Turkey earthquake: ಟರ್ಕಿ ಭೂಕಂಪದಿಂದ ಸಾವಿನ ಸಂಖ್ಯೆ 1,300 ಕ್ಕೇರಿಕೆ- ನೂರಾರು ಜನ ಕಾಣೆ!
ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಿಂದಾಗಿ 1300 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ನೂರಾರು ಮಂದಿ ಕಾಣೆಯಾಗಿದ್ದಾರೆ.
ಟರ್ಕಿಯಲ್ಲಿ 7.6 ರ ತೀವ್ರತೆಯ ಮತ್ತೊಂದು ಪ್ರಬಲ ಭೂಕಂಪ ಸಂಭವಿಸಿದ್ದು ಸಾವು ನೋವುಗಳು ಅಧಿಕವಾಗಿವೆ. ಬೆಳಗಿನ ಜಾವ ಟರ್ಕಿ ಮತ್ತು ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು 1300 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 3.54ಕ್ಕೆ ಭೂಕಂಪನದ ಅನುಭವವಾಗಿದೆ. ಇದಾದ ಗಂಟೆಗಳ ಬಳಿಕ ದಕ್ಷಿಣ ಟರ್ಕಿಯ ಕಹ್ರಮನ್ಮಾರಾಸ್ ಪ್ರಾಂತ್ಯದ ಎಲ್ಬಿಸ್ತಾನ್ ಜಿಲ್ಲೆಯಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿದ್ದು ಜನರನ್ನು ಬೆಚ್ಚಿ ಬೀಳಿಸಿದೆ. ಭೂಕಂಪದ ತೀವ್ರತೆಗೆ ಹಲವಾರು ಬೃಹತ್ ಕಟ್ಟಡಗಳು ನೆಲಕ್ಕಚ್ಚಿದ್ದು ಅವಶೇಷಗಳ ಅಡಿ ಸಿಲುಕಿದರ ಪತ್ತೆ ಕಾರ್ಯ ಮುಂದುವರೆದಿದೆ.
ನೂರಾರು ಜನರು ಇನ್ನೂ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗುತ್ತಿದೆ. ರಕ್ಷಣಾ ಕಾರ್ಯಕರ್ತರು ಪ್ರದೇಶದಾದ್ಯಂತ ಅವಶೇಷಗಳ ಅಡಿ ಸಿಲುಕಿದವರನ್ನು ಹೊರ ತೆಗೆಯುತ್ತಿರುವುದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಶೀತ, ಮಳೆ ಮತ್ತು ಹಿಮಭರಿತ ಚಳಿಯನ್ನು ಎದುರಿಸುತ್ತದ್ದ ಜನರಿಗೆ ಪ್ರಬಲ ಭೂಕಂಪ ಭೀತಿಯನ್ನು ಹುಟ್ಟಿಸಿದೆ.

ಪಾರುಗಾಣಿಕಾ ಕಾರ್ಯಕರ್ತರು ಮತ್ತು ಅನೇಕ ನಗರಗಳಲ್ಲಿನ ನಿವಾಸಿಗಳು ಬದುಕುಳಿದವರಿಗಾಗಿ ಹುಡುಕುತ್ತಿದ್ದಾರೆ. ಭೂಕಂಪನದಲ್ಲಿ ಟರ್ಕಿಯ ಸಿರಿಯಾದಲ್ಲಿ ಆಸ್ಪತ್ರೆಯೊಂದು ಕುಸಿದುಬಿದ್ದಿದೆ ಮತ್ತು ನವಜಾತ ಶಿಶುಗಳು ಸೇರಿದಂತೆ ರೋಗಿಗಳು ಅವಶೇಷದಲ್ಲಿ ಸಿಲುಕಿದ್ದು ಅವರ ಪತ್ತೆ ಕೆಲಸ ನಡೆದಿದೆ. ಸಿರಿಯಾದಲ್ಲಿ ಬೆರಳೆಣಿಕೆಯ ಸೌಲಭ್ಯಗಳಿಂದ ಸ್ಥಳಾಂತರಿಸಲಾಯಿತು.
My sympathies to the people of Turkey who suffered in the horrible earthquake. It is a devastating tragedy. pic.twitter.com/Dn7ErruNfx
— Anton Gerashchenko (@Gerashchenko_en) February 6, 2023
ಟರ್ಕಿಯಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತವೆ. 1999 ರಲ್ಲಿ ವಾಯುವ್ಯ ಟರ್ಕಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪಗಳಲ್ಲಿ ಸುಮಾರು 18,000 ಮಂದಿ ಸಾವನ್ನಪ್ಪಿದರು.












Click it and Unblock the Notifications