ಇಟಲಿಯಲ್ಲಿ ಭೂಕಂಪಕ್ಕೆ ವಿದ್ಯುತ್ ಸಂಪೂರ್ಣ ಕಡಿತ!

Posted By:
Subscribe to Oneindia Kannada

ರೋಮ್, ಅಕ್ಟೋಬರ್ 27: ಇಟಲಿಯ ಕೇಂದ್ರ ಭಾಗದಲ್ಲಿ ಬುಧವಾರ ಸಂಭವಿಸಿದ ಎರಡು ಭೂಕಂಪದಿಂದಾಗಿ ಆ ಭಾಗದಲ್ಲಿ ವಿದ್ಯುತ್, ಟೆಲಿಫೋನ್ ಸಂಪರ್ಕ ಕಡಿತಗೊಂಡಿದ್ದರೆ, ಪುರಾತನ ಕಟ್ಟಡಗಳು ತೀವ್ರವಾಗಿ ಹಾನಿಗೊಳಗಾಗಿವೆ.

ರಿಕ್ಟರ್ ಮಾಪಕದಲ್ಲಿ 5.4 ಹಾಗೂ 5.9ರಷ್ಟು ತೀವ್ರತೆ ಹೊಂದಿದ್ದ ಪ್ರಬಲ ಭೂಕಂಪ ಒಟ್ಟಾರೆ, ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಭೂಕಂಪಪೀಡಿತ ಪ್ರದೇಶಗಳ ಎಲ್ಲಾ ಪ್ರಮುಖ ಹೆದ್ದಾರಿಗಳು ಮುಚ್ಚಿವೆ. ಇತ್ತೀಚೆಗೆ ಪ್ರಬಲ ಭೂಕಂಪ 300ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ಎರಡು ತಿಂಗಳಲ್ಲೇ ಮತ್ತೊಂದು ಘೋರ ದುರಂತ ಸಂಭವಿಸಿದ್ದು, ಜನ ಬೀದಿಪಾಲಾಗಿದ್ದಾರೆ.[ಚಿತ್ರಗಳು : ಇಟಲಿಯಲ್ಲಿ ಭೂಕಂಪ, 250ಕ್ಕೇರಿದ ಸಾವಿನ ಸಂಖ್ಯೆ]

Two Earthquakes Shake Up Central Italy

ಹಲವು ಕಟ್ಟಡಗಳು ಕುಸಿದಿದ್ದು, ಹಾನಿಯ ಬಗ್ಗೆ ಸ್ಪಷ್ಟ ವಿವರಗಳು ಇನ್ನೂ ಲಭ್ಯವಾಗುತ್ತಿಲ್ಲ, ಮಸೆರೆಟಾ ಪ್ರಾಂತ್ಯ ಕೇಂದ್ರ ಭಾಗವಾಗಿತ್ತು. ವೆನೆಟೋ, ನೆರಾ, ವಿಸೊ, ಉಸಿತಾಗಳಲ್ಲಿ ಹೆಚ್ಚಿನ ಹಾನಿಯಾಗಿದೆ ಎಂದು ಇಟೆಲಿಯ ನಾಗರಿಕ ರಕ್ಷಣಾ ಸಂಸ್ಥೆಯ ವಕ್ತಾರ ಒರ್ನೆಲ್ಲಾ ಡೆ ಲೂಕಾ ಹೇಳಿದ್ದಾರೆ.

ವಿದ್ಯುತ್ ವ್ಯವಸ್ಥೆಯೂ ಇಲ್ಲದೇ, ತುರ್ತು ಪರಿಹಾರ ಸಿಬ್ಬಂದಿಗೆ ನಾವು ಎದುರು ನೋಡುತ್ತಿದ್ದೇವೆ ಎಂದು ಕ್ಯಾಸೆಲ್ ಸ್ಯಾಂಟಾಂಗ್ಲೋ ಸುಲ್ ನೆರಾ ಮೇಯರ್ ಹೇಳಿದ್ದಾರೆ. ನಿಜವಾಗಿಯೂ ಕಠಿಣ ಪರಿಸ್ಥಿತಿ ಇದೆ ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ. ಹಲವು ಕಟ್ಟಡಗಳು ಕುಸಿದಿದ್ದರೂ ಗಾಯಾಳುಗಳ ಬಗ್ಗೆ ವಿವರ ಸಿಕ್ಕಿಲ್ಲ. ಏಕೆಂದರೆ ಕತ್ತಲಿನಲ್ಲಿ ಪರಿಹಾರ ಕಾರ್ಯಾಚರಣೆ ಸಾಧ್ಯವಾಗುತ್ತಿ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two powerful earthquakes rattled central Italy on Wednesday, knocking down electrical and telephone lines, damaging buildings and frightening the residents of several towns
Please Wait while comments are loading...