Turkey Earthquake: ತಂದೆ-ತಾಯಿ ಸಾವು- ಅವಶೇಷಗಳಡಿಯಲ್ಲಿ ಜನಿಸಿದ ಪವಾಡ ಮಗು!
ಟರ್ಕಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಇಡೀ ವಿಶ್ವವೇ ಮರುಕ ವ್ಯಕ್ತಪಡಿಸಿದೆ. ಈವರೆಗೆ ಸಾವಿನ ಸಂಖ್ಯೆ 6000ಕ್ಕೂ ಹೆಚ್ಚಾಗಿದೆ. ಈ ನಡುವೆ ಒಂದು ಪವಾಡ ನಡೆದಿದೆ. ಟರ್ಕಿ-ಸಿರಿಯಾ ಭೂಕಂಪದಲ್ಲಿ ಕುಸಿದ ಕಟ್ಟಡಗಳ ಅವಶೇಷಗಳಡಿಯಲ್ಲಿ ತಂದೆ-ತಾಯಿ ಸಾವನ್ನಪ್ಪಿದ್ದು ಹೆಣ್ಣು ಮಗುವೊಂದು ಜನಿಸಿದೆ. ಪೋಷಕರಿಗೆ ಬದುಕಲು ಸಾಧ್ಯವಾಗದೆ ಮಗು ಅನಾಥವಾಗಿದೆ. ನವಜಾತ ಶಿಶು ಮತ್ತು ಅದರ ಕುಟುಂಬದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಅವಶೇಷಗಳಡಿಯಲ್ಲಿ ಆಗಷ್ಟೃ ಜನಿಸಿದ ಮಗು ಪತ್ತೆಯಾಗಿದೆ.
ಭೂಕಂಪದ ಸಮಯದಲ್ಲಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಭೂಕಂಪನದ ಸಮಯದಲ್ಲಿ ಕಟ್ಟಡಗಳು ಕುಸಿದ ಪರಿಣಾಮ ತಾಯಿ ಕೊನೆ ಉಸಿರೆಳೆದಿದ್ದು ಹುಟ್ಟಿದ ಮಗು ಜೀವಂತವಾಗಿದೆ. ವ್ಯಕ್ತಿಯೋರ್ವ ನವಜಾತ ಶಿಶುವನ್ನು ಎತ್ತಿಕೊಂಡು ಓಡಿ ಬರುತ್ತಿರುವುದನ್ನು ಕಾನಬಹುದು.
ಈಶಾನ್ಯ ಸಿರಿಯಾದ ಆಫ್ರಿನ್‌ನ ಗ್ರಾಮಾಂತರದಲ್ಲಿರುವ ಜೆಂಡರೆಸ್‌ನಲ್ಲಿ ಕತ್ತಲೆ ಆವರಿಸಿದೆ. ಮಳೆ ಮತ್ತು ಚಳಿ ಆವರಿಸಿದ್ದರಿಂದ ನವಜಾತ ಶಿಶು ಮತ್ತು ಅವರ ಕುಟುಂಬವನ್ನು ರಕ್ಷಿಸಲು ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಆದರೆ ಪೋಷಕರು ಭೂಕಂಪದ ಪ್ರಭಾವದಿಂದ ಬದುಕುಳಿಯಲಿಲ್ಲ ಎನ್ನುವುದು ತಿಳಿದು ಬಂದಿದೆ.

ಸೋಮವಾರ ಮುಂಜಾನೆ 7.8 ತೀವ್ರತೆಯ ಪ್ರಬಲ ಭೂಕಂಪದಿಂದ ಟರ್ಕಿ ಮತ್ತು ಸಿರಿಯಾ ತತ್ತರಿಸಿವೆ. ಈ ಮಾರಣಾಂತಿಕ ನೈಸರ್ಗಿಕ ವಿಕೋಪದಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಕಟ್ಟಡಗಳು ನೆಲಸಮವಾಗಿವೆ. ಆರಂಭಿಕ ಭೂಕಂಪದ ನಂತರ 7.7 ತೀವ್ರತೆಯ ಭೂಕಂಪ ಎರಡನೆಯ ಬಾರಿಗೆ ಸಂಭವಿಸಿದೆ. ಭೂಕಂಪದ ತೀವ್ರತೆಗೆ ಪೂರ್ವ ಟರ್ಕಿಯನ್ನು ನಲುಗಿಸಿದೆ. ಬದುಕುಳಿದವರನ್ನು ಹುಡುಕುವ ಕಾರ್ಯ ಇಮದಿಗೂ ಮುಂದುವರೆದಿದೆ. ಹೀಗಾಗಿ ಸಾವಿನ ಸಂಖ್ಯೆ ಎಹಚ್ಚಾಗುವ ಸಾಧ್ಯತೆ ಇದೆ.












Click it and Unblock the Notifications