ಕೆಲಸದಿಂದ ತೆಗೆಯಲು ಡೊನಾಲ್ಡ್ ಟ್ರಂಪ್ ಆದೇಶ, ಅಮೆರಿಕ ಅಧ್ಯಕ್ಷರ ನಿರ್ಧಾರಕ್ಕೆ ಭಾರಿ ವಿರೋಧ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಹಲವಾರು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಇದು ಅಮೆರಿಕದಲ್ಲಿ ಪರ & ವಿರೋಧದ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಆದರೆ ಇದೆಲ್ಲವನ್ನೂ ಮೀರಿ ಅಮೆರಿಕದ ಸರ್ಕಾರಿ ನೌಕರರ ಕೆಲಸಕ್ಕೆ ಕುತ್ತು ಬಂದಿರುವ ವಿಚಾರ ಇದೀಗ ಜಾಗತಿಕ ಮಟ್ಟದಲ್ಲೂ ದೊಡ್ಡ ಸದ್ದು ಮಾಡುತ್ತಿದೆ. ಈ ಮೂಲಕ ಜಗತ್ತಿನ ಶಕ್ತಿಶಾಲಿ ದೇಶದ ಪ್ರಥಮ ಪ್ರಜೆ ಕೈಗೊಂಡಿರುವ ನಿರ್ಧಾರಕ್ಕೆ ಜನ ಏನು ಹೇಳುತ್ತಿದ್ದಾರೆ ಗೊತ್ತಾ?

ಅಮೆರಿಕ ಶ್ರೀಮಂತ ದೇಶ ಅಂತಾ ಹೊರಗೆ ಬಿಲ್ಡಪ್ ಕೊಡುವುದು ಅಷ್ಟೇ, ಆದರೆ ಒಳಗೊಳಗೆ ಈ ದೇಶ ನೊಂದು ಬೆಂದು ಹೋಗಿದೆ. ಹೀಗೆ ಈ ದೇಶ ನರಳುತ್ತಿರುವ ಕಾರಣಕ್ಕೆ ಆರ್ಥಿಕವಾಗಿ ಬೀದಿಗೆ ಬರುವ ಆತಂಕ ಕೂಡ ಎದುರಾಗಿದೆ. ಇದನ್ನು ಸರಿ ಮಾಡುವ ಉದ್ದೇಶಕ್ಕೆ ಸಾವಿರ ಸಾವಿರ ಉದ್ಯೋಗ ಕಡಿತಕ್ಕೆ ಅಮೆರಿಕ ಸರ್ಕಾರ ನಿರ್ಧಾರ ಮಾಡಿದೆ. ಈ ವಿಚಾರ ಎಲ್ಲೆಡೆಯೂ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ. ಕೆಲವರು ಟ್ರಂಪ್ ನಿರ್ಧಾರ ಸಮರ್ಥಿಸಿಕೊಂಡರೆ, ಈ ಸಮಯದಲ್ಲೇ ಇನ್ನೂ ಕೆಲವರು ಟ್ರಂಪ್ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Trump s Layoffs Plan Global Reactions and Trends

ನೌಕರರ ಕೆಲಸಕ್ಕೆ ಬಂತಾ ಕುತ್ತು?

ಅಮೆರಿಕದ ಸರ್ಕಾರಿ ನೌಕರರು ಮನೆಗೆ ಹೋಗಲು ರೆಡಿಯಾಗಿದ್ದು, ಅಮೆರಿಕದಲ್ಲಿ ಬರೋಬ್ಬರಿ 10,000 ಸರ್ಕಾರಿ ನೌಕರರಿಗೆ ಗೇಟ್ ಪಾಸ್ ಗ್ಯಾರಂಟಿ ಆಗಿದೆ. ಒಟ್ಟು 23 ಲಕ್ಷ ಸರ್ಕಾರಿ ನೌಕರರ ಪೈಕಿ ಹತ್ತಾರು ಸಾವಿರ ಸರ್ಕಾರಿ ನೌಕರರು ಸ್ವಯಂ ನಿವೃತ್ತಿಗೆ ಒಪ್ಪಿದ್ದಾರೆ. ಇದರ ಜೊತೆಯಲ್ಲೇ 10,000 ಸರ್ಕಾರಿ ನೌಕರರಿಗೆ ಗೇಟ್ ಪಾಸ್ ನೀಡಲು ಟ್ರಂಪ್ ಆಡಳಿತ ಸಜ್ಜಾಗಿದೆ. ಈ ಮೂಲಕ ತನ್ನ ತಲೆ ಮೇಲೆ ಇರುವ ಆರ್ಥಿಕ ಭಾರ ಕಡಿಮೆ ಮಾಡಿಕೊಳ್ಳಲು ಟ್ರಂಪ್ ಸರ್ಕಾರ ಇದೀಗ ಸಜ್ಜಾಗಿದೆ. ಆದರೆ ಈ ವಿಚಾರ ಅಮೆರಿಕದಲ್ಲಿ ಮತ್ತಷ್ಟು ಕಿಚ್ಚು ಹೊತ್ತಿಸುವ ಆತಂಕವನ್ನು ಈಗ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+