• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕ ಕಂಡು ಹಿಡಿದಿದ್ದು ಕೊಲಂಬಸ್ ಅಲ್ಲವಂತೆ!

By Mahesh
|

ಇಸ್ತಾಂಬುಲ್, ನ.17: ಅಮೆರಿಕದ ಭೂಭಾಗಗಳನ್ನು ಕೊಲಂಬಸ್ ಕಂಡು ಹಿಡಿದಿದ್ದು ಎಂದು ಇತಿಹಾಸ ಪಾಠದಲ್ಲಿ ಕಲಿತಿರಬಹುದು. ಅದರೆ, ಅಮೆರಿಕವನ್ನು 12ನೇ ಶತಮಾನದಲ್ಲಿ ಮುಸ್ಲಿಮರು ಪತ್ತೆ ಹಚ್ಚಿದ್ದರು ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯೀಬ್ ಎರ್ದುಗಾನ್ ಹೇಳಿದ್ದಾರೆ.

ನಾವಿಕ ಕೊಲಂಬಸ್ ಅಮೆರಿಕ ನೆಲಕ್ಕೆ ಪಾದಾರ್ಪಣೆ ಮಾಡುವುದಕ್ಕೆ ಸುಮಾರು ಮೂರು ಶತಮಾನಗಳಷ್ಟು ಮೊದಲೇ ಮುಸ್ಲಿಮರು ಅಮೆರಿಕವನ್ನು ಪತ್ತೆಹಚ್ಚಿದ್ದರು ಎಂದು ಟರ್ಕಿಯ ಅಧ್ಯಕ್ಷ ಎರ್ದುಗಾನ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಲ್ಯಾಟಿನ್ ಅಮೆರಿಕ ಹಾಗೂ ಮುಸ್ಲಿಮರ ನಡುವಿನ ಬಾಂಧವ್ಯವು ಸುಮಾರು 12ನೆ ಶತಮಾನಕ್ಕೂ ಹಿಂದಿನದು. ಮೊದಲಿಗೆ ಮುಸ್ಲಿಮರು ಅಮೆರಿಕವನ್ನು 1178ರಲ್ಲಿ ಗುರುತಿಸಿದ್ದರು; ಕೊಲಂಬಸ್ ಅಲ್ಲ ಎಂದು ಟರ್ಕಿಯ ಅಧ್ಯಕ್ಷ ಲ್ಯಾಟಿನ್ ಅಮೆರಿಕದ ಮುಸ್ಲಿಂ ನಾಯಕರಿಗಾಗಿ ಏರ್ಪಡಿಸಲಾಗಿದ್ದ ಇಸ್ತಾಂಬುಲ್ ಶೃಂಗಸಭೆಯಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

1178ರ ವೇಳೆಗೆ ಮುಸ್ಲಿಂ ನಾವಿಕರು ಅಮೆರಿಕ ತಲುಪಿದ್ದರು. ಕ್ಯೂಬಾದ ಪೂರ್ವ ಕರಾವಳಿಯ ಬೆಟ್ಟವೊಂದರಲ್ಲಿ ಮಸೀದಿಯೊಂದು ನೆಲೆಗೊಂಡಿತ್ತೆಂದು ಕೊಲಂಬಸ್ ಉಲ್ಲೇಖಿಸಿದ್ದನು' ಎಂದು ಎರ್ದುಗಾನ್ ಅವರು ತಮ್ಮ ಭಾಷಣದಲ್ಲಿ ವಿವರಿಸಿದ್ದಾರೆ.

ಚರಿತ್ರೆಯ ಪುಸ್ತಕಗಳ ಪ್ರಕಾರ, ಕೊಲಂಬಸ್ 1492ರಲ್ಲಿ ಅಮೆರಿಕ ಖಂಡದ ಮೇಳೆ ಪಾದಾರ್ಪಣೆ ಮಾಡುವ ಮೂಲಕ ಭಾರತಕ್ಕೆ ಒಂದು ಹೊಸ ಸಮುದ್ರ ಮಾರ್ಗವನ್ನು ಪತ್ತೆಹಚ್ಚಿರುವುದಾಗಿ ತಿಳಿದು ಬರುತ್ತದೆ. ಅದರೆ, ಟರ್ಕಿ ಅಧ್ಯಕ್ಷರ ಹೇಳಿಕೆ ಇತಿಹಾಸವನ್ನು ಪುನರ್ ಪರಿಶೀಲಿಸುವಂತೆ ಮಾಡಿದೆ.

ಜಿನೇವಾದ ಅನ್ವೇಷಕ ಕೊಲಂಬಸ್ ಪತ್ತೆಹಚ್ಚಿದ್ದ ಮಸೀದಿ ಇತ್ತೆನ್ನಲಾದ ತಾಣದಲ್ಲೇ ಹೊಸ ಮಸೀದಿಯೊಂದನ್ನು ನಿರ್ಮಿಸಲು ಅಂಕಾರ ಸಿದ್ಧತೆ ನಡೆಸುತ್ತಿರುವುದಾಗಿ ಟರ್ಕಿಯ ಅಧ್ಯಕ್ಷ ತಿಳಿಸಿದ್ದಾರೆ. 1936ರಲ್ಲಿ ಪ್ರಕಟಗೊಂಡಿದ್ದ ವಿವಾದಾತ್ಮಕ ಲೇಖನವೊಂದರಲ್ಲಿ ಇತಿಹಾಸಕಾರ ಯೂಸುಫ್ ಮರೂಹ್, ಕ್ಯೂಬಾದಲ್ಲಿ ಮಸೀದಿಯೊಂದು ಇದ್ದುದರ ಬಗ್ಗೆ ಕೊಲಂಬಸ್ ಡೈರಿಯೊಂದರಲ್ಲಿ ದಾಖಲಿಸಿದ್ದನು ಎಂದು ತಿಳಿಸಿದ್ದರು. ಟರ್ಕಿ ಅಧ್ಯಕ್ಷರ ಹೇಳಿಕೆ ಭಾರಿ ಚರ್ಚೆಗೊಳಗಾಗಿದ್ದು, ಅಮೆರಿಕದ ಬಹುತೇಕ ನಿವಾಸಿಗಳು ಇದೊಂದು ದೊಡ್ಡ ಜೋಕ್ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Turkish President Recep Tayyip Erdogan claims that America was discovered by Muslims in the 12th century — there’s even proof via none other than Christopher Columbus, who supposedly wrote in his journal about a mosque on a hill in Cuba.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more