ಅವಳಿ ಮಕ್ಕಳಿಗೆ ಇಬ್ಬರು ಅಪ್ಪಂದಿರು; ವೈದ್ಯರು ಅಚ್ಚರಿ- ಅಪರೂಪದ ಕೇಸ್
ಬ್ರೆಜಿಲ್, ಸೆಪ್ಟೆಂಬರ್ 08: ಮಾನವ ಸಂತತಿಯ ಇತಿಹಾಸದಲ್ಲಿ ಅಚ್ಚರಿ ಪಡುವ ಕೋಟಿಗೊಂದು ಪ್ರಕರಣ ಎಂಬಂತೆ ಬ್ರೆಜಿಲ್‌ನ 19 ವರ್ಷದ ಯುವತಿಯೊಬ್ಬಳು ಇಬ್ಬರು ತಂದೆಯ ಜೈವಿಕ ಅಂಶವಿರುವ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಯುವತಿಯು ಗೋಯಾಸ್‌ನ ಮಿನೆರಿಯೊಸ್ ಪ್ರದೇಶದವಳಾಗಿದ್ದು. ಒಂದೇ ದಿನ ಇಬ್ಬರು ಪುರುಷರೊಂದಿಗೆ ಲೈಂಗಿಕ ಸಂಭೋಗ ಮಾಡಿದ ಪರಿಣಾಮ ಒಂಬತ್ತು ತಿಂಗಳ ನಂತರ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಪಿತೃತ್ವ ಪರೀಕ್ಷೆಯನ್ನು ಮಾಡಿದ ನಂತರ ವೈದ್ಯರೇ ಬಿಬ್ಬೆರಗಾಗುವಂತೆ ಪರೀಕ್ಷೆಯ ಫಲಿತಾಂಶ ಬಂದಿದ್ದು, ಜನ್ಮ ಪಡೆದಿರುವ ಅವಳಿ ಮಕ್ಕಳಿಗೆ ಇಬ್ಬರು ತಂದೆಯ ಜೈವಿಕ ಅಂಶಗಳಿವೆ ಎಂದು ತಿಳಿದು ಬಂದಿದೆ. ಯುವತಿಯು ಇಬ್ಬರು ಪುರುಷರಿಂದ ಗರ್ಭಧರಿಸಿದ್ದು, ಆ ಎರಡೂ ಶಿಶುಗಳು ತುಂಬಾ ಹೋಲಿಕೆ ಹೊಂದಿವೆ ಎಂದು ತಿಳಿದು ಬಂದಿದೆ.
ಈ ವಿದ್ಯಮಾನವನ್ನು ವೈಜ್ಞಾನಿಕವಾಗಿ ಹೆಟೆರೊಪರೆಂಟಲ್ ಸೂಪರ್‌ಫೆಕಂಡೇಶನ್ ಎಂದು ಕರೆಯಲಾಗುತ್ತದೆ. ಅತ್ಯಂತ ಅಪರೂಪದಿದ್ದರೂ ಅಸಾಧ್ಯವಲ್ಲ ಎನ್ನಲಾಗಿದೆ. ಒಂದೇ ತಾಯಿಯ ಎರಡು ಕೋಶಗಳನ್ನು ವಿಭಿನ್ನ ಪುರುಷರು ಫಲವತ್ತಾಗಿಸಿದಾಗ ಇದು ಸಾಧ್ಯವಾಗುತ್ತದೆ. ಶಿಶುಗಳು ತಾಯಿಯ ಆನುವಂಶಿಕ ಅಂಶಗಳನ್ನು ಹಂಚಿಕೊಳ್ಳುತ್ತವೆ. ಆದರೆ ಅವು ವಿಭಿನ್ನ ಜರಾಯುಗಳಲ್ಲಿ ಬೆಳೆಯುತ್ತವೆ ಎಂದು ಯುವತಿಯ ವೈದ್ಯ ಡಾ ಟುಲಿಯೊ ಜಾರ್ಜ್ ಫ್ರಾಂಕೊ ಸ್ಥಳೀಯ ಸುದ್ದಿ ಔಟ್ಲೆಟ್ ಗ್ಲೋಬೋಗೆ ತಿಳಿಸಿದ್ದಾರೆ.

ವೈದ್ಯರು ಈ ಪ್ರಕರಣವು ಅತ್ಯಂತ ವಿರಳ ಪ್ರಕರಣವಾಗಿದೆ. ಇದನ್ನು ಕೋಟಿಯಲ್ಲಿ ಒಬ್ಬರ ಪರಿಸ್ಥಿತಿಯಾಗಿದೆ ಎಂದು ಕರೆದರು. ವರದಿಗಳ ಪ್ರಕಾರ, ಜಗತ್ತಿನಲ್ಲಿ ಕೇವಲ 20 ಇಂತಹ ಪ್ರಕರಣಗಳು ಇತರ ಹೆಟೆರೊಪರೆಂಟಲ್ ಸೂಪರ್‌ಫೆಕಂಡೇಶನ್‌ಗಳಿವೆ. ಶಿಶುಗಳು ಈಗ 16 ತಿಂಗಳ ವಯಸ್ಸಿನವರಾಗಿದ್ದಾರೆ ಮತ್ತು ತಂದೆಯೊಬ್ಬರು ಅವರನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಯುವ ತಾಯಿ ಹೇಳಿದ್ದಾರೆ.












Click it and Unblock the Notifications