ವೈರಲ್ ವಿಡಿಯೋ: ಚಾಲಕರಹಿತ ಕಾರು ನಿಲ್ಲಿಸಿದ ಪೊಲೀಸರು, ಟ್ವಿಟ್ಟರ್‌ನಲ್ಲಿ ಮೀಮ್

ಸ್ವಯಂ ಚಾಲಿತ ಟ್ಯಾಕ್ಸಿ ಸೇವೆಯಾದ ಕ್ರೂಸ್‌ಗೆ ಸೇರಿದ ವಾಹನವನ್ನು ಪೊಲೀಸರು ನಿಲ್ಲಿಸಿ ಅದನ್ನು ಪರಿಶೀಲನೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಇದನ್ನು ಮೀಮ್ ಮಾಡಿದ್ದಾರೆ.

ಪೊಲೀಸರು ಹೆಡ್‌ಲೈಟ್‌ ಇಲ್ಲದ ಕಾರಣ ಸ್ವಯಂ ಚಾಲಿತ ಟ್ಯಾಕ್ಸಿಯನ್ನು ನಿಲ್ಲಿಸಿದ್ದು, ಚಾಲಕರಿಲ್ಲದ ವಾಹನದ ಸುತ್ತಲೂ ಅಧಿಕಾರಿಗಳು ನಡೆದುಕೊಂಡು ಹೋಗುವುದನ್ನು ವೀಡಿಯೊ ತೋರಿಸುತ್ತದೆ. ಬಾಗಿಲನ್ನು ತೆರೆಯುವಂತೆಯೂ ಪೊಲೀಸರು ಹೇಳುವುದು ಕಂಡು ಬಂದಿದೆ.

ಪೊಲೀಸರು ಈ ಸ್ವಯಂ ಚಾಲಿತ ಕಾರನ್ನು ನಿಲ್ಲಿಸಿದಾಗ ಒಮ್ಮೆ ನಿಂತ ಈ ಕಾರು ತಕ್ಷಣ ಅಲ್ಲಿಂದ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಹೋಗುವಂತೆ ಮುಂದೆ ಚಲಿಸಿದ್ದು, ಬಳಿಕ ಕೊಂಚ ದೂರದಲ್ಲೇ ನಿಂತಿದೆ. ಆದರೆ ಈ ವಿಡಿಯೋ ನೋಡಿದ ನೆಟ್ಟಿಗರು ಕಾರು ಏನು ಡ್ರಿಕ್ ಆಂಡ್ ಡ್ರೈವ್ ಮಾಡುವ ಹಿನ್ನೆಲೆ ತಪ್ಪಿಸಿಕೊಳ್ಳುತ್ತಿದೆಯೇ ಎಂದು ವ್ಯಂಗ್ಯವಾಡಿದ್ದಾರೆ.

Twitterati Reactions to Driverless car pulled over by police in San Francisco

ಇನ್ನು ಪೊಲೀಸರು ಟ್ಯಾಕ್ಸಿಯ ಹಿಂದೆಯೇ ಹೋಗಿ ಅದನ್ನು ಪರಿಶೀಲನೆ ಮಾಡಿ, ಅದರ ಹೆಡ್‌ಲೈಟ್‌ಗಳನ್ನು ಮತ್ತೆ ಆನ್ ಮಾಡುವುದು ಹೇಗೆ ಎಂದು ನೋಡುವುದು ಈ ವಿಡಿಯೋದಲ್ಲಿ ಕಂಡುಬಂದಿದೆ. ಇದನ್ನು ಹಲವಾರು ಮಂದಿ ನೆಟ್ಟಿಗರು ಮೀಮ್ ಮಾಡಿದ್ದಾರೆ.

ಈ ಕಾರಿನೊಂದಿಗೆ ಸಂವಾದ ಮಾಡಲು ಪೊಲೀಸರಿಗೆ ತರಬೇತಿ!

ಈ ಬಗ್ಗೆ ಪ್ರತಿಕ್ರಿಯೆ ನೀಡಿ, "ಕಾರಿನ ಹೆಡ್‌ಲೈಟ್‌ಗಳನ್ನು ಆನ್ ಮಾಡದಿದ್ದಕ್ಕಾಗಿ ಪೊಲೀಸರು ಅದನ್ನು ನಿಲ್ಲಿಸಿದ್ದಾರೆ. ಆದರೆ ಈಗ ಸಮಸ್ಯೆ ಬಗೆಹರಿಸಲಾಗಿದೆ," ಎಂದು ದೃಢಪಡಿಸಿದ್ದಾರೆ. ಹಾಗೆಯೇ "ನಮ್ಮ ವಾಹನದೊಂದಿಗೆ ಹೇಗೆ ಮಾತನಾಡುವುದು, ವಾಹನಕ್ಕೆ ಹೇಗೆ ಮಾಹಿತಿ ನೀಡುವುದು, ಸೂಚನೆ ನೀಡುವುದು ಎಂಬ ಬಗ್ಗೆ ನಾವು ಪೊಲೀಸರಿಗೆ ಮಾಹಿತಿ ನೀಡುತ್ತೇವೆ. ಅಂತಹ ಸಂದರ್ಭದಲ್ಲಿ ಪೊಲೀಸರು ಕರೆ ಮಾಡಬೇಕಾದ ಫೋನ್ ಸಂಖ್ಯೆಯನ್ನು ಕೂಡಾ ನೀಡುತ್ತೇವೆ," ಎಂದು ತಿಳಿಸಿದ್ದಾರೆ.

Twitterati Reactions to Driverless car pulled over by police in San Francisco

ಕ್ರೂಸ್ ಪ್ರಕಾರ, ಕಾರು ನಿರೀಕ್ಷೆಯಂತೆ ವರ್ತಿಸಿದೆ. ಟ್ವೀಟ್ ನಲ್ಲಿ ಕಂಡಂತೆ, ಕಾರು ಪೊಲೀಸರಿಂದ ಓಡಿಹೋಗುತ್ತಿಲ್ಲ. ಆದರೆ 'ಟ್ರಾಫಿಕ್ ಸ್ಟಾಪ್‌ಗಾಗಿ ಹತ್ತಿರದ ಸುರಕ್ಷಿತ ಸ್ಥಳಕ್ಕೆ ಹೋಗಿ ನಿಂತಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಮಾನವರು ಆ ರೀತಿ ಮಾಡಿದರೆ ದಂಡ ಹಾಕಬಹುದು ಆದರೆ ಚಾಲಕನೇ ಇಲ್ಲದ ಕಾರಿಗೆ ದಂಡ ಹಾಕುವುದು ಹೇಗೆ ಹೇಳಿ?

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ಹೇಗಿದೆ ನೋಡಿ...!

"ಈ ಚಾಲಕರಿಲ್ಲದ ಕಾರು ಸಂಪೂರ್ಣವಾಗಿ ಕುಡಿದಂತೆ ಏಕೆ ವರ್ತಿಸುತ್ತಿದೆ,?" ಎಂದು ಓರ್ವ ಟ್ವಿಟ್ಟಿಗರು ಹೇಳಿದರೆ, "ಒಬ್ಬ ಅಧಿಕಾರಿ ನನ್ನನ್ನು ಎಳೆದುಕೊಂಡು ನಂತರ ನಾನು ಸುರಕ್ಷಿತ ಸ್ಥಳಕ್ಕೆ ತೆರಳಿದರೆ, ನಾನು ತಪ್ಪಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿ ನನ್ನನ್ನು ಬಂಧಿಸಿದೆ," ಎಂದು ಕಾರೇ ಹೇಳಿಕೊಳ್ಳುವಂತೆ ಇನ್ನೋರ್ವ ಟ್ವಿಟ್ಟಿಗರು ಟ್ವೀಟ್ ಮಾಡಿದ್ದಾರೆ. ಇನ್ನು ಕೆಲವರು, "ಆ ಕಾರನ್ನು ಏಕೆ ಬಂಧನ ಮಾಡಿಲ್ಲ. ಪೊಲೀಸರು ಗೊಂದಲಕ್ಕೊಳಗಾಗಿದ್ದಾರೆಯೇ? ಕಾರು ಗೊಂದಲಕ್ಕೀಡಾಗಿದೆ," ಎಂದು ಕೇಳಿದ್ದಾರೆ. "ಭವಿಷ್ಯಕ್ಕೆ ಸುಸ್ವಾಗತ. ಪೊಲೀಸರು ಡ್ರೈವರ್‌ಲೆಸ್ ಕಾರನ್ನು ನಿಲ್ಲಿಸಿದ್ದಾರೆ. ಅದು ಕುರಿ ಮರಿ ತರ ಓಡಿ ಹೋಗಿದೆ," ಎಂದು ಮತ್ತೊಂದು ಟ್ವೀಟ್ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+