸದ್ದು ಕೇಳತೊಡಗಿದೆ.

ಘಟನೆಯಲ್ಲಿ 14 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಲ್ಲಿಂದ ಬಂದ ಪ್ರಾಥಮಿಕ ವರದಿಯಿಂದ ಗೊತ್ತಾಗಿದೆ. ದಾಳಿಯಲ್ಲಿ ಸೇನೆಯ ಮಾಜಿ ಅಧಿಕಾರಿಯೊಬ್ಬರ ಮನೆ ಕೂಡ ಹಾನಿಗೀಡಾಗಿದೆ. ಘಟನೆಯಲ್ಲಿ ಅಧಿಕಾರಿ, ಅವರ ಪತ್ನಿ, 25 ವರ್ಷದ ಅವರ ಮಗ ಹಾಗೂ ಕುಟುಂಬಸ್ಥರು ಸಾವಿಗೀಡಾಗಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ)ನ ರಾಜಧಾನಿ ಅಬುಧಾಬಿಯ ಪೆಟ್ರೋಲ್‌ ಟ್ಯಾಂಕ್‌ಗಳ ಮೇಲೆ ಇರಾನ್‌ ಬೆಂಬಲಿತ ಯೆಮೆನ್‌ ಮೂಲದ ಹೌತಿ ಬಂಡುಕೋರರು ಸೋಮವಾರ ನಡೆಸಿರುವ ಡ್ರೋನ್‌ ದಾಳಿಯಲ್ಲಿ ಮೂವರು ಸಾವನ್ನಪ್ಪಿ, ಆರು ಜನರು ಗಾಯಗೊಂಡಿದ್ದರು.

English summary
Two ballistic missiles fired by Yemen's Huthi rebels have been intercepted and destroyed over the United Arab Emirates, the defence ministry said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X