• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೋಂಗಾ ಸಾಗರದಾಳ ಜ್ವಾಲಾಮುಖಿ ಸ್ಫೋಟ: ಅಮೆರಿಕಾ ವೆಸ್ಟ್ ಕೋಸ್ಟ್‌ಗೆ ಸುನಾಮಿ ಎಚ್ಚರಿಕೆ

|
Google Oneindia Kannada News

ಟೋಂಗಾ ಜನವರಿ 16: ಪೆಸಿಫಿಕ್ ಸಾಗರದ ಟೊಂಗಾ ಬಳಿ ಸಾಗರದಾಳದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಅಮೆರಿಕಾ ವೆಸ್ಟ್ ಕೋಸ್ಟ್‌ಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಸ್ಪೋಟದ ತೀವ್ರತೆಗೆ 20 ಕಿಲೋಮೀಟರ್ ಎತ್ತರಕ್ಕೆ ಬೂದಿ ಹಾರಿದ್ದು, ಆಕಾಶವನ್ನು ಬೂದು ಮೋಡಗಳು ಆವರಿಸಿವೆ. ಕರಾವಳಿ ಪ್ರದೇಶದ ನಿವಾಸಿಗಳು ತಮ್ಮ ಮನೆಗಳನ್ನು ತೊರೆದು ಎತ್ತರದ ಪ್ರದೇಶಗಳಿಗೆ ತಲುಪಲು ಹಲವು ದೇಶಗಳಲ್ಲಿ ಎಚ್ಚರಿಕೆ ನೀಡಲಾಗುತ್ತಿದೆ. ಟೊಂಗಾ ರಾಜಧಾನಿ ಹಾಗೂ ಅಮೆರಿಕನ್ ಸಮೋವಾದಲ್ಲಿ ಸುನಾಮಿ ಅಲೆಗಳು ಕಾಣಿಸಿವೆ ಎಂದು ಅಮೆರಿಕ ಮೂಲದ ಸುನಾಮಿ ನಿಗಾ ಕೇಂದ್ರ ತಿಳಿಸಿದೆ.

ಸ್ಥಳೀಯ ಕಾಲಮಾನ ಬೆಳಿಗ್ಗೆ 4.10ರ ಸುಮಾರಿಗೆ ಹಂಗಾ ಟೊಂಗಾ- ಹಂಗಾ ಹಾಪೈ ನೀರಿನಡಿಯ ಅಗ್ನಿಪರ್ವತ ಸ್ಫೋಟಿಸಿದೆ. ಟೊಂಗಾ ರಾಜಧಾನಿ ನಕುಅಲೊಫಾದ ಉತ್ತರ ಭಾಗದಿಂದ ಸುಮಾರು 65 ಕಿಮೀ ದೂರದಲ್ಲಿ ಇರುವ ಅಗ್ನಿಪರ್ವತ, 1.2 ಮೀಟರ್ ಎತ್ತರದ ಸುನಾಮಿಗೆ ಕಾರಣವಾಗಿದೆ ಎಂದು ಆಸ್ಟ್ರೇಲಿಯಾದ ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ಸನ್ನಿವೇಶದ ಮೇಲೆ ನಿಗಾ ಇರಿಸಲಾಗಿದೆ. ಆದರೆ ಆಸ್ಟ್ರೇಲಿಯಾ ಮುಖ್ಯ ಭೂ ಪ್ರದೇಶ, ಅದರ ದ್ವೀಪ ಹಾಗೂ ಇತರೆ ಭಾಗಗಳಿಗೆ ಯಾವುದೇ ಸುನಾಮಿ ಎಚ್ಚರಿಕೆ ಇಲ್ಲ ಎಂದು ಸಂಸ್ಥೆ ತಿಳಿಸಿದೆ. 1.2-ಮೀಟರ್ ಅಲೆಯು ದೂರದ ದಕ್ಷಿಣ ದ್ವೀಪವಾದ ಅಮಾಮಿ ಒಶಿಮಾದಲ್ಲಿ ಅಪ್ಪಳಿಸಿದೆ ಮತ್ತು ಜಪಾನ್‌ನ ಪೆಸಿಫಿಕ್ ಕರಾವಳಿಯ ಇತರ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದ ಅಲೆಗಳು ಕಂಡು ಬಂದಿವೆ.

ದ್ವೀಪಸಮೂಹವಾದ ಟೊಂಗಾ ದ್ವೀಪಗಳಲ್ಲಿ ಜನರು ಎತ್ತರದ ಅಲೆಗಳನ್ನು ಕಂಡಿದ್ದಾರೆ. ಸ್ಥಳೀಯ ನಿವಾಸಿ ಮೇರೆ ತೌಫಾ ಅವರು ತಮ್ಮ ಮನೆಯಲ್ಲಿ ಆಹಾರ ತಯಾರಾಗುತ್ತಿರುವಾಗ ಸಮುದ್ರದೊಳಗಿನ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ವೇಳೆ ನೀರು ತನ್ನ ಮನೆಗೆ ನುಗ್ಗಿದೆ ಎಂದು ಹೇಳಿದರು. "ಅದು ಬೃಹತ್ ಪ್ರಮಾಣದಲ್ಲಿತ್ತು, ನೆಲ ನಡುಗಿತು, ನಮ್ಮ ಮನೆ ನಡುಗುತ್ತಿತ್ತು. ಶಬ್ದದ ನಂತರ ಅಲೆಗಳು ಅಪ್ಪಳಿಸಿವೆ. ಹತ್ತಿರದಲ್ಲಿ ಬಾಂಬ್‌ಗಳು ಸ್ಫೋಟಗೊಳ್ಳುತ್ತಿವೆ ಎಂದು ನನ್ನ ಕಿರಿಯ ಸಹೋದರ ಭಾವಿಸಿದ್ದರು" ಎಂದು ತೌಫಾ ಸ್ಟಫ್ ನ್ಯೂಸ್ ವೆಬ್‌ಸೈಟ್‌ಗೆ ತಿಳಿಸಿದರು.

ನಿಮಿಷಗಳ ನಂತರ ಅವರ ಮನೆಗೆ ನೀರು ತುಂಬಿತು ಮತ್ತು ಪಕ್ಕದ ಮನೆಯ ಗೋಡೆ ಕುಸಿಸಿರುವುದು ಕಂಡು ಬಂದಿದೆ. ಇದು ಸುನಾಮಿ ಎಂದು ನಮಗೆ ತಕ್ಷಣ ತಿಳಿಯಿತು. ಜನರು ಸುರಕ್ಷತೆಗಾಗಿ ಕಿರುಚಾಡಿದರು. ಪ್ರತಿಯೊಬ್ಬರೂ ಎತ್ತರದ ಪ್ರದೇಶಗಳಿಗೆ ಓಡಿ ಹೋದರು. ತಕ್ಷಣ ಪೊಲೀಸ್ ಬೆಂಗಾವಲು ಪಡೆಯು ಕರಾವಳಿಯಿಂದ ದೂರದಲ್ಲಿರುವ ವಿಲ್ಲಾಕ್ಕೆ ಕರೆದೊಯ್ಯಲಾಯಿತು ಎಂದು ವರದಿಯಾಗಿದೆ.

ಜ್ವಾಲಾಮುಖಿಯ ಸ್ಫೋಟ ಕನಿಷ್ಠ ಎಂಟು ನಿಮಿಷಗಳ ಕಾಲ ನಡೆದಿದೆ. ಹಲವಾರು ಕಿಲೋಮೀಟರ್ಗಳಷ್ಟು ಗಾಳಿಯಲ್ಲಿ ಅನಿಲ, ಬೂದಿ ಮತ್ತು ಹೊಗೆ ಕಾಣಿಸಿಕೊಂಡಿದೆ.

ಅಮೇರಿಕನ್ ಸಮೋವಾ, ನ್ಯೂಜಿಲೆಂಡ್, ಫಿಜಿ, ವನವಾಟು, ಚಿಲಿ ಮತ್ತು ಆಸ್ಟ್ರೇಲಿಯಾಗಳಿಗೆ ಸುನಾಮಿ ಎಚ್ಚರಿಕೆಗಳನ್ನು ನೀಡಲಾಯಿತು. ಸಿಡ್ನಿ ಸೇರಿದಂತೆ ಅನೇಕ ಕರಾವಳಿ ತೀರಕ್ಕೆ ಸುನಾಮಿ ಅಲೆಗಳು ಅಪ್ಪಳಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಸುತ್ತಮುತ್ತಲಿನ ನ್ಯೂ ಸೌತ್ ವೇಲ್ಸ್ ರಾಜ್ಯದ ಜನರು ನೀರಿನಿಂದ ಹೊರಬರಲು ಮತ್ತು ತಕ್ಷಣ ನೀರಿನ ಅಂಚಿನಿಂದ ದೂರವಿರಲು ಯುಎಸ್ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರವು ಎಚ್ಚರಿಕೆ ನೀಡಿದೆ.


ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರದ ಪ್ರಕಾರ ಕ್ಯಾಲಿಫೋರ್ನಿಯಾದಿಂದ ಅಲಾಸ್ಕಾದ ಅಲ್ಯೂಟಿಯನ್ ದ್ವೀಪಗಳ ತುದಿಯವರೆಗೆ, ಹವಾಯಿಯಲ್ಲಿ ಸುನಾಮಿ ಅಲೆಗಳು ಸಣ್ಣ ಪ್ರವಾಹವನ್ನು ಪ್ರಚೋದಿಸುತ್ತವೆ. ಮೊದಲ ಅಲೆಯು ದೊಡ್ಡದಾಗಿರಬಾರದು ಎಂದು US ವೆಸ್ಟ್ ಕೋಸ್ಟ್‌ ಎಚ್ಚರಿಕೆ ನೀಡಿದೆ. ಕೆನಡಾ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಬೀಚ್‌ಗಳಿಂದ ದೂರವಿರಲು ಜನರಿಗೆ ಸೂಚಿಲಾಗಿದೆ. ಆಮ್ಲೀಯ ಮಳೆಯ ಸಂದರ್ಭದಲ್ಲಿ ನೀರಿನ ಸಂಗ್ರಹ ಟ್ಯಾಂಕ್‌ಗಳನ್ನು ಮುಚ್ಚಲು ಫಿಜಿಯನ್ ಅಧಿಕಾರಿಗಳು ನಿವಾಸಿಗಳಿಗೆ ಎಚ್ಚರಿಕೆ ನೀಡಿದರು. ಟೊಂಗಾ ಪಬ್ಲಿಕ್ ಸರ್ವಿಸ್ ಕಮಿಷನ್‌ನ ವಿಕ್ಟೋರಿನಾ ಕಿಯೋವಾ ಅವರು ಶುಕ್ರವಾರ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು, ಕರಾವಳಿ ಪ್ರದೇಶದಲ್ಲಿ ವಾಸಿಸುವ ಜನರಿಗೆ ಸ್ಥಳಗಳಿಂದ ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು.

English summary
An underwater volcano in the South Pacific erupted Saturday with a stunning blast, sending tsunami waves onto nearby Tonga and to the north in Japan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X