ಟ್ವಿಟ್ಟರ್ ನಲ್ಲಿ ಅಕ್ಷರಗಳ ಮಿತಿಯಲ್ಲಿ ಏರಿಕೆ ಆಗಲಿದೆ

ಬೆಂಗಳೂರು, ನವೆಂಬರ್ 08 : ಟ್ವಿಟ್ಟರಲ್ಲಿ ನಮಗನ್ನಿಸಿದ್ದನ್ನು ಬರೆಯುವುದು ಒಂದು ಕಲೆಗಾರಿಕೆ ಮಾತ್ರವಲ್ಲ ಅದೊಂದು ಸವಾಲು ಕೂಡ. ಅತ್ಯಂತ ಕಡಿಮೆ ಪದಗಳಲ್ಲಿ ಪ್ರಭಾವಶಾಲಿಯಾಗಿ, ಸುತ್ತಿಬಳಸದೆ ನೇರವಾಗಿ ಹೇಳುವುದು ಎಲ್ಲರಿಗೂ ಒಲಿದುಬರುವಂಥ ಕಲೆಗಾರಿಕೆಯಲ್ಲ.

ಆದರೆ, ಟ್ವಿಟ್ಟರನ್ನು ನಿರಂತರವಾಗಿ ಬಳಸುವವರಿಗೆ, ಹೆಚ್ಚಾಗಿ ಕನ್ನಡದಂಥ ಭಾಷೆಯನ್ನು ಬಳಸುವವರಿಗೆ ಒಂದು ಸಂತಸದ ಸಂಗತಿಯಿದೆ. ಅದೇನೆಂದರೆ, ಟ್ವಿಟ್ಟರ್ ತನ್ನ ಕ್ಯಾರೆಕ್ಟರ್ (ಲಿಪಿ, ಅಕ್ಷರ, ಚಿಹ್ನೆ ಇತ್ಯಾದಿ) ಮಿತಿಯನ್ನು 140ರಿಂದ 280ಕ್ಕೆ ಏರಿಸಲಿದೆ. ಈ ಸಂಗತಿಯನ್ನು ಟ್ವಿಟ್ಟರ್ ಟ್ವಿಟ್ಟರಲ್ಲಿ ಪ್ರಕಟಿಸಿದೆ.

Twitter is expanding the character limit

ಕನ್ನಡದಂಥ ಒತ್ತಕ್ಷರಗಳಿರುವ ಭಾಷೆಗೆ ಟ್ವಿಟ್ಟರಲ್ಲಿ 140 ಅಕ್ಷರಗಳಲ್ಲಿ ವಿಷಯ ವೈವಿಧ್ಯತೆಯನ್ನು ಟ್ವಿಟ್ಟಿಗರಿಗೆ ತಿಳಿಯಪಡಿಸುವುದು ನಿಜಕ್ಕೂ ಸವಾಲಿನದಾಗಿತ್ತು. ಇನ್ನು ಮೇಲೆ ಸುವಿಸ್ತಾರವಾಗಿ ಅಲ್ಲದಿದ್ದರೂ ಇನ್ನಷ್ಟು ಮುಕ್ತವಾಗಿ ಮಾಹಿತಿಯನ್ನು ಬಿತ್ತರಿಸಲು ಅವಕಾಶ ಸಿಗಲಿದೆ.

ಇದನ್ನು ಸೆಪ್ಟೆಂಬರ್ ನಲ್ಲಿಯೇ ಪರೀಕ್ಷೆ ಮಾಡಲಾಗಿತ್ತು. ಆಗ ತಿಳಿದುಬಂದಿದ್ದೇನೆಂದರೆ, 140 ಅಕ್ಷರಗಳಿಗಿಂತ ಹೆಚ್ಚು ಬಳಸಲು ಅವಕಾಶ ನೀಡಿದಾಗ, ಟ್ವಿಟ್ಟಿಗರು ಹೆಚ್ಚುಹೆಚ್ಚಾಗಿ ಟ್ವೀಟ್ ಮಾಡಲು ಆರಂಭಿಸಿದರು ಮತ್ತು ತಮಗನಿಸಿದ್ದನ್ನು ಅಭಿವ್ಯಕ್ತಪಡಿಸಲು ಹೆಚ್ಚು ಉತ್ಸಾಹ ತೋರಿದರು.

ಈ ಕಾರಣದಿಂದಾಗಿಯೇ, ಸದ್ಯದಲ್ಲಿಯೇ 140 ಅಕ್ಷರಗಳ ಮಿತಿಯನ್ನು 280ಕ್ಕೆ ಏರಿಸುವುದಾಗಿ ಟ್ವಿಟ್ಟರ್ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+